ಸುದ್ದಿಮೂಲ ವಾರ್ತೆ
ಮೈಸೂರು, ನ. 2 : ಕೆಲವರು ಸಕಾರಣವಿಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ದಿ ಗ್ರಾಜ್ಯುಯೇಟ್ಸ್ ಕೋ- ಅಪರೇಟಿವ್ ಬ್ಯಾಂಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದು, ಇದು ಸರಿಯಲ್ಲ. ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎನ್. ಶ್ರೀನಿವಾಸ್ ಹೇಳಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಆರ್ಥಿಕ ನಿರ್ವಹಣೆ ಹಾಗೂ ಬ್ಯಾಂಕಿನ ಠೇವಣಿ, ಗ್ರಾಹಕರ ಕುರಿತು ಅಪಪ್ರಚಾರ ಮಾಡಲಾಗಿದೆ. ಸುಂದರೇಶ್ ಗೌಡ ಅವರಿಗೆ 2021 ರ ಮಾ.2 ರಂದು 50 ಲಕ್ಷ ಸಾಲ ಮಂಜೂರು ಮಾಡಲಾಗಿದೆ. ಬ್ಯಾಂಕಿನ ಗಮನಕ್ಕೆ ತಾರದೇ ಬೇರೆ ಬ್ಯಾಂಕಿನಲ್ಲೂ ಸಾಲ ಪಡೆದಿದ್ದರಿಂದ ಇವರ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ಈ ವಿಷಯವನ್ನು ಈ ಸಾಲಿನ ವಾರ್ಷಿಕ ಸಭೆಯಲ್ಲಿ ದಾಖಲೆ ಸಮೇತ ನೀಡಲಾಗಿದೆ. ಹೀಗಾಗಿ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು, ಠೇವಣಿದಾರರು ಹಾಗೂ ಸದಸ್ಯರು ಯಾವುದೇ ಆತಂಕಕ್ಕೆ ಒಳಗಾಗ ಬಾರದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಲಹೆಗಾರ ಜಯಂತ್ ಕುಮಾರ್, ನಿರ್ದೇಶಕ ಕೆ.ಜಿ.ಸತೀಶ್, ವ್ಯವಸ್ಥಾಪಕ ಮಹೇಶ್, ಉಪಾಧ್ಯಕ್ಷ ಅನಂತರಾಮು, ಟಿ.ಎಸ್. ರವಿಶಂಕರ್ ಇದ್ದರು.