ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ 26: ಮುದ್ರಣ ಮತ್ತು ಪ್ಯಾಕೇಜಿಂಗ್ ಪ್ರದರ್ಶನ ಪ್ರಿಂಟ್ ಮತ್ತು ಪ್ಯಾಕ್ಟೆಕ್ ವರ್ಲ್ಡ್ ಎಕ್ಸ್ಪೋ ಆರು ಯಶಸ್ವಿ ಆವೃತ್ತಿಗಳ ನಂತರ, 7ನೇ ಆವೃತ್ತಿಗೆ ದೇಶದ ತಂತ್ರಜ್ಞಾನ ನಗರ ಬೆಂಗಳೂರು ಸಜ್ಜಾಗುತ್ತಿದೆ. ನಗರದ ತ್ರಿಪುರ ವಾಸಿನಿ, ಅರಮನೆ ಮೈದಾನದಲ್ಲಿ ಮೇ 26 ರಿಂದ 29 ಈ ಸಮ್ಮೇಳನ ನಡೆಯಲಿದೆ.
ಟ್ರಿಯೂನ್ ಎಕ್ಸಿಬಿಟರ್ಸ್ ಸಂಸ್ಥೆ ಆಯೋಜಿಸುತ್ತಿರುವ 7ನೇ ಪ್ರಿಂಟ್ ಮತ್ತು ಪ್ಯಾಕ್ಟೆಕ್ – 2023 ಪ್ರದರ್ಶನ ವಿಶ್ವದ ಅತ್ಯುತ್ತಮವಾದವುಗಳನ್ನು ಭಾರತದಲ್ಲಿನ ಅತ್ಯುತ್ತಮವಾದವುಗಳಿಗೆ ಹೋಲಿಸಲು ಅತ್ಯುತ್ತಮ ವೇದಿಕೆ.
ಸಂಸ್ಥೆಗಳಿಗೆ ತಮ್ಮ ಅತ್ಯಾಧುನಿಕ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶನಕ್ಕಿಡಲು ಇದು ಅತ್ಯುತ್ತಮ ವೇದಿಕೆ. ಜೊತೆಗೆ ಪ್ರಿಂಟಿಂಗ್ ಮತ್ತು ಪ್ಯಾಕೇಜಿಂಗ್ ವಲಯದ ಪ್ರಮುಖ ಸಂಸ್ಥೆಗಳು ಮತ್ತು ಈ ಕ್ಷೇತ್ರದ ನೀತಿ ನಿರ್ಧಾರಕರ ಜೊತೆಗಿನ ಮುಖಾಮುಖಿ, ವ್ಯಾಪಾರ ಸಭೆಗಳು ಈ ಸಮ್ಮೇಳನದ ವೈಶಿಷ್ಟ್ಯವಾಗಿದ್ದು, ಪಾಲ್ಗೊಳ್ಳುವಿಕೆದಾರರಿಗೆ ಹೆಚ್ಚು ವ್ಯಾಪಾರ ಅವಕಾಶಗಳು ಸಂಪರ್ಕಗಳು ಸಾಧಿಸುವ ಮೂಲಕ ತಮ್ಮ ಉದ್ಯಮ ವಿಸ್ತರಣೆಗೆ ಇದೊಂದು ಅಪರೂಪದ ಅವಕಾಶ.
ಮುದ್ರಣ ಮತ್ತು ಪ್ಯಾಕೇಜಿಂಗ್ ಕ್ಷೇತ್ರ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಈಗ ಸಂಭವಿಸುತ್ತಿರುವ ಬದಲಾವಣೆಗಳು, ಆವಿಷ್ಕಾರಗಳು ನಮ್ಮನ್ನು ಉಸಿರು ಬಿಗಿ ಹಿಡಿದು ಆಶ್ಚರ್ಯಗೊಳ್ಳುವಂತೆ ಮಾಡುತ್ತಿದೆ. 10 ವರ್ಷಗಳ ಹಿಂದಿನ ಸ್ಥಿತಿ ಈಗಿಲ್ಲ. ಇದು ಇನ್ನು ಮುಂದೆ ಬಿಚ್ಚಿಟ್ಟ ವಸ್ತುಗಳ ಪ್ರಪಂಚವಲ್ಲ, ವಾಸ್ತವಿಕವಾಗಿ ಭೂಮಿಯ ಮೇಲಿನ ಎಲ್ಲವನ್ನೂ ಪ್ಯಾಕ್ ಮಾಡಬಹುದು. ಪ್ಯಾಕೇಜಿಂಗ್ ಅಂದರೆ ಈಗ ಕೇವಲ ಒಂದು ವಸ್ತುವಿನ ರಕ್ಷಣೆ ಮಾತ್ರ ಅಲ್ಲ. ಅದು ಒಂದು ವಸ್ತುವಿನ ಮಾರುಕಟ್ಟೆಗೆ ಅತ್ಯಂತ ನಿರ್ಣಾಯಕ ಅಂಶವಾಗಿ ಬದಲಾಗಿದೆ.
ಪ್ರಿಂಟ್ ಮತ್ತು ಪ್ಯಾಕ್ ವರ್ಲ್ಡ್ ಎಕ್ಸ್ಪೋ-2023 ಮಾರುಕಟ್ಟೆಯ ವಿಕಸನದ ಹಾದಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿದ್ದು, ಈ ಕ್ಷೇತ್ರದ ಹೊಸ ಅಗತ್ಯ, ಸ್ಪರ್ಧೆ, ತಂತ್ರಜ್ಞಾನ, ಮತ್ತು ಇತರ ಬೆಳವಣಿಗೆಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಈ ಪ್ರದರ್ಶನವು ಮುದ್ರಣ ಮತ್ತು ಪ್ಯಾಕೇಜಿಂಗ್ನಲ್ಲಿನ ನಾನಾ ಪ್ರಕ್ರಿಯೆಗಳ ಏಕೀಕರಣದ ಮೇಲೆ ವಿಶೇಷ ಗಮನವನ್ನು ನೀಡಿದೆ. ಮುದ್ರಣ ಹಾಗು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಇನ್ನಷ್ಟು ಏಕೀಕೃತತೆಯನ್ನು ಸಾಧಿಸಿ, ಭಾರತವನ್ನು ವಿಶ್ವ ಪ್ರಿಂಟಿಂಗ್ ಹಾಗು ಪ್ಯಾಕೇಜಿಂಗ್ ಹಬ್ ಆಗಿಸುವ ಗುರಿಯನ್ನು ಈ ಸಮ್ಮೇಳನ ಇಟ್ಟುಕೊಂಡಿದೆ. ಪ್ರಿಂಟ್ ಮತ್ತು ಪ್ಯಾಕ್ ವರ್ಲ್ಡ್ ಎಕ್ಸ್ಪೋ-2023 ಪ್ರಿಂಟಿಂಗ್ ಮತ್ತು ಪ್ಯಾಕೇಜಿಂಗ್ಗೆ ಪ್ರಮುಖ ಪ್ರದರ್ಶನವಾಗಿದೆ.
ಈ ಕ್ಷೇತ್ರದ ಕೈಗಾರಿಕೆಗಳು, ಈ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವುದು ಮತ್ತು ಭಾರತೀಯ ಮುದ್ರಣ ಮತ್ತು ಪ್ಯಾಕೇಜಿಂಗ್ ಸಾಮರ್ಥ್ಯಗಳನ್ನು ಹೆಚ್ಚಿಸುವ ಮೂಲಕ ಎರಡೂ ಕೈಗಾರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮಾರುಕಟ್ಟೆ ಸಂಶೋಧನೆಯ ಪ್ರಕಾರ ಭಾರತ ವಾಣಿಜ್ಯ ಮುದ್ರಣ ಮಾರುಕಟ್ಟೆ ಗಾತ್ರವು 2022 ರಲ್ಲಿ $ 33.2 ಶತಕೋಟಿ ತಲುಪಿತು. 2028 ರ ವೇಳೆಗೆ ಇದು 41.6 ಶತಕೋಟಿ ತಲುಪುತ್ತದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಎಂಎಆರ್ಸಿ ತಿಳಿಸಿದೆ. 2023-ರಲ್ಲಿ ಈ ಕ್ಷೇತ್ರ 3.4% ಬೆಳವಣಿಗೆ ದರವನ್ನು ದಾಖಲಿಸಿದೆ. ಹೀಗೆ ಈ ಕ್ಷೇತ್ರದ ಭವಿಷ್ಯ ಉಜ್ವಲವಾಗಿದೆ ಎನ್ನುತ್ತಾರೆ ತಜ್ಞರು.
ಪ್ರದರ್ಶನವು ಮುದ್ರಣ ಮತ್ತು ಪ್ಯಾಕೇಜಿಂಗ್ನಲ್ಲಿ ಉದ್ಯಮಗಳಿಗೆ ತಮ್ಮ ಹೂಡಿಕೆಯನ್ನು ಮೌಲ್ಯಮಾಪನ ಮಾಡಲು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತದೆ.
ಟ್ರಿಯೂನ್ ಎಕ್ಸಿಬಿಟರ್ಸ್ ಸಂಸ್ಥೆ (ಟಿಇಪಿಎಲ್) 2000 ರಲ್ಲಿ ಸ್ಥಾಪಿಸಲಾಯಿತು. ಟಿಇಪಿಎಲ್ ಪ್ರಮುಖ ಉದ್ದೇಶ ಪ್ರದರ್ಶನಗಳು ಮತ್ತು ಸಮ್ಮೇಳನಗಳ ಆಯೋಜನೆ ಇತ್ಯಾದಿ. ಸಂಸ್ಥೆಯು ಉದ್ಯಮ, ಮಾಧ್ಯಮ ಮತ್ತು ಶೈಕ್ಷಣಿಕ ಗುಂಪುಗಳಿಗೆ ಸರ್ಕಾರದ ನಡುವೆ ಮಧ್ಯವರ್ತಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಟಿಇಪಿಎಲ್ ಪ್ರತಿಷ್ಠಿತ ಭಾರತೀಯ ಪ್ರದರ್ಶನ ಸಂಘಟಕರಲ್ಲಿ ಒಂದಾಗಿದ್ದು, ಈವರೆಗೆ ವಿವಿಧ ವಿಷಯಗಳ ಮೇಲೆ 55 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಿರುವ ದಾಖಲೆ ಹೊಂದಿದೆ.
ಯಂತ್ರೋಪಕರಣ, ವಿದ್ಯುತ್, ಪ್ಲಾಸ್ಟಿಕ್ಗಳು, ಮುದ್ರಣ ಮತ್ತು ಪ್ಯಾಕೇಜಿಂಗ್, ಆಹಾರ ಮತ್ತು ಆತಿಥ್ಯ ಇತ್ಯಾದಿ ಉದ್ಯಮಗಳ ಸಮ್ಮೇಳನಗಳನ್ನು ಸಂಸ್ಥೆ ಯಶಸ್ವಿಯಾಗಿ ಸಂಘಟಿಸಿದೆ. ಟಿಇಪಿಎಲ್ ತನ್ನ ದೃಢವಾದ ಮಾರಾಟ, ಮಾರ್ಕೆಟಿಂಗ್, ಮಾಹಿತಿ ತಂತ್ರಜ್ಞಾನ ಮತ್ತಿತರ ಸಾಮರ್ಥ್ಯಗಳ ಮೂಲಕ ಬಿ2ಬಿ ಮತ್ತು ಬಿ2ಸಿ ಪ್ರದರ್ಶನಗಳ ಮೌಲ್ಯವನ್ನು ಹೆಚ್ಚಿಸುತ್ತದೆ. ಈ ಸಮ್ಮೇಳನಗಳ ಮೂಲಕ ಗ್ರಾಹಕರಿಗೆ ವ್ಯಾಪಾರವನ್ನು ಖಾತ್ರಿಪಡಿಸುವುದರ ಜೊತೆಗೆ ಉದ್ಯಮ ಬೆಳವಣಿಗೆ ಮತ್ತು ಲಾಭಂಶ ಹೆಚ್ಚಳಕ್ಕೆ ನೆರವು ನೀಡುತ್ತದೆ.
7 ಮುದ್ರಣ ಮತ್ತು ಪ್ಯಾಕ್ಟೆಕ್ ವರ್ಲ್ಡ್ ಎಕ್ಸ್ಪೋ 2023 ಕುರಿತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕರೆ ಮಾಡಿ: 080 4600 0603 / 06
http://printandpacktechexpo.in info@[email protected]