ಸುದ್ದಿಮೂಲ ವಾರ್ತೆ ಕಲಬುರಗಿ, ನ.16:
ಆರ್ ಎಸ್ ಎಸ್ ಜತೆಗಿನ ಸಂಘರ್ಷ ಇದೀಗ ಪ್ರಾಾರಂಭವಾಗಿದೆ ಎಂದು ಗ್ರಾಾಮೀಣಾಭಿವೃದ್ಧಿಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ನೋಂದಣಿ ಆಗಿಲ್ಲ. ಒಮ್ಮೆೆ ನೋಂದಣಿ ಆದರೆ ತೆರಿಗೆ ವ್ಯಾಾಪ್ತಿಿಗೆ ಬರುತ್ತದೆ. ಇವರು ಗುರುದಕ್ಷಿಣೆ ಎನ್ನುತ್ತಾಾರೆ. ನೋಂದಣಿ ಆಗದ ಸಂಘಕ್ಕೆೆ ಗುರುದಕ್ಷಿಣೆ ಕೊಡುವವರ ಲೆಕ್ಕಗಳು ಕೂಡಾ ಆಡಿಟ್ ಆಗಬೇಕಲ್ಲ ಎಂದರು.
ಗೈಡ್ ಲೈನ್ಸ್ ಪ್ರಕಾರ ಪಥಸಂಚಲನ:
ಗೈಡ್ ಲೈನ್ಸ್ ಪ್ರಕಾರ ಆರ್ ಎಸ್ ಎಸ್ ಪಥಸಂಚಲನ ನಡೆದಿದೆ. ಸರ್ಕಾರದ ಪ್ರಕಾರ ಇದು ನಡೆಯುತ್ತಿಿದೆ. ಎಷ್ಟು ಜನ ಇರಬೇಕು, ಯಾವ ಮಾರ್ಗದಲ್ಲಿ ಹೋಗಬೇಕು ಯಾರು ಯಾರು ಇರಬೇಕು ಎಂದು ನಾವು ನಿರ್ಧರಿಸಿದ್ದೇವೆ ಅದೇ ಪ್ರಕಾರ ಎಲ್ಲವೂ ನಡೆಯುತ್ತಿಿದೆ ಎಂದರು.
ಮೂರು ಸಾವಿರ ಜನ ಬರುತ್ತಾಾರೆ ಎಂದಿದ್ದರಲ್ಲ, ಎಷ್ಟು ಜನ ಬಂದರು ? ಕೇವಲ ಮುನ್ನೂರು ಮಾತ್ರ. ಆಶೋಕ್ ಬಂದರಾ? ವಿಜಯೇಂದ್ರ ಬಂದರಾ? ಹೋಗಲಿ ಕಲಬುರಗಿ ಯಿಂದ ಯಾರಾದರೂ ಹೋಗಿದ್ದಾರೆಯೇ? ಒಂದು ವೇಳೆ ಚಿತ್ತಾಾಪುರ ಹೊರತುಪಡಿಸಿ ಹೊರಗಿನವರು ಹೋಗಿದ್ದರೆ ನ್ಯಾಾಯಾಲಯದ ಆದೇಶ ಉಲ್ಲಂಘನೆಯಾಗುತ್ತದೆ ಎಂದರು.
ಕೆಕೆಆರ್ಡಿಬಿ ದುಡ್ಡನ್ನು ಕಲಬುರಗಿಯಲ್ಲಿ ಆರ್ಎಸ್ ಎಸ್ ನವರು ಹೇಗೆ ಲೂಟಿ ಹೊಡೆದಿದ್ದಾರೆ ಎನ್ನುವುದನ್ನು ದಾಖಲೆ ಸಮೇತ ಸಧ್ಯದಲ್ಲೇ ನಿಮ್ಮ ಮುಂದೆ ಇಡಲಿದ್ದೇನೆ ಎಂದು ಹೇಳಿದರು.
ಬಿಹಾರ ಲಿತಾಂಶ ಕರ್ನಾಟಕದಲ್ಲಿಯೂ ಪರಿಣಾಮ ಬೀರಲಿದೆಯಾ ಎನ್ನುವ ಪ್ರಶ್ನೆೆಗೆ ಪ್ರತಿಕ್ರಿಿಸಿ, ಮತದಾರರನ್ನ ಬಿಹಾರದಿಂದ ಕರೆಸುತ್ತಾಾರೆಯೇ? ಚುನಾವಣೆಯಲ್ಲಿ ಗೆಲುವು ಸೋಲು ಸಾಮಾನ್ಯ. ನಾವು ಸೋಲು ಒಪ್ಪಿಿದ್ದೇವೆ. ಆದರೆ ಇಷ್ಟೊೊಂದು ಆಡಳಿತ ವಿರೋಧಿ ಅಲೆ ಇದ್ದಾಗಲೂ ಅವರು ಪಡೆದ ಮತಪ್ರಮಾಣದ ಬಗ್ಗೆೆ ಅನುಮಾನವಿದೆ. ಡಾಟಾ ಹೊರಗೆ ಬರಲಿ ನೋಡೋಣ ಎಂದರು.
ಇಲ್ಲೇ ಆಳಂದ ಹಾಗೂ ಮಹಾದೇವಪುರದಲ್ಲಿ ಏನು ನಡೆದಿದೆ ಎನ್ನುವುದನ್ನು ದಾಖಲೆ ಸಮೇತ ಕೊಡುತ್ತೇವೆ. ಚುನಾವಣೆ ಆಯೋಗದ ಪಾತ್ರ ಏನಿದೆ ಎಂದು ಗೊತ್ತಾಾಗಲಿದೆ. ಬಿಹಾರದಲ್ಲಿ ಚುನಾವಣೆಗೆ ಮುನ್ನ ಮಹಿಳೆಯರಿಗೆ ಹಣ ಬಿಡುಗಡೆ ಮಾಡಲು ಅಡ್ಡಿಿ ಮಾಡದ ಚುನಾವಣೆ ಆಯೋಗ ತೆಲಂಗಾಣದಲ್ಲಿ ಅಡ್ಡಿಿ ಮಾಡಿತು ಎಂದು ಆರೋಪಿಸಿದರು.
ಸಿಎಂ ಅವರು ಕ್ಯಾಾಬಿನೆಟ್ ವಿಸ್ತರಣೆ ಕುರಿತಂತೆ ಏನು ಹೇಳಿದ್ದಾರೆ ಅದೇ ೈನಲ್. ಇದೆಲ್ಲ ಮಾಧ್ಯಮದ ವಲಯಲ್ಲಿ ಚರ್ಚೆ ನಡೆದಿದೆ ಎಂದು ಅವರೇ ಹೇಳಿದ್ದಾರೆ. ದೆಹಲಿಯಲ್ಲಿ ಸಿಎಂ, ಮೋದಿ ಅವರೊಂದಿಗೆ ಕಬ್ಬು ಇತ್ಯಾಾದಿ ವಿಚಾರ ಚರ್ಚೆ ನಡೆಸಲಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರದು ಐರನ್ ಲೆಗ್ ಎನ್ನುವ ಅಶೋಕ್ ಅವರ ಟೀಕೆ ಕುರಿತು ಪ್ರತಿಕ್ರಿಿಸಿ, ಅವರು ಎಂದಾದರೂ ಜನರ ಪರವಾದ ಹೋರಾಟ ನಡೆಸಿದ್ದಾರೆಯೇ,? ಅಶೋಕ್ ಅವರ ಕಾಲ್ಗುಣ ಚೆನ್ನಾಾಗಿದೆಯಾ? ಗಣವೇಷದಾರರು ಎಂದಾದರೂ ಜನರ ಕಣ್ಣೀರು ಒರೆಸಿದ್ದು ನೋಡಿದ್ದೀರಾ ಎಂದರು.
ನವೆಂಬರ್ನಲ್ಲಿ ಬದಲಾವಣೆ ಆಗುತ್ತದೆ ಎಂದು ಬಿಜೆಪಿಯವರು ಹೇಳುತ್ತಿಿದ್ದಾರಲ್ಲ ಎನ್ನುವ ಪ್ರಶ್ನೆೆಗೆ ಉತ್ತರಿಸಿದ ಪ್ರಿಿಯಾಂಕ್ ಖರ್ಗೆ, ಅಧ್ಯಕ್ಷರಾಗಿ ಎರಡು ವರ್ಷ ಆಯ್ತಲ್ಲ, ಅಲ್ಲೇ ಬದಲಾವಣೆ ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

