ಸುದ್ದಿಮೂಲ ವಾರ್ತೆ ಜೇವರ್ಗಿ, ನ.30:
ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ನಿ ) ಸಂಘಕ್ಕೆೆ ಅಧ್ಯಕ್ಷರಾಗಿ ಭಗವಂತರಾಯ ಪಾಟೀಲ ಉಪಾಧ್ಯಕ್ಷರಾಗಿ ಮೊಹಮ್ಮದ್ ನೂರಿ ಆಯ್ಕೆೆಯಾಗಿದ್ದಾರೆ ಎಂದು ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.
13 ಜನ ಸದಸ್ಯರು ಹೊಂದಿದ್ದು 12 ಜನ ಸಭೆಗೆ ಹಾಜರಾಗಿದ್ದು ಒಮ್ಮತದಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಚುನಾವಣೆ ಜರುಗಿತು.
ಸದಸ್ಯರುಗಳು ಅಲ್ಲಾವುದ್ದೀನ್ ಖಾನ್, ಭಗವಂತರಾಯ, ಸಿದ್ದಣ್ಣ, ಸುರೇಶ, ಗಪೂರಸಾಬ್, ಕೇದಾರಲಿಂಗಯ್ಯ ಹಿರೇಮಠ, ಶ್ರೀಮತಿ ದೇವಕ್ಕಿಿ ಚೆನ್ನಮಲ್ಲಯ್ಯ ಹಿರೇಮಠ, ಶ್ರೀಮತಿ ಸುಧಾ ಚಂದ್ರಶೇಖರ, ವಿಕಾಸ, ಅಂಬರೀಶ, ರಾಯಗೊಂಡಪ್ಪ, ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರಿ ಸಂಘದ ಸದಸ್ಯರುಗಳು.
ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರಾಗಿ ಆಯ್ಕೆೆಯಾದ ಹಿನ್ನೆೆಲೆಯಲ್ಲಿ ಸಹಕಾರಿ ಸಂಘದ ಅಧಿಕಾರಿಗಳು ಸದಸ್ಯರಿಗೆ ಶಾಲುಹೊದಿಸಿ ಹಾರ ಹಾಕಿ ಸನ್ಮಾಾನಿಸಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಅಧ್ಯಕ್ಷ, ಸ್ಥಾಾನಕ್ಕೆೆ ಭಗವಂತರಾಯ.ಕೆ. ಪಾಟೀಲ ಒಬ್ಬರೇ ನಾಮಪತ್ರ ಸಲ್ಲಿಸಿದರು.ಉಪಾಧ್ಯಕ್ಷರ ಸ್ಥಾಾನಕ್ಕೆೆ ಮೊಹಮ್ಮದ್ ನೂರಿ ನಾಮಪತ್ರ ಸಲ್ಲಿಸಿದರು. ಆದಕಾರಣ ಅವಿರೋಧವಾಗಿ ಅಧ್ಯಕ್ಷರಾಗಿ ಭಗವಂತರಾಯ. ಕೆ.ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಮೊಹಮ್ಮದ್ ನೂರಿ ಆಯ್ಕೆೆಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚೆನ್ನಮಲ್ಲಯ್ಯ ಹಿರೇಮಠ, ಪಿ ಎಲ್ ಡಿ ಬ್ಯಾಾಂಕ್ ಅಧ್ಯಕ್ಷರಾದ ಪ್ರತಾಪ್ ಕಟ್ಟಿಿ, ಪವನ್ ಜೋಶಿ, ಚಂದ್ರಶೇಖರ ಮಲ್ಲಾಬಾದ, ಮಡಿವಾಳಪ್ಪ ಗೌಡ ಹಿಪ್ಪರಗಿ, ನಿಂಗಣ್ಣ ರದ್ದೇವಡಗಿ, ರಾಜಶೇಖರ ಮುತ್ತಕೋಡ, ಶರಣಗೌಡ ಸರಡಗಿ, ಇತರರು ಉಪಸ್ಥಿಿತರಿದ್ದರು.
ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಅಧ್ಯಕ್ಷ ಭಗವಂತರಾಯ ಪಾಟೀಲ, ಉಪಾಧ್ಯಕ್ಷರಾಗಿ ಮೊಹಮ್ಮದ ನೂರಿ ಆಯ್ಕೆ

