ಸುದ್ದಿಮೂಲ ವಾರ್ತೆ ಬಳ್ಳಾರಿ, ನ.30:
ಸಾಧನೆ ಮಾಡಬೇಕಾದರೆ ಯಾವುದೇ ಪ್ರಶಸ್ತಿಿಯನ್ನು ಆಶಿಸಬಾರದು ಎಂದು ಹಿರಿಯ ರಂಗಕರ್ಮಿ, ಕಾರಂತ ರತ್ನ ರಂಗ ಪ್ರಶಸ್ತಿಿ ಪುರಸ್ಕೃತರಾದ ಡಾ. ಶಿವಕುಮಾರಸ್ವಾಾಮಿಗಳು ಸಲಹೆ ನೀಡಿದ್ದಾಾರೆ.
ಬಳ್ಳಾಾರಿ ನಗರದ ಕನ್ನಡಭವನದಲ್ಲಿ ಭಾನುವಾರ ನಡೆದ ‘ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ) ಸಂಸ್ಥೆೆ’ಯು ಪ್ರತಿವರ್ಷ ನಾಟಕ ಕೃತಿಗಳಿಗೆ ನೀಡುವ ‘ಕಾರಂತ ಸಾಹಿತ್ಯ ರತ್ನ’ ರಾಜ್ಯ ಮಟ್ಟದ ಪುಸ್ತಕ ಪ್ರಶಸ್ತಿಿ ಹಾಗೂ ರಂಗ ಸಾಧಕರ ರಂಗಭೂಮಿ ಸಾಧನೆಗಾಗಿ ನೀಡಲಾಗುವ ‘ಕಾರಂತ ರತ್ನ’ ಪ್ರಶಸ್ತಿಿ ಪ್ರದಾನ ಸಮಾರಂಭವನ್ನು ಉದ್ಘಾಾಟಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಮಂಜುನಾಥ್ ಕತ್ತಲೆಯಲ್ಲಿ ಪಂಜಿನಂತೆ ಸೇವೆ ಸಲ್ಲಿಸುತ್ತಿಿದ್ದಾಾರೆ. ಮೂಲೆ ಮೂಲೆಯಿಂದ ಕಲಾವಿದರನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿಿದ್ದಾಾರೆ. ಅವರ ಕಾರ್ಯ ಹೀಗೇ ಸಾಗಲಿ ಎಂದು ಆಶೀರ್ವದಿಸಿದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಶಿವನಾಯಕ ದೊರೆ ಅವರು, ಕಾರಂತ ರಂಗಲೋಕ ಸಂಸ್ಥೆೆಯ ಕೆಲಸ ಶ್ಲಾಾಘನೀಯ. ಜಿಲ್ಲೆೆಯಲ್ಲಿ ಹಲವು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾಾ ಬಂದಿರುವುದು ಕಲೆಯ ಮೇಲಿನ ಪ್ರೀತಿ-ಅಭಿಮಾನದ ಪ್ರತೀಕ ಎಂದರು.
ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ನಮ್ಮ ಬಳ್ಳಾಾರಿ, ವಿಜಯನಗರ ಜಿಲ್ಲೆೆಗಳಿಗೆ ಹೆಚ್ಚಿಿನ ಅನುದಾನ ನೀಡುವಂತೆ ಕೋರಿರುವೆ ಎಂದರು.
ಪ್ರಾಾಸ್ತಾಾವಿಕ ನುಡಿಗಳನ್ನಾಾಡಿದ ಸಂಸ್ಥೆೆಯ ಸಂಸ್ಥಾಾಪಕ ಕಾರ್ಯದರ್ಶಿ ಆರ್.ಪಿ. ಮಂಜುನಾಥ್ ಅವರು, ಪ್ರಶಸ್ತಿಿಗಳನ್ನು ಹಣಕೊಟ್ಟು ಕೊಂಡುಕೊಳ್ಳುವ ಪರಿಸ್ಥಿಿತಿ ನಿರ್ಮಾಣವಾಗಿದೆ. ಹಣವಂತರಿಗೆ ಪ್ರಶಸ್ತಿಿಗಳು ಪ್ರಕಟವಾಗುತ್ತಿಿವೆ. ಹಣಕ್ಕೆೆ ಅಪೇಕ್ಷೆ ಪಡದೆ, ಕಲಾವಿದರನ್ನು ಗುರುತಿಸಿ ಅಂತವರಿಗೆ ರಾಜ್ಯ ಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿಿ ಹಾಗೂ ಕಾರಂತ ರತ್ನ ಪ್ರಶಸ್ತಿಿ ಪ್ರದಾನ ಮಾಡಿ ಗೌರವಿಸುವ ಕೆಲಸವನ್ನು ನಾಲ್ಕು ವರ್ಷಗಳಿಂದ ನಡೆಸಿದ್ದೇವೆ ಎಂದರು.
ರಾಜ್ಯ ಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿಿಗೆ 22 ನಾಟಕ ಕೃತಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ‘ನಮ್ಮೊೊಳಗೊಬ್ಬ ಶರಣ’ (ರಾಘವೇಂದ್ರ ಹಳಿಪೇಟಿ), ‘ಶೃಂಗಾರದ ಅರಮನೆಗೆ ಬಂಗಾರದ ಒಡತಿ’ (ಯಮುನಪ್ಪ ಅಂಗಡಗೇರಿ), ‘ಕಲ್ಯಾಾಣ ಕ್ರಾಾಂತಿ’ (ಮಲ್ಲೇಶ ಬಿ ಕೋನಾಳ), ‘ವಿಶ್ವಕವಿ ರವೀಂದ್ರನಾಥ ಒಂದು ರಂಗದರ್ಶನ’ (ಡಾ. ಗೀತಾ ಸೀತಾರಾಂ), ‘ಶರಣ ಪ್ರಭೆ’ (ಮುದೇನೂರು ಉಮಾಮಹೇಶ್ವರ) ಪುಸ್ತಕಗಳನ್ನು ಪ್ರಶಸ್ತಿಿಗೆ ಆಯ್ಕೆೆ ಮಾಡಿ, ರಾಜ್ಯಮಟ್ಟದ ಕಾರಂತ ಸಾಹಿತ್ಯ ರತ್ನ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ಜಿಲ್ಲಾಾ ಮಟ್ಟದ ‘ಕಾರಂತ ರತ್ನ’ ರಂಗ ಪ್ರಶಸ್ತಿಿಯನ್ನು ಬಿ. ಕೃಷ್ಣಪ್ಪಾಾಚಾರಿ ಸಿರುಗುಪ್ಪ (ಬಯಲಾಟ ವೇಷಭೂಷಣ), ಎ. ಮಾರೆಪ್ಪ ಕಲ್ಲಕಂಭ (ಹಾರ್ಮೋನಿಯಂ ಮೇಷ್ಟ್ರು), ವಾಲ್ಮೀಕಿ ಈರಣ್ಣ ಕಂಪ್ಲಿಿ (ಬಯಲಾಟ ಮುಮ್ಮೇಳ ಗಾಯಕ), ಪುರುಷೋತ್ತಮ ಹಂದ್ಯಾಾಳು (ರಂಗಭೂಮಿ ನಟನೆ), ಟಿ.ಎ. ಕುಬೇರ (ರಂಗಭೂಮಿ ನಟನೆ) ರವರಿಗೆ ಪ್ರದಾನ ಮಾಡಲಾಯಿತು.
‘ಕನ್ನಡ ರಂಗಭೂಮಿಯಲ್ಲಿ ರಂಗ ಸಂಗೀತದ ಅವಲೋಕನ’ ವಿಷಯದ ಕುರಿತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಾಲಯದ ನಾಟಕ ವಿಭಾಗದ ಉಪನ್ಯಾಾಸಕ ಡಾ. ಅಣ್ಣಾಾಜಿ ಕೃಷ್ಣಾಾರೆಡ್ಡಿಿ ಅವರು ವಿಶೇಷ ಉಪನ್ಯಾಾಸ ನೀಡಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿಿ ಪುರಸ್ಕೃತರಾದ ಡಾ. ಕೆ. ಶಿವಲಿಂಗಪ್ಪ ಹಂದ್ಯಾಾಳು, ಕರ್ನಾಟಕ ಲಲಿತ ಕಲಾ ಅಕಾಡೆಮಿ ವರ್ಣಶ್ರೀ ಪ್ರಶಸ್ತಿಿ ಪುರಸ್ಕೃತ ಮಂಜುನಾಥ್ ಗೋವಿಂದವಾಡ, ಶ್ರೀಧರಗಡ್ಡೆೆ ದೊಡ್ಡಬಸಪ್ಪ, ಶಿಕ್ಷಕ ಗಾದಿಲಿಂಗಪ್ಪ ತಾಳೂರು, ವಿಶ್ವನಾಥ ಸಾಹುಕಾರ್, ಆರ್.ಪಿ. ರಾಕೇಶ್ ಇನ್ನಿಿತರರು ವೇದಿಕೆಯಲ್ಲಿದ್ದರು.
‘ಕಾರಂತ ಸಾಹಿತ್ಯ ಮತ್ತು ಕಾರಂತ ರತ್ನ’ ಪ್ರಶಸ್ತಿಗಳ ಪ್ರದಾನ

