ಸುದ್ದಿಮೂಲ ವಾರ್ತೆ
ಹೊಸಕೋಟೆ ,17 : ಇದೇ ತಿಂಗಳ 28 ರಂದು ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕು ಕಛೇರಿಯಲ್ಲಿ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿ, ಸಮಾಜದ ವತಿಯಿಂದ ಬೆಳ್ಳಿ ರಥವನ್ನು ಮಾಡಬೇಕು. ವಾಲ್ಮೀಕಿ ಸಮಾಜದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜದ ಗಣ್ಯರನ್ನು ಗೌರವಿಸಬೇಕು. ವಾಲ್ಮೀಕಿ ಭವನಕ್ಕೆ ಎರಡು ಕೋಟಿ ಅನುದಾನಕ್ಕಾಗಿ ಸಂಬಂಧಪಟ್ಟವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಹಾಗೆಯೇ, ನ. 1 ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಬಗ್ಗೆ ಶಾಸಕರ ಸಮ್ಮಖದಲ್ಲಿ ಚರ್ಚೆ ನಡೆಸಲಾಯಿತು. ಕಲಾತಂಡಗಳು ಶಾಲಾ ಮಕ್ಕಳೊಂದಿಗೆ ತಾಲ್ಲೂಕು ಕಛೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿದೇವಿಯನ್ನು ಪೂಜಿಸಿ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಬೇಕು. ಮಕ್ಕಳಿಗೆ ಸಿಹಿ ಹಂಚಬೇಕು. ಕಲಾ ಸಾಂಸ್ಕೃತಿಕ ತಂಡಗಳೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕರು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ವಿಜಯಕುಮಾರ್, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಪೌರಾಯುಕ್ತ ಅಬ್ಬಾಸ್, ಬಿಇಓ ಪದ್ಮನಾಭ್, ಅಖಿಲ ಕರ್ನಾಟಕ ವಾಲ್ಮೀಕಿ ಸಂಘದ ರಾಜ್ಯಾಧ್ಯಕ್ಷ ಬೆಳ್ಳೂರು ಆಂಜಿನಪ್ಪ ಸೇರಿದಂತೆ ಕನ್ನಡ ಸಂಘದ ಮುಖಂಡರುಗಳು ಇತರರು ಹಾಜರಿದ್ದರು.