ಪಟ್ನಾಾ (ಬಿಹಾರ), ನ.20:
ಸಂಯುಕ್ತ ಜನತಾದಳದ (ಜೆಡಿಯು) ಮುಖ್ಯಸ್ಥ ನಿತೀಶ್ ಕುಮಾರ್ ಅವರು 10 ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಧಾನಿ ಪಟ್ನಾಾ ನಗರದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಮೊಹಮ್ಮದ್ ಆರ್ಿ ಖಾನ್ ಅವರು ನಿತೀಶ್ ಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಧಾನ ಮಂತ್ರಿಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಸಿಎಂ ದೇವೇಂದ್ರ ಡವೀಸ್, ಆಂಧ್ರಪ್ರದೇಶದ ಸಿಎಂ ಚಂದ್ರಬಾಗು ನಾಯ್ಡು ಸೇರಿದಂತೆ ಹಲವು ನಾಕರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.
ಎನ್ಡಿಎ ಮೈತ್ರಿಿಕೂಟದ ಸದಸ್ಯ ಪಕ್ಷಗಳ ಜಂಟಿ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಎನ್ಡಿಿಎ ಶಾಸಕಾಂಗ ಪಕ್ಷದ (ಎನ್ಡಿಎಎಲ್ಪಿಿ) ನಾಯಕನನ್ನಾಾಗಿ ಬುಧವಾರ ಅವಿರೋಧವಾಗಿ ಆಯ್ಕೆೆ ಮಾಡಲಾಗಿತ್ತು. ಬಳಿಕ ಅವರು ರಾಜ್ಯಪಾಲ ಮೊಹಮ್ಮದ್ ಖಾನ್ ಅವರನ್ನು ಸಂಜೆ ಭೇಟಿಯಾಗಿ ನಿರ್ಗಮಿತ ಸರ್ಕಾರದ ಮುಖ್ಯಮಂತ್ರಿಿ ಸ್ಥಾಾನಕ್ಕೆೆ ರಾಜೀನಾಮೆ ಸಲ್ಲಿಸಿದರು.
ಬಿಜೆಪಿ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಾಮ್ರಾಾಟ್ ಚೌಧರಿ ಮತ್ತು ಉಪ ನಾಯಕ ವಿಜಯ್ ಕುಮಾರ್ ಸಿನ್ಹಾಾ ಅವರು ಉಪ ಮುಖ್ಯಮಂತ್ರಿಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
26 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ:
ಜೆಡಿಯು ಹಾಗೂ ಬಿಜೆಪಿಯ 26 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜೆಡಿಯುನ ಬಿಜೇಂದ್ರ ಪ್ರಸಾದ್ ಯಾದವ್, ಶ್ರವಣ್ ಕುಮಾರ್, ಅಶೋಕ್ ಚೌಧರಿ, ಲೆಸಿ ಸಿಂಗ್, ಮದನ್ ಸಾಹ್ನಿಿ, ಸುನೀಲ್ ಕುಮಾರ್, ಮೊಹ್ಮದ್ ಜಮಾ ಖಾನ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಪ್ರಮುಖರು.
ಬಿಜೆಪಿಯ ದಿಲೀಪ್ ಜೈಸ್ವಾಾಲ್, ಮಂಗಲ್ ಪಾಂಡೆ, ಸಂಜಯ್ ಸಿಂಗ್ ಟೈಗರ್, ರಾಮ ನಿಶಾದ್, ಅರುಣ್ ಶಂಕರ್ ಪ್ರಸಾಸ್, ರಾಮ್ ಕೃಪಾಲ್ ಯಾದವ್, ನಿತಿನ್ ನಬಿನ್, ಸುರೇಂದ್ರ ಪ್ರಸಾದ್ ಮೆಹ್ತಾಾ, ನಾರಾಯಣ ಪ್ರಸಾದ್, ಲಖೇಂದ್ರ ಕುಮಾರ್ ರೋಷನ್, ಶ್ರೇೇಯಾಶಿ ಸಿಂಗ್, ಡಾ. ಪ್ರಮೋದ್ ಕುಮಾರ್ ಸಚಿವರು ಸಚಿವರಾಗಿ ಪ್ರಮಾಣ ಪ್ರಚನ ಸ್ವೀಕರಿಸಿದರು.
ಇದೇ ವೇಳೆ ಎಲ್ಜೆಪಿಯ (ಆರ್) ನ ಸಂಜಯ್ ಕುಮಾರ್ ಸಿಂಗ್, ಎಚ್ಎಎಂನ ಸಂತೋಷ್ ಕುಮಾರ್ ಸುಮನ್ ಹಾಗೂ ಆರ್ಎಲ್ಎಂನ ದೀಪಕ್ ಪ್ರಕಾಶ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

