ಸುದ್ದಿಮೂಲ ವಾರ್ತೆ ರಾಯಚೂರು, ಅ.15:
ರಾಯಚೂರು ಮಹಾನಗರ ಪಾಲಿಕೆಯಿಂದ ಅನೇಕ ಅಭಿವೃದ್ದಿಘಿ, ಜನಪರ ಕಾಮಗಾರಿಗಳು ಆಗುತ್ತಿಿದ್ದರೂ ಅದನ್ನು ಸಹಿಸದ ಬಿಜೆಪಿ ಸದಸ್ಯರು, ಮುಖಂಡರು ಸುಳ್ಳು ಆರೋಪ ಮಾಡುತ್ತಿಿದ್ದಾಾರೆ ಎಂದು ಆರ್ಡಿಎ ಸದಸ್ಯ ನರಸಿಂಹಲು ಮಾಡಗಿರಿ ತಿರುಗೇಟು ನೀಡಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನಗರಸಭೆ ಮೇಲ್ದರ್ಜೆಗೇರಿ 7 ತಿಂಗಳು ಕಳೆದಿದ್ದು ಮೂರು ಸಾಮಾನ್ಯ ಸಭೆ, ಜ.8 ಹಾಗೂ ಮಾ.18 ಮತ್ತು ಒಂದು ಬಜೆಟ್ ಸಭೆ ನಡೆಸಲಾಗಿದೆ ಇದರಲ್ಲಿ ಆರೋಪಿಸಿದ ಸದಸ್ಯರೂ ಭಾಗಿಯಾಗಿದ್ದಾಾರೆ. ಸ್ವಚ್ಛತೆಗಾಗಿಯೇ 411 ಪೌರಕಾರ್ಮಿಕರು, ಮೇಲ್ವಿಿಚಾರಕರು, 78 ಆಟೋ ಟಿಪ್ಪರ್, 21 ಟಿಪ್ಪರ್ , 3 ಚಿಕ್ಕ ಮತ್ತು 3 ದೊಡ್ಡದಾದ ಜೆಸಿಬಿಗಳ ಖರೀದಿ ಮಾಡಿ ಸ್ವಚ್ಛ ಭಾರತ ಯೋಜನೆಯಡಿ 1 ಕೋ 17 ಲಕ್ಷದಲ್ಲಿ ಯಂತ್ರಗಳ ಖರೀದಿ ಮಾಡಿ ನಿತ್ಯ ಕಸದ ವಿಲೇವಾರಿ ನಡೆಯುತ್ತಿಿದೆ. ಇದೆಲ್ಲ ನಾವು ಅಧಿಕಾರಕ್ಕೆೆ ಬಂದ ಮೇಲೆಯೇ ಆಗಿದ್ದುಘಿ.
ಇ-ಖಾತಾ ಹಾಗೂ ಬಿ ಖಾತಾ ವಿತರಣೆಯಲ್ಲಿ ಕೆಲ ವಾರ್ಡ್ಗಳಲ್ಲಿ ಕೋಟೆ, ಕಂದಕ, ಕೆರೆ ಎಂದು ದಿಶಾ ತಂತ್ರಾಾಂಶದಲ್ಲಿ ತೋರಿಸುತ್ತಿಿರುವುದು ನಿಜ. ಅದೆಲ್ಲವನ್ನೂ ಸರಿಪಡಿಸುವ ಕೆಲಸಕ್ಕೆೆ ಮುಂದಾಗಿ ಕಾನೂನು ಬದ್ದಗೊಳಿಸಿ ರಾಜ್ಯ ಸರ್ಕಾರಕ್ಕೆೆ ಪತ್ರ ಬರೆದಿದ್ದೇವೆ. ಒಮ್ಮೆೆ ಸಮಸ್ಯೆೆ ಇತ್ಯರ್ಥಗೊಳಿಸಲು ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸುವ ಚಿಂತನೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಈ ಮಧ್ಯೆೆಯೂ ಖಾತಾ ಹಂಚಿಕೆಯಲ್ಲಿಯೂ ಭಾರಿ ಪ್ರಗತಿ ಮಾಡಲಾಗಿದೆ. 2024ರಲ್ಲಿ ಏಪ್ರಿಿಲ್ 1 ರಿಂದ ಸೆಪ್ಟೆೆಂಬರ್ವರೆಗೆ 3,335 ಎ-ಖಾತಾ ನೀಡಲಾಗಿತ್ತು. ಆದರೆ, ಈ ವರ್ಷ 3,700 ಎ ಹಾಗೂ , 1,249 ಬಿ-ಖಾತಾ ನೀಡಲಾಗಿದೆ. ನಗರದಲ್ಲಿ 2024ರಲ್ಲಿ ಶೇ.68ರಷ್ಟು ಈ ಬಾರಿ ಶೇ.82ರಷ್ಟು ತೆರಿಗೆ ವಸೂಲಿ ಮಾಡಲಾಗಿದೆ ಎಂದರು.
ಈ ಬಾರಿಯ ಮಳೆಗಾಲದಲ್ಲಿ ತೆಗ್ಗು ಪ್ರದೇಶದಲ್ಲಿ ನೀರು ನುಗ್ಗಿಿಲ್ಲ ಅದಕ್ಕಾಾಗಿ ರಾಜ ಕಾಲುವೆ ಹೂಳೆತ್ತಿಿದ್ದೇವೆ, ಕಸದ ರಾಶಿ ತೆರವುಗೊಳಿಸಿದ್ದೇವೆ. ಗಂಜ್ ವೃತ್ತದಿಂದ ಆರ್ಟಿಓ, ನೇತಾಜಿ ವೃತ್ತದಿಂದ ಬಿಆರ್ಬಿ ವೃತ್ತದ ವರೆಗೂ ಬೀದಿ ದೀಪ ಅಳವಡಿಸಿದ್ದೇವೆ. ಬಡಾವಣೆಯ ಒಳ ರಸ್ತೆೆಗಳಲ್ಲೂ ವಿದ್ಯುತ್ ದೀಪ ಅಳವಡಿಸುವ ಕೆಲಸ ನಡೆಯುತ್ತಿಿದೆ ಅದಕ್ಕಾಾಗಿಯೇ 2 ಕೋಟಿ ವೆಚ್ಚದ ಟೆಂಡರ್ ಕರೆಯಲಾಗುತ್ತಿಿದೆ ಎಂದು ವಿವರಿಸಿದರು.
ಐತಿಹಾಸಿಕ ಪುರಾತನ ಖಾಸಬಾವಿಯಲ್ಲಿ ಸಹ ಹೂಳು ತೆಗೆಯಲಾಗುತ್ತಿಿದೆ. ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿಿರುವ ಖಾಯಂ ನೌಕರರ ಒಂದು ಕೋಟಿ ಅಪಘಾತ , ಗುತ್ತಿಿಗೆ ಮತ್ತು ಹೊರ ಗುತ್ತಿಿಗೆ ನೌಕರರಿಗೆ 50 ಲಕ್ಷ ವಿಮೆ ಮಾಡಿಸಲಾಗಿದೆ, ಮಕ್ಕಳಿಗೆ 10 ಲಕ್ಷ ರೂ ಶಿಕ್ಷಣ ಸಾಲ, ತೆರಿಗೆ ಸಂಗ್ರಹ ಪ್ರಕ್ರಿಿಯೆ ನಡೆಸಲಾಗಿದೆ ಎಂದರು. 15ನೇ ಹಣಕಾಸು ಯೋಜನೆಯಡಿ 82ಕೋಟಿಯಲ್ಲಿ 57 ಕೋಟಿ ವೆಚ್ಚ ಮಾಡಿದ್ದೇವೆ. ಕೋಟೆ ಅಲಂಕಾರಕ್ಕೆೆ 2 ಕೋ ಅನುದಾನ ನೀಡಲಾಗಿದೆ. 136 ಹೊರಗುತ್ತಿಿಗೆ ಕಾರ್ಮಿಕರ ನೇಮಕಕ್ಕೆೆ 3 ಕೋ 6 ಲ ಕಾರ್ಯಾದೇಶ ನೀಡಲಾಗಿದೆ. ಮಾವಿನ ಕೆರೆ ಅಭಿವೃದ್ದಿಗೆ 39 ಲಕ್ಷ ಹೀಗೆ ಇವೆಲ್ಲ ಪಾಲಿಕೆಯಾದ ಮೇಲೆ ಮಾಡಿದ ಕಾಮಗಾರಿ, ಅಭಿವೃದ್ದಿ ಅಲ್ಲವೇ ಎಂದು ಪ್ರಶ್ನಿಿಸಿದ ಅವರು, ಬಿಜೆಪಿ ಸದಸ್ಯರು, ಮುಖಂಡರು ತೇಜೋವಧೆ ಮಾಡಲು ಇಲ್ಲ ಸಲ್ಲದ ಆರೋಪ ಮಾಡುತ್ತಿಿದ್ದಾಾರೆ ಎಂದು ಆಪಾದಿಸಿದರು.
ಪಾಲಿಕೆಯ ವ್ಯಾಾಪ್ತಿಿಯ ವಸತಿ ಸಂಕೀರ್ಣಗಳಲ್ಲಿ ಕಡಿಮೆ ಬಾಡಿಗೆ ಸಂಬಂಧಿಸಿದ ಈಗ ಕಾರ್ಯ ಶುರುವಾಗಿದ್ದು ಬಾಡಿಗೆ ಹೆಚ್ಚಿಿಸುವ ಸಂಬಂಧ ಚರ್ಚೆ ನಡೆಯುತ್ತಿಿದೆ. ಕೆಲವರು ನ್ಯಾಾಯಾಲಯಕ್ಕೆೆ ಹೋಗಿದ್ದು ಅವರ ಮನವೊಲಿಸುವ ಕೆಲಸವೂ ನಡೆದಿದೆ. ಬಾಡಿಗೆ ಹೆಚ್ಚಿಿಗೆ ನೀಡಲು ಸೂಚಿಸಲಾಗಿದೆ. ಶೀಘ್ರವೆ ಆ ಸಮಸ್ಯೆೆಯೂ ಪರಿಹಾರವಾಗಲಿದೆ ಎಂದ ಅವರು ಮೇಯರ್, ಉಪಮೇಯರ್ ಭೇಟಿಗೆ ಯಾರ ಆಕ್ಷೇಪ ಅಡ್ಡಿಿಯೂ ಇಲ್ಲಘಿ. ಎಲ್ಲ ಸಮಯದಲ್ಲೂ ಲಭ್ಯ ಇರುತ್ತೇವೆ. ಆಯುಕ್ತರು ಸಹಿತ ಲಭ್ಯ ಇರುತ್ತಾಾರೆ. ರಾಜಕೀಯ ದುರುದ್ದೇಶದಿಂದ ಬಿಜೆಪಿ ಈ ರೀತಿ ಆಪಾದಿಸುವುದು ಸರಿಯಲ್ಲ ಸಾರ್ವಜನಿಕರಿಗೆ ನೀಡುವ ಸೌಲಭ್ಯಗಳ ಬಗ್ಗೆೆ ಸಮಗ್ರ ಮಾಹಿತಿಯಿದ್ದು, ಬಿಜೆಪಿ ಸುಳ್ಳುಗಳನ್ನು ನಂಬುವುದಿಲ್ಲ ಎಂದು ಸಮರ್ಥಿಸಿಕೊಂಡರು.
ಸುದ್ದಿಗೋಷ್ಠಿಿಯಲ್ಲಿ ಪಾಲಿಕೆ ಸದಸ್ಯರಾದ ದರೂರು ಬಸವರಾಜ ಪಾಟೀಲ, ಜಿಂದಪ್ಪಘಿ, ಎನ್.ಶ್ರೀನಿವಾಸರೆಡ್ಡಿಿಘಿ, ಮುಖಂಡರಾದ ವಾಹಿದ್, ಹರಿಬಾಬು, ಲಕ್ಷ್ಮೀರೆಡ್ಡಿಿಘಿ, ತಾಯಪ್ಪಘಿ, ವಿಶ್ವನಾಥ ಪಟ್ಟಿಿ ಇತರರಿದ್ದರು.