ಸುದ್ದಿಮೂಲ ವಾರ್ತೆ ರಾಯಚೂರು, ಅ.20:
ದೀಪಾವಳಿ ಹಿನ್ನೆೆಲೆಯಲ್ಲಿ ಜಗಮಗಿಸುವ ಆಕಾಶ ಬುಟ್ಟಿಿಘಿ, ಹಲವು ಬಗೆಯ ಪ್ರಣತಿ, ಪಟಾಕಿ ಹಾಗೂ ಪೂಜಾ ಸಾಮಾಗ್ರಿಿ ಬೆಲೆ ಏರಿಕೆ ಮಧ್ಯೆೆಯೂ ಖರೀದಿಯಲ್ಲಿ ಸಾರ್ವಜನಿಕರು ತೊಡಗಿಸಿಕೊಂಡಿದ್ದು ರಾಯಚೂರಿನ ಮಾರುಕಟ್ಟೆೆಯಲ್ಲಿ ಕಂಡು ಬಂತು.
ಮಾರುಕಟ್ಟೆೆಯಲ್ಲಿ ಕಳೆದ ಎರಡು ದಿನಗಳಿಂದ ದೀಪಾವಳಿ ಹಬ್ಬದ ವಹಿವಾಟು ಸಾಗಿದೆ. ಜಿಎಸ್ಟಿ ಇಳಿಕೆಯಿಂದ ಈ ಬಾರಿ ಸಾಮಾಗ್ರಿಿಗಳ ಸಾಗಣೆ ಮೇಲೆ ಬಾಡಿಗೆ ಕೊಂಚ ಮಟ್ಟಿಿಗೆ ತಗ್ಗಿಿ ಅತ್ತ ಮಾರಾಟಗಾರರಿಗೆ ಇತ್ತ ಖರೀದಿಸುವ ಗ್ರಾಾಹಕರಿಗೂ ಬೆಲೆ ಏರಿಕೆ ಕಳೆದ ಬಾರಿಗಿಂತ ತುಸು ಉತ್ತಮ ಎನ್ನುವ ಮಾತಿದೆ.
ರಾಯಚೂರು ಮಾರುಕಟ್ಟೆೆಯಲ್ಲಿ ಹಲವು ಚಿತ್ತಾಾರದ ಆಕಾಶ ಬುಟ್ಟಿಿಗಳು, ಬಗೆ-ಬಗೆಯ ದೀಪ ಹಚ್ಚುವ ಪ್ರಣತಿಗಳ ಮಾರಾಟಕ್ಕೆೆ ಆಗಮಿಸಿದ ರಾಜಸ್ಥಾಾನ ಮತ್ತು ಸ್ಥಳೀಯ ವ್ಯಾಾಪಾರಿಗಳಿಗೆ ನಷ್ಟದ ಮಧ್ಯೆೆಯೂ ತುಸು ಖುಷಿ ಕಾಣುತ್ತಿಿದ್ದಾಾರೆ.
ಒಂದು ಪ್ರಣತಿಗೆ ಗಾತ್ರದ ಮೇಲೆ ದರ ನಿಗದಿ ಪಡಿಸಿದ್ದು 12 ಪ್ರಣತಿಗೆ ಕನಿಷ್ಟ 45 ರಿಂದ ಕನಿಷ್ಟ 150 ರೂಪಾಯಿವರೆಗೆ ದರ ಇದ್ದರೆ, ಆಕಾಶ ಬುಟ್ಟಿಿಗೂ ಗಾತ್ರದ ಮೇಲೆ ಕನಿಷ್ಟ 100 ರೂ.ನಿಂದ 400 ರೂ.ವರೆಗೆ ಬೆಲೆ ಇತ್ತುಘಿ.
ಹಿರಿಯರ ದೀಳಿಗೆ ಆಚರಿಸಬೇಕೆಂಬ ಸಂಪ್ರದಾಯದ ಹಿನ್ನೆೆಲೆಯಲ್ಲಿ ಬೆಲೆ ಹೆಚ್ಚಿಿದ್ದರೂ, ಖರೀದಿಯಲ್ಲಿ ಸಾರ್ವಜನಿಕರು ನಿರತವಾಗಿದ್ದರು.
ಪ್ರಣತಿಗಳ ಖರೀದಿಗೆ ಆಸಕ್ತಿಿ ಹೊಂದಿದ ಮಹಿಳೆಯರ ಬರುತ್ತಿಿದ್ದುಘಿ, ಪುರುಷರು, ಯುವಕ, ಯುವತಿಯರು ಆನ್ಲೈನ್ ಖರೀದಿಗೆ ಮುಂದಾಗಿದ್ದೂ ಸಹಿತ ಬೀದಿ ಬದಿ ಮಾರಾಟಗಾರರ ಮೇಲೆ ಕಾರ್ಮೋಡ ಕವಿದಿದೆ ಎಂದು ವ್ಯಾಾಪಾರಿಗಳು ಬೇಸರ ವ್ಯಕ್ತಪಡಿಸಿದರು.
ತಾವು ಖರೀದಿಸಿ ತಂದಿರುವ ದರಕ್ಕೆೆ ಮಾರಾಟ ಮಾಡಿದರೆ ನಷ್ಟವಾಗುತ್ತಿಿದೆ. ಹತ್ತಿಿಪ್ಪತು ಲಾಭದಲ್ಲಿ ಮಾರಾಟಕ್ಕೆೆ ಮುಂದಾದರೆ ಖರೀದಿಸುವವರಿಲ್ಲಘಿ. ಹತ್ತಾಾರು ಜನ ಖರೀದಿಗೆ ಬರುತ್ತಿಿದ್ದಾಾರೆ. ದಾರಿಯಲ್ಲಿ ಹೋಗುವವರಿಗೆ ಜನ ಕಾಣುತ್ತಿಿದ್ದಾಾರೆ ಆದರೆ, ಖರೀದಿ ಮಾಡುವವರಿಲ್ಲಘಿ. ಮರಳುವವರೆ ಹೆಚ್ಚು ಎನ್ನುವ ಮಾತು ವ್ಯಾಾಪಾರಿಗಳದ್ದಾಾಗಿದೆ.
ದೀಪಾವಳಿಗೆ ಮನೆಯಲ್ಲಿ ದೀಪಗಳ ಸಾಲು, ಆಕಾಶ ಬುಟ್ಟಿಿ ಕಟ್ಟಿಿ ಆಚರಿಸುವ ದಾವಂತದಲ್ಲಿರುವ ಮಹಿಳೆಯರು ಅತ್ತ ಪೂಜಾ ಸಾಮಾಗ್ರಿಿಗಳ ಖರೀದಿಯೂ ಜೋರಾಗಿತ್ತುಘಿ. ಹಣ್ಣುಘಿ, ಹೂ, ತರಕಾರಿ, ಬಟ್ಟೆೆಗಳು ತಕ್ಕಮಟ್ಟಿಿಗೆ ಖರೀದಿಸುವಲ್ಲಿ ಜನ ಮುಗಿಬಿದ್ದಿದ್ದರು.
ಬಂಗಿಕುಂಟಾದಲ್ಲಿ ಬಾಳೆದಿಂಡು, ಚೆಂಡು ಹೂವು, ಸೇವಂತಿಗೆ ಹೂಗಳ ರಾಶಿ, ಕುಂಬಳಕಾಯಿ ಸೇರಿ ಅನೇಕ ಹಣ್ಣುಘಿ, ಪೂಜಾ ಸಾಮಾಗ್ರಿಿಗಳ ಮಾರಾಟ ಭರಾಟೆಯಿಂದ ಸಾಗಿತ್ತುಘಿ. ಸಂಚಾರ ದಟ್ಟಣೆ ಹಿನ್ನೆೆಲೆಯಲ್ಲಿ ಪೊಲೀಸರು ಚಂದ್ರವೌಳೇಶ್ವರ ವೃತ್ತದ ಬಳಿ ಹಾಗೂ ನೇತಾಜಿ ರಸ್ತೆೆಯಿಂದ ಬಂಗಿ ಕುಂಟಾ ಪ್ರವೇಶಕ್ಕಿಿರುವ ರಸ್ತೆೆ ಸಂಚಾರ ತಾತ್ಕಾಾಲಿಕವಾಗಿ ಮುಚ್ಚಿಿ ವ್ಯಾಾಪಾರಕ್ಕೆೆ ಅವಕಾಶ ನೀಡಿದ್ದರು.
ರಾಯಚೂರಿನ ಬಸವೇಶ್ವರ ವೃತ್ತದ ಬಳಿಯ ವಾಲ್ಕಾಾಟ್ ಮೈದಾನದಲ್ಲಿ ದೀಪಾವಳಿ ಹಿನ್ನೆೆಲೆಯಲ್ಲಿ ಪಟಾಕಿ ಮಾರಾಟಕ್ಕೆೆ ಹಾಕಿದ್ದ ಮಳಿಗೆಗಳಲ್ಲಿ ಖರೀದಿ ಜೋರಾಗಿದೆ.
ವಿವಿದ ಬಗೆಯ ಪಟಾಕಿ ಖರೀದಿಗೆ ಜನ ಮುಗಿ ಬಿದ್ದಿದ್ದು ಪಟಾಕಿಗಳ ಬೆಲೆಯೂ ಹೆಚ್ಚಿಿದ್ದರೂ, ಮಕ್ಕಳ ಖುಷಿಗಾಗಿ ಖರೀದಿಸುವ ಅನಿವಾರ್ಯತೆಗೆ ಪಾಲಕರು ಖರೀದಿಸುತ್ತಿಿರುವುದು ಕಂಡು ಬಂತು.
ಹಬ್ಬದ ಆಚರಣೆ ಹಿನ್ನೆೆಲೆಯಲ್ಲಿ ಪಟೇಲ್ ರಸ್ತೆೆಘಿ, ಚಂದ್ರವೌಳೇಶ್ವರ ವೃತ್ತದಿಂದ ಸಿಟಿ ಟಾಕಿಸ್ ರಸ್ತೆೆ, ಬಸವನಬಾವಿ ವೃತ್ತ ಸೇರಿ ವಿವಿಧ ರಸ್ತೆೆಗಳಲ್ಲಿ ಸಂಚಾರಿ ದಟ್ಟಣೆ ಹೆಚ್ಚಾಾಗಿ ಜನ ಸಂಚಾರಕ್ಕೆೆ ಪರದಾಡಿದರು.
ಕೆಲವರಂತೂ ಅಲ್ಲಿಯೇ ವಾಹನ ಇಳಿದು ನಡೆದುಕೊಂಡೆ ಹೋಗಿ ಖರೀದಿಸುವಂತಾಗಿತ್ತುಘಿ. ಅಲ್ಲಲ್ಲಿ ಇದ್ದ ಸಂಚಾರಿ ಪೊಲೀಸರು ವಾಹನ, ಆಟೋಗಳ ದಟ್ಟಣೆ ನಿಯಂತ್ರಿಿಸಲು ಹರಸಾಹಸ ಪಟ್ಟರು.
ಒಟ್ಟಾಾರೆ ಈ ಬಾರಿ ದೀಪಾವಳಿಯ ಆಚರಣೆ ಕಳೆದ ವರ್ಷಕ್ಕಿಿಂತ ಚುರುಕಾಗಿದ್ದು ವ್ಯಾಾಪಾರ ವಹಿವಾಟು ಸಾಗಿದೆ ಎಂಬುದನ್ನು ತಳ್ಳಿಿ ಹಾಕುವಂತಿಲ್ಲಘಿ.
ದೀಪಾವಳಿ ಸಂಭ್ರಮಕ್ಕೆೆ ಸಿದ್ದತೆ, ಇಂದು ಲಕ್ಷ್ಮೀಪೂಜೆ ನಾಳೆ ಪಾಡ್ಯಮಿ ಪಟಾಕಿ, ಪ್ರಣತಿ, ಆಕಾಶ ಬುಟ್ಟಿಿ ಪೂಜಾ ಸಾಮಾಗ್ರಿಿ ಖರೀದಿ ಜೋರು
