ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 3 : ನವೆಂಬರ್ ತಿಂಗಳಿನಲ್ಲಿ ರಾಜಧಾನಿಯ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿರುವ ಬೆಂಗಳೂರು ಕಂಬಳದ ಪೂರ್ವಭಾವಿ ಸಭೆ ಮಂಗಳವಾರ ಗುರುಕಿರಣ್ ಮತ್ತು ಗುಣರಂಜನ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು .
ಕಂಬಳಕ್ಕೆ 2ಸಾವಿರ ಸ್ವಯಂ ಸೇವಕರನ್ನು ಸಜ್ಜು ಗೊಳಿಸಲು ಮತ್ತು ಕಂಬಳದ ಯಶಸ್ವಿ ನಿರ್ವಹಣೆಗೆ ಬೇಕಾದ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು.
ಬೆಂಗಳೂರಿನಲ್ಲಿ ಇರುವ ಅವಿಭಜಿತ ದಕ್ಷಿಣ ಜಿಲ್ಲೆಯ ಸಂಘ ಸಂಸ್ಥೆಯ ಪ್ರಮುಖರು ಭಾಗವಹಿಸಿ ಸಲಹೆ ಸೂಚನೆ ನೀಡಿದರು. ದಕ್ಷಿಣ ಕನ್ನಡ ಉಡುಪಿ ಹೊರತು ಪಡಿಸಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿರುವುದರಿಂದ ಕಂಬಳದ ಜೊತೆಗೆ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಕುರಿತು ಸಲಹೆಗಳು ಬಂದವು .
130 ಜೋಡಿ ಕಂಬಳದ ಕೋಣಗಳು ಭಾಗವಹಿಸಲಿದ್ದು ಅದರ ಜೊತೆ ಕೋಣಗಳ ಯಜಮಾನರು ಕೋಣ ಓಡಿಸುವವರು ಬರಲಿದ್ದು ಬರುವ ದಾರಿಯಲ್ಲಿ ಬೇಕಾದ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚೆ ನಡೆಯಿತು . ಕಂಬಳದ ಕೋಣ ಓಡಿಸುವ ಕೆರೆ ನಿರ್ಮಿಸುವ ತಾಂತ್ರಿಕತೆ ಬಗ್ಗೆ ತಜ್ಞರು ಸಲಹೆ ಹಾಗೂ ಸೂಚನೆ ನೀಡಿದರು .
ಸಭೆಯಲ್ಲಿ ತುಳುಕೂಟದ ಅಧ್ಯಕ್ಷ ಸುಂದರ ರಾಜ್ ರೈ , ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಜಯಂತ ರಾವ್ಇದ್ದರು.