ಸುದ್ದಿಮೂಲ ವಾರ್ತೆ ಕಾರವಾರ, ಡಿ.28:
ರಾಷ್ಟ್ರಪತಿ ದ್ರೌೌಪದಿ ಮುರ್ಮು ಅವರು ಕಾರವಾರ ನೌಕಾ ನೆಲೆಯಲ್ಲಿ ಐಎನ್ಎಸ್ ವಾಘ ಶೀರ್ ಜಲಾಂತರ್ಗಾಮಿಯಲ್ಲಿ ಸಂಚರಿಸಿದರು.
ಐಎನ್ಎಸ್ ವಾಘ ಶೀರ್ ಸ್ವದೇಶಿ ತಂತ್ರಜ್ಞಾನದ ಹೆಮ್ಮೆೆಯಾಗಿದೆ. ಡಾ. ಎಪಿಜೆ ಅಬ್ದುಲ್ ಕಲಾಂ ನಂತರ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸಿದ ಎರಡನೇ ರಾಷ್ಟ್ರಪತಿ ಎಂಬ ಖ್ಯಾಾತಿಗೆ ದ್ರೌೌಪದಿ ಮುರ್ಮು ಪಾತ್ರರಾದರು.
ಪಶ್ಚಿಿಮ ಸಮುದ್ರ ತೀರದಲ್ಲಿ ನಡೆದ ಈ ಸಾಹಸಮಯ ಪಯಣದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿಿರಲ್ ದಿನೇಶ್ ಕೆ. ತ್ರಿಿಪಾಠಿ ಅವರು ರಾಷ್ಟ್ರಪತಿಗಳಿಗೆ ಸಾಥ್ ನೀಡಿದರು. ಆಳ ಸಮುದ್ರದಲ್ಲಿ ನೌಕಾಪಡೆಯು ಎದುರಿಸುವ ಸವಾಲುಗಳು ಮತ್ತು ಜಲಾಂತರ್ಗಾಮಿ ಕಾರ್ಯಾಚರಣೆಗಳ ಸಂಕೀರ್ಣತೆಯನ್ನು ಹತ್ತಿಿರದಿಂದ ರಾಷ್ಟ್ರಪತಿಗಳು ವೀಕ್ಷಿಸಿದರು. ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಸಮುದ್ರದ ಆಳದಲ್ಲಿ ಸಂಚರಿಸಿದ ಅವರು, ಜಲಾಂತರ್ಗಾಮಿ ನೌಕೆಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿದರು ಮತ್ತು ಕಾರ್ಯಾಚರಣೆಯ ಪ್ರಾಾತ್ಯಕ್ಷಿಕೆಗಳನ್ನು ವೀಕ್ಷಿಸಿದರು.
ಈ ವೇಳೆ ಅವರು, ‘ವಾಘ ಶೀರ್ ಸಿಬ್ಬಂದಿಯ ಶಿಸ್ತು, ವಿಶ್ವಾಾಸ ಮತ್ತು ಉತ್ಸಾಾಹ ನೋಡಿ ನಮ್ಮ ಜಲಾಂತರ್ಗಾಮಿ ಮತ್ತು ಭಾರತೀಯ ನೌಕಾಪಡೆ ಸಿಬ್ಬಂದಿ ಯಾವುದೇ ಬೆದರಿಕೆ ವಿರುದ್ಧ ಎಲ್ಲಾ ಸಂದರ್ಭಗಳಲ್ಲಿಯೂ ಹೋರಾಡಲು ಸನ್ನದ್ಧವಾಗಿವೆ ಎಂಬ ಭರವಸೆ ಮೂಡಿದೆ’ ಎಂದು ಹೇಳಿದರು.
2024ರ ನವೆಂಬರ್ನಲ್ಲಿ, ರಾಷ್ಟ್ರಪತಿ ಅವರು ದೇಶೀಯ ವಿಮಾನವಾಹಕ ನೌಕೆ ಐ.ಎನ್.ಎಸ್. ವಿಕ್ರಾಾಂತ್ ನಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಪ್ರಾಾತ್ಯಕ್ಷಿಕೆಯನ್ನು ವೀಕ್ಷಿಸಿದ್ದರು. ಈಗ ದೇಶಿ ನಿರ್ಮಿತ ವಾಘ ಶೀರ್ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸುವ ಮೂಲಕ ನೌಕಾಪಡೆಯ ಸ್ಥೈರ್ಯ ಹೆಚ್ಚು ಮಾಡಿದರು.
ರಾಷ್ಟ್ರಪತಿ ಮುರ್ಮು ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದು, ಕರ್ನಾಟಕ, ಗೋವಾ, ಜಾರ್ಖಂಡ್ ರಾಜ್ಯಗಳಗೆ ಭೇಟಿ ನೀಡಲಿದ್ದಾರೆ. ಸೋಮವಾರ ಜಮ್ಶೆೆಡ್ಪುರದಲ್ಲಿ ನಡೆಯಲಿರುವ ’ಓಲ್ ಚಿಕಿ’ ಶತಮಾನೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ಅದೇ ದಿನ ಜಮ್ಶೆೆಡ್ಪುರದ ಎನ್ಐಟಿ 15ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡಲಿದ್ದಾರೆ.
ಸ್ವದೇಶಿ ನಿರ್ಮಿತ ವಾಘಶೀರ್ ಜಲಾಂತರ್ಗಾಮಿಯಲ್ಲಿ ಸಂಚರಿಸಿದ ರಾಷ್ಟ್ರಪತಿ ಮುರ್ಮು

