ಕ್ಯಾರಕಾಸ್ (ವೆನಿಜುವೆಲಾ) ಡಿ.4:
ಅಪಾರ ತೈಲ ಸಂಪತ್ತು ಹೊಂದಿರುವ ವೆನಿಜುವೆಲಾ ಮೇಲೆ ಅಮೆರಿಕಾ ದಾಳಿ ಮಾಡಿ ಅಲ್ಲಿನ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಬಂಧಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮಕ್ಕೆ ಭಾರತ ಸೇರಿ ಅನೇಕ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿವೆ.
’ಡ್ರಗ್ಸ್ ಭಯೋತ್ಸದನೆ’ ಹೆಸರಿನಲ್ಲಿ ವೆನುಜುವೆಲಾ ಮೇಲೆ ಶನಿವಾರ ದಾಳಿ ನಡೆಸಿದ ಅಮೆರಿಕಾ ಸೈನಿಕರು ಮಧ್ಯರಾತ್ರಿ ಟ್ರಂಪ್ ನೀಡಿದ ಸೂಚನೆ ಮೇರೆಗೆ ಅಲ್ಲಿನ ಅಧ್ಯಕ್ಷ ನಿಕೊಲಸ್ ಮಡುರೊ ಹಾಗೂ ಅವರ ಪತ್ನಿಿ ಸಿಲಿಯಾ ಪ್ರೋೋಸ್ ಅವರನ್ನು ಸೆರೆ ಹಿಡಿದು ನ್ಯೂಯಾರ್ಕ್ಗೆ ಕರೆತಂದಿದ್ದಾರೆ.
ಅಮೆರಿಕಾದ ಆಕ್ರಮಣ ನೀತಿಯ ಬಗ್ಗೆೆ ವಿಶ್ವಸಂಸ್ಥೆೆ ಸೇರಿ ಚೀನಾ, ರಷ್ಯಾಾ ಮುಂತಾದ ರಾಷ್ಟ್ರಗಳು ಖಂಡಿಸಿವೆ. ಒಂದು ದೇಶದ ಅಧ್ಯಕ್ಷನನ್ನು ಬಂಧಿಸಿ ಕರೆತರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿ ವೆನಿಜುವೆಲಾಗೆ ತಮ್ಮ ಬೆಂಬಲ ಘೋಷಿಸಿವೆ.
ವೆನಿಜುವೆಲಾದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ಸಂಪತ್ತು ಇದೆ. ವಿಶ್ವದ ತೈಲ ಸಂಗ್ರಹದಲ್ಲಿ ಶೇ. 18ರಷ್ಟು ತೈಲವು ವೆನಿಜುವೆಲಾದಲ್ಲೇ ಇದೆ. ಸೌದಿ ಅರೇಬಿಯಾದಲ್ಲಿರುವುದಕ್ಕಿಿಂತಲೂ ಹೆಚ್ಚಿನ ತೈಲವು ವೆನಿಜುವೆಲಾದಲ್ಲಿದೆ. ಹೀಗಾಗಿ ಅರಬ್ ರಾಷ್ಟ್ರಗಳ ಮೇಲಿನ ದಾಳಿ ಬಳಿಕ ಅಮೆರಿಕಾ ವೆನಿಜುವೆಲಾ ಮೇಲೆ ತನ್ನ ನಿಯಂತ್ರಣ ಸಾಧಿಸಲು ಹೊರಟಿದೆ. ಇದೊಂದು ಕುತಂತ್ರ ನೀತಿ ಎಂದು ಜಾಗತಿಕವಾಗಿ ಖಂಡನೆ ವ್ಯಕ್ತಪಡಿಸಲಾಗುತ್ತಿಿದೆ.
ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಬಂಧಿಸಿದ ಹಿನ್ನೆೆಲೆಯಲ್ಲಿ ಹಾಲಿ ಉಪಾಧ್ಯಕ್ಷೆ ಡೆಲ್ಸಿಿ ರೊಡ್ರಿಿಗಸ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ವೆನಿಜುವೆಲಾದ ಸುಪ್ರೀೀಂ ಕೋರ್ಟ್ ಭಾನುವಾರ ನಿರ್ದೇಶಿಸಿದೆ. ಮತ್ತೊೊಂದೆಡೆ ವೆನಿಜುವೆಲಾ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕಾ ಮುಂದಾಗಿದೆ.
’ಡ್ರಗ್ ಮಾಫಿಯಾಕ್ಕೆೆ ನೆರವು ಹಾಗೂ ನಿರಂಕುಶ ಅಡಳಿತವನ್ನು ಪೋಷಿಸುತ್ತಿಿರುವ ಆರೋಪದ ಮೇಲೆ ಅಮೆರಿಕಾ ವಾಯು ಸೇನೆ ದಾಳಿ ನಡೆಸಿ ವೆನಿಜುವೆಲಾ ಅಧ್ಯಕ್ಷರನ್ನು ಬಂಧಿಸಲಾಗಿದೆ’ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.
ಬಾಕ್ಸ್
ಶನಿವಾರ ನಡೆಸಿದ ದಾಳಿಯಲ್ಲಿ 40 ಮಂದಿ ಸಾವು
ವೆನಿಜುವೆಲಾದ ಕರಾವಳಿ ಹಾಗೂ ವಿವಿಧ ಪ್ರದೇಶಗಳ ಮೇಲೆ ಶನಿವಾರ ಮುಂಜಾನೆ ಅಮೆರಿಕಾ ಸೇನೆ ನಡೆಸಿದ ವಾಯು ದಾಳಿಯಲ್ಲಿ 40 ಮಂದಿ ನಾಗರಿಕರು ಮೃತಪಟ್ಟಿಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

