ಸುದ್ದಿಮೂಲ ವಾರ್ತೆ ರಾಯಚೂರು, ಅ.17
ಜಿಲ್ಲೆಯಲ್ಲಿನ ಎಲ್ಲ ಹೊಟೇಲ್ನ ಅಡುಗೆ ಕೋಣೆ ಹಾಗೂ ಆಹಾರ ಧಾನ್ಯ ಸಂಗ್ರಹಣ ಕೊಠಡಿ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಳೆ ಕಟ್ಟುನಿಟ್ಟಿಿನ ನಿರ್ದೇಶನ ನೀಡಿದರು.
ನೂತನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸಹಾಯಕ ಆಯುಕ್ತರ ಸಭಾಂಗಣದಲ್ಲಿ ನಡೆದ ಹೋಟೆಲ್ ಮಾಲೀಕರು ಹಾಗೂ ಬೀದಿಬದಿ ವ್ಯಾಾಪಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಡುಗೆ ಸಿಬ್ಬಂದಿ ಹಾಗೂ ಕೆಲಸಗಾರರು ಆರೋಗ್ಯದ ಬಗ್ಗೆೆ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರಬೇಕು, ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ಕಡ್ಡಾಾಯವಾಗಿ ಮಾಡಿಸಲು ಸಲಹೆ ನೀಡಿದ ಅವರು ತಲೆಗೆ ಟೋಪಿ, ಎ್ರಾನ್, ಕೈಗವಸು ಧರಿಸಬೇಕು ಇಲ್ಲದಿದ್ದರೆ ಉಗುರಿನ ಂಗಸ್ ಹಾಗೂ ಕೀಟಾಣು ಆಹಾರ ಪದಾರ್ಥ ಸೇರುತ್ತದೆ. ಇದು ಅನಾರೋಗ್ಯಕ್ಕೆೆ ಕಾರಣವಾಗಲಿದೆ ಎಂದು ತಿಳಿಸಿದರು.
ಅಡುಗೆ ಮಾಡುವ ಮತ್ತು ಗ್ರಾಾಹಕರಿಗೆ ಕೊಡುವ ಸಿಬ್ಬಂದಿಯು ವೈಯಕ್ತಿಿಕವಾಗಿ ಶುಚಿತ್ವದ ಕಡೆಗೆ ಗಮನ ಹರಿಸಬೇಕು. ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಕುಡಿಯಲು ಶುದ್ಧ ನೀರು ಕೊಡಬೇಕು. ಕಡ್ಡಾಾಯವಾಗಿ ಆಹಾರ ಪರವಾನಿಗೆ ಅಥವಾ ನೋಂದಣಿ ಪಡೆದು ಆರಂಭಿಸಬೇಕು ಎಂದು ಸೂಚನೆ ನೀಡಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ನಜೀರ ಮಹಮ್ಮದ್ ಮಾತನಾಡಿ, ಹೋಟೆಲ್ನಲ್ಲಿ ಮನಬಂದಂತೆ ಸಿಲಿಂಡರ್ ಬಳಸಕೂಡದು. ಅಂತವರ ವಿರುದ್ಧ ಪ್ರಕರಣ ದಾಖಲಿಸಿ ಹೋಟೆಲ್ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೋಟೆಲ್ ಮಾಲೀಕರು ಟ್ರೇಡ್ ಲೈಸನ್ಸ್ ತೆಗೆದುಕೊಳ್ಳಬೇಕು. ಹಾಗೂ ಹೋಟೆಲ್ಗಳನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು. ಸುಡುವ ಪದಾರ್ಥಗಳನ್ನು ಪ್ಲಾಾಸ್ಟಿಿಕ್ನಲ್ಲಿ ಹಾಕಿ ನೀಡಬಾರದು ಎಂದು ಪಾಲಿಕೆಯ ಮುಖ್ಯ ಆಹಾರ ಅಧಿಕಾರಿ ಡಾ. ಮಹಮದ್ ಶಾಕೀರ ತಿಳಿಸಿದರು.
ಈ ವೇಳೆ ಹಳ್ಳಿಿಮನೆ ಹೋಟೆಲ್ ಮಾಲೀಕ ಹನಮಂತು ಮಾತನಾಡಿ, ಹೋಟೆಲ್ ಮಾಲೀಕರು ಗ್ರಾಾಹಕರಿಗೆ ಶುಚಿತ್ವ ಹಾಗೂ ಪೌಷ್ಠಿಿಕ ಆಹಾರದ ಜೊತೆಗೆ ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡು ಒಂದು ತಿಂಗಳೊಳಗಾಗಿ ಸರಿಪಡಿಸಿಕೊಳ್ಳಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮಾಲೀಕರು ಸಭೆಯಲ್ಲಿ ಇದ್ದರು.