ಭಕ್ತ ಕನಕದಾಸರಿಗಾಗಿ ಶ್ರೀಕೃಷ್ಣನು ದರ್ಶನ ನೀಡಿದ ಪವಿತ್ರಲೇ ಕನಕನ ಕಿಂಡಿಗೆ ಚಿನ್ನದ ಪನ ಮಾಡಲಾದ ಕವಚವನ್ನು ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿಂದು ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಶ್ರೀಕೃಷ್ಣನ ಗರ್ಭಗುಡಿಯ ಮುಂದಿರುವ ಚಿನ್ನದ ಲೇಪನ ಮಾಡಿದ ಸುವರ್ಣ ತೀರ್ಥ ಮಂಟಪವನ್ನು ಸಹ ಪ್ರಧಾನಿ ಉದ್ಘಾಾಟಿಸಿದರು.
ಈ ಕಾರ್ಯಕ್ರಮಗಳು ದೇಶದ ಆಧ್ಯಾಾತ್ಮಿಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಿಹಿಡಿಯುವ ಪ್ರಯತ್ನದ ಭಾಗವಾಗಿದ್ದು, ಉಡುಪಿಯ ಇತಿಹಾಸದಲ್ಲಿ ಒಂದು ಸ್ಮರಣೀಯ ಕ್ಷಣವಾಗಿ ದಾಖಲಾಗಿದೆ. ವಿಮಾನ ನಿಲ್ದಾಾಣದಿಂದ ಸುಮಾರು ಎರಡು ಕಿಲೋಮೀಟರ್ ಉದ್ದದ ಭವ್ಯವಾದ ರೋಡ್ ಶೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು.
ರಸ್ತೆೆಯ ಇಕ್ಕೆೆಲಗಳಲ್ಲೂ ನೆರೆದಿದ್ದ ಬೃಹತ್ ಜನಸ್ತೋೋಮ ಪ್ರಧಾನಿ ಅವರ ಮೇಲೆ ಪುಷ್ಪವೃಷ್ಟಿಿಗೈದ್ದು ಕೃಷ್ಣನ ನಗರಿಗೆ ಸ್ವಾಾಗತಿಸಿದರು. ರೋಡ್ ಶೋ ಸಂದರ್ಭದಲ್ಲಿ ಕಲಾ ತಂಡಗಳಿಂದ ಕರಾವಳಿಯ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ ಮತ್ತು ಹುಲಿವೇಷ ಪ್ರದರ್ಶನಗಳು ಜನಮನ ಸೆಳೆದವು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕೃಷ್ಣನಗರಿ ಉಡುಪಿಯಲ್ಲಿ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾದರು. ಪರ್ಯಾಯ ಶ್ರೀ ಪುತ್ತಿಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಾಮೀಜಿಯವರ ನೇತೃತ್ವದಲ್ಲಿ ಆಯೋಜಿಸಲಾದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊೊಂಡರು. ಭಗವದ್ಗೀತೆಯ ಸಾಮೂಹಿಕ ಪಠಣ ಕಾರ್ಯಕ್ರಮವಾದ ’ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದರು. ’ಕೋಟಿ ಗೀತಾ ಲೇಖನ ಯಜ್ಞ’, ಪುತ್ತಿಿಗೆ ಮಠವು ನಡೆಸುತ್ತಿಿರುವ ’ಕೋಟಿ ಗೀತಾ ಲೇಖನ ಯಜ್ಞ’ ಅಭಿಯಾನದ ಒಂದು ಭಾಗವಾಗಿ ಅವರು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು.
ಬೆಳಿಗ್ಗೆೆ ಹೆಲಿಪ್ಯಾಾಡ್ ನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋೋಟ್, ಕೇಂದ್ರ ಗ್ರಾಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾಾದ್ ಜೋಷಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಾಗತಿಸಿದರು.

