ಸುದ್ದಿಮೂಲ ವಾರ್ತೆ ಕೊಪ್ಪಳ, ಜ.19:
ಕೊಪ್ಪಳ ನಗರಾಭಿವೃದ್ಧಿಿ ಪ್ರಾಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಪ್ರಸನ್ನ ಗಡಾದ ಅವರು ಹೊಸ ಆಯಾಮದಲ್ಲಿ ಅಭಿವೃದ್ಧಿಿ ಕಾರ್ಯ ಕೈಗೊಳ್ಳಲಿ, ಅವರು ಅನುಭವಿ ರಾಜಕಾರಣಿಯಾಗಿದ್ದು ನಗರದ ಲೇಔಟ್ ಅಭಿವೃದ್ಧಿಿಗೆ ಒತ್ತು ನೀಡಲಿ ಎಂದು ಸಂಸದ ರಾಜಶೇಖರ ಹಿಟ್ನಾಾಳ ಹೇಳಿದರು.
ಕೊಪ್ಪಳ ನಗರಾಭಿವೃದ್ಧಿಿ ಪ್ರಾಾಧಿಕಾರದ ಆವರಣದಲ್ಲಿ ನೂತನ ಅಧ್ಯಕ್ಷ ಪ್ರಸನ್ನಾಾ ಗಡದಾ ಅವರ ಪದಗ್ರಹಣ ಸ್ವೀಕಾರ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
2.80 ಕೋಟಿ ರೂ. ವೆಚ್ಚದಲ್ಲಿ ಸಿಸಿಟಿವಿ ಕ್ಯಾಾಮೆರಾಗಳ ಅಳವಡಿಕೆ ಕಾರ್ಯಕ್ಕೂ ಒತ್ತೂ ನೀಡಿದೆ. ಹಿಂದಿನ ದಿನಗಳಲ್ಲಿ ಲೇಔಟ್ಗಳಲ್ಲಿ ಚರಂಡಿ ವ್ಯವಸ್ಥೆೆ, ಕುಡಿಯುವ ನೀರು, ವಿದ್ಯುತ್ ಕಂಬಗಳಿಲ್ಲದೇ ಹಸ್ತಾಾಂತರ ಮಾಡಲಾಗುತ್ತಿಿತ್ತು. ಆದರೆ ಈಗ ಸರ್ಕಾರದಿಂದ ನಿಯಮಗಳನ್ನು ಕಟ್ಟುನಿಟ್ಟಾಾಗಿ ಜಾರಿಗೆ ತರಲಾಗಿದೆ. ನಗರಾಭಿವೃದ್ಧಿಿ ಪ್ರಾಾಧಿಕಾರ ಇನ್ನು ಮುಂದೆ ಎಲ್ಲಾಾ ಕಾರ್ಯಗಳನ್ನು ಅಚ್ಚುಕಟ್ಟಾಾಗಿ ನಿರ್ವಹಿಸಲಿದೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಾಳ್ ಮಾತನಾಡಿ, ಕೊಪ್ಪಳ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಿಗೆ ಸರ್ಕಾರ ಬದ್ಧವಾಗಿದ್ದು, ಕೊಪ್ಪಳದ ರಸ್ತೆೆಗಳ ಅಭಿವೃದ್ಧಿಿಗೆ 28 ಕೋಟಿ ರೂ. ಅನುದಾನ ಮೀಸಲು ಇಡಲಾಗಿದೆ. ನಗರದ ಸೌಂದರ್ಯೀಕರಣಕ್ಕೂ ವಿಶೇಷ ಒತ್ತು ನೀಡಲಾಗಿದೆ. ಹಿಂದಿನ ಅಧ್ಯಕ್ಷರಾಗಿದ್ದ ಜುಲ್ಲು ಖಾದ್ರಿಿ ಅವಧಿಯಿಂದ ಶ್ರೀನಿವಾಸ ಗುಪ್ತ ಅವರ ವರೆಗೂ ಹಲವಾರು ಅಭಿವೃದ್ಧಿಿ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ಪ್ರಸನ್ನ ಗಡಾದ ಅವರು ಸರಳ ಸಜ್ಜನಿಕೆಯ ವ್ಯಕ್ತಿಿಯಾಗಿದ್ದು, ಪ್ರಾಾಧಿಕಾರದ ನಗರದ ಯೋಜನೆಗಳ ಅಭಿವೃದ್ದಿಗೆ ಒತ್ತು ನೀಡಲಿ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಪ್ರಸನ್ನ ಗಡಾದ ಅವರ ಮನೆತನ ರಾಜಕೀಯ ಹಿನ್ನೆೆಲೆ ಹೊಂದಿದೆ. ಅವರ ಕುಟುಂಬ ರಾಜಕೀಯವಾಗಿ ನನಗೆ ಸದಾ ಬೆಂಬಲ ನೀಡಿದೆ. ಪ್ರಸನ್ನ ಗಡಾದ ಯುವ ನಾಯಕ, ಮಿತಭಾಷಿ ಹಾಗೂ ತಾಳ್ಮೆೆಯ ವ್ಯಕ್ತಿಿಯಾಗಿದ್ದು, ಈ ಗುಣಗಳೇ ಅವರಿಗೆ ಅಧ್ಯಕ್ಷ ಸ್ಥಾಾನ ದೊರಕಲು ಕಾರಣವಾಗಿದೆ ಎಂದು ಹೇಳಿದರು.
ಕೊಪ್ಪಳ ನಗರದ ಪ್ರಮುಖ ವೃತ್ತಗಳ ಅಗಲೀಕರಣ ಮಾಡಬೇಕು. ಟ್ರಾಾಫಿಕ್ ಜಾಮ್ ಸಮಸ್ಯೆೆ ಹೆಚ್ಚಾಾಗಿದ್ದು, ವಾಹನ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆೆ ಹೆಚ್ಚುತ್ತಿಿದೆ. ಅಪಘಾತ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಲೇಔಟ್ಗಳಲ್ಲಿ ಮರ ನೆಡುವ ಕಾರ್ಯಕ್ಕೆೆ ಆದ್ಯತೆ ನೀಡಬೇಕು. ನಾಯಕತ್ವ ದೊರೆತಾಗ ಅದನ್ನು ಸದ್ವಿಿನಿಯೋಗ ಮಾಡಿಕೊಂಡು ಅಭಿವೃದ್ಧಿಿ ಕಾರ್ಯ ಮಾಡಬೇಕು ಎಂದರು.
ನಿರ್ಗಮಿತ ಪ್ರಾಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತ ಮಾತನಾಡಿ, ನಮ್ಮ ಅವಧಿಯಲ್ಲಿ ಹುಲಿಕೆರೆ ಅಭಿವೃದ್ಧಿಿ ಕಾರ್ಯಕ್ಕೆೆ 4 ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಿಯೆ ಪೂರ್ಣ ಹಂತಕ್ಕೆೆ ಬಂದಿದೆ. ಗವಿಮಠ ರಸ್ತೆೆಯ ಉದ್ಯಾಾನವನ ಅಭಿವೃದ್ಧಿಿ, ಡಿಸಿ ಕಚೇರಿ-ಮಂಗಳಾಪುರ ರಸ್ತೆೆವರೆಗೂ ಗಿಡ ನೆಡುವ ಕೆಲಸ ಮಾಡಿದೆ. ಕೊಪ್ಪಳ ನಗರದಲ್ಲಿ ಸಾಕಷ್ಟು ಅಭಿವೃದ್ಧಿಿ ಕಾರ್ಯಗಳನ್ನು ಮಾಡಲಾಗಿದೆ ಎಂದರಲ್ಲದೇ, ಮಳೆಮಲ್ಲೇಶ್ವರ ದೇವಸ್ಥಾಾನದ ಬೆಟ್ಟದ ಮೇಲೆ ಕಮಲ ಸರೋವರ ಪ್ರವಾಸಿ ತಾಣವನ್ನಾಾಗಿ ಅಭಿವೃದ್ಧಿಿಪಡಿಸಬೇಕು ಎಂದರು.
ನೂತನ ಅಧ್ಯಕ್ಷ ಪ್ರಸನ್ನ ಗಡಾದ ಮಾತನಾಡಿ, ನನಗೆ ಇದು ಅಧಿಕಾರವಲ್ಲ, ಜವಾಬ್ದಾಾರಿ ಎಂದು ಭಾವಿಸುತ್ತೇನೆ. ನನಗೆ ದೊರೆತ ಅವಧಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿಿ ಕಾರ್ಯ ಮಾಡುವೆ. ಹಿಂದಿನ ಅಧ್ಯಕ್ಷರು ಆರಂಭಿಸಿದ ಉತ್ತಮ ಯೋಜನೆಗಳನ್ನು ಮುಂದುವರಿಸುತ್ತೇನೆ. ಶಾಸಕರು ಮತ್ತು ಸಂಸದರ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವೆ. ಕೊಪ್ಪಳ ನಗರಕ್ಕೆೆ ಸ್ವಚ್ಛ ಹಾಗೂ ಸುಂದರ ವಾತಾವರಣ ನಿರ್ಮಿಸುವುದು ನನ್ನ ಗುರಿ. ವಾಯು ಮಾಲಿನ್ಯ ತಡೆಗೆ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಂಗ್ರೆೆಸ್ ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಸ್ವಾಾಗತಿಸಿದರು.
ಸಮಾರಂಭದಲ್ಲಿ ಮುಖಂಡರಾದ ಅಮ್ಜದ್ ಪಟೇಲ್, ಕಾಟನ್ ಪಾಷಾ, ಕೃಷ್ಣಾಾರಡ್ಡಿಿ ಗಲಬಿ, ಲತಾ ಚಿನ್ನೂರು, ಜ್ಯೋೋತಿ ಗೊಂಡಬಾಳ, ಕೆ.ಎಂ. ಸೈಯದ್, ರೇಷ್ಮಾಾ ಖಾಜಾವಲಿ, ರಾಮಣ್ಣ ಚೌಡ್ಕಿಿ, ವಿ.ಆರ್. ಪಾಟೀಲ್, ಅಜ್ಜಪ್ಪ ಸ್ವಾಾಮಿ, ಪಾಷಾ ಖರೀಬ್, ಮಾಕರ್ಂಡಪ್ಪ ಕಲ್ಲಣ್ಣನವರ, ರಮೇಶ್ ಹ್ಯಾಾಟಿ, ಯಮನೂರಪ್ಪ ಕಬ್ಬೇರ, ತೋಟಪ್ಪ ಕಾಮನೂರು, ಮಾಲತಿ ನಾಯಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿಿತರಿದ್ದರು.
ಕೊಪ್ಪಳ ನಗರಾಭಿವೃದ್ಧಿಗೆ ಆದ್ಯತೆ ಕೊಡಲಿ : ಹಿಟ್ನಾಳ

