ಸುದ್ದಿಮೂಲ ವಾರ್ತೆ ಬೆಂಗಳೂರು, ಅ.18:
ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ನಿಷೇಧದ ಬೆನ್ನಲ್ಲೆ, ಚಿತ್ತಾಾಪುರದಲ್ಲಿ ಭಾನುವಾರ ಪಥಸಂಚಲನ ಹಮ್ಮಿಿಕೊಂಡಿದೆ. ಆದರೆ ಈ ಪಥ ಸಂಚಲನಕ್ಕೆೆ ಅನುಮತಿ ಪಡೆಯದ ಹಿನ್ನೆೆಲೆಯಲ್ಲಿ ಆರ್ಎಸ್ಎಸ್ ಬ್ಯಾಾನರ್ ಹಾಗೂ ಭಗವಾಧ್ವಜಗಳನ್ನು ತೆರವುಗೊಳಿಸಲಾಗಿದೆ ಎಂದು ಸಚಿವ ಪ್ರಿಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಬ್ಯಾಾನರ್, ಧ್ವಜ, ಪಥಸಂಚಲನ ಯಾವುದೇ ಇರಬಹುದು. ಆಯೋಜಕರು ಅನುಮತಿ ತೆಗೆದುಕೊಂಡಿಲ್ಲ. ಅನಧಿಕೃತವಾಗಿ ನಮ್ಮ ಪಕ್ಷದ ಬ್ಯಾಾರ್ನ ಹಾಕಿದಾಗಲೇ ನನಗೆ ಕಮಿಷರ್ನ ೈನ್ ಹಾಕಿದ್ದರು. ಎಲ್ಲದಕ್ಕೂ ನಿಯಮ ಅಂತ ಇರುತ್ತದೆ ಎಂದು ಹೇಳಿದರು.
ಪಥ ಸಂಚಲನಕ್ಕೆೆ ಅನುಮತಿ ತೆಗೆದುಕೊಂಡಿಲ್ಲ. ಕೇವಲ ಮಾಹಿತಿ ಕೊಡುವುದಲ್ಲ. ಪಥ ಸಂಚಲನಕ್ಕೆೆ ಅನುಮತಿ ಕೋರಿಲ್ಲ. ಸಂಘಟನೆಯ ನೋಂದಣಿ ಸಂಖ್ಯೆೆ, ಎಷ್ಟು ಜನರು ಸೇರುತ್ತಾಾರೆ, ಏನಾದರೂ ಆದರೆ ನಾವು ಜವಾಬ್ದಾಾರರು ಎಂದು ಅಧಿಕೃತ ವ್ಯಕ್ತಿಿಗಳು ಅನುಮತಿ ಪಡೆಯಲಿ ಎಂದು ಸಚಿವ ಪ್ರಿಿಯಾಂಕ ಖರ್ಗೆ ತಿಳಿಸಿದರು.
ಆರ್ಎಸ್ಎಸ್ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿದರೆ ಅದೇನು ರಾಷ್ಟ್ರ ಧ್ವಜನಾ? ಆರ್ಎಸ್ಎಸ್ ನವರು ಕಟ್ಟರ್ ಪಂಥಿಗಳು. ಮನೆಗೆ ನುಗ್ಗಿಿ ಹೊಡೆಯುತ್ತೇವೆ ಅಂತ ಬಿಜೆಪಿ ಮುಖಂಡನೊಬ್ಬ ಹೇಳುತ್ತಾಾನೆ. ಇವರನ್ನು ನಾವು ಬಿಡಬೇಕ? ಈ ಬಗ್ಗೆೆ ಡಿಜಿಪಿಗೆ ದೂರು ನೀಡುತ್ತೇನೆ. ಕಾನೂನು ಪಾಲನೆ ಮಾಡಿ ಅಂದರೆ ತಪ್ಪಾಾ? ಅವರು ನನಗೆ ಚಾಲೆಂಜ್ ಮಾಡುತ್ತಿಿಲ್ಲ. ಕಾನೂನುಗಳಿಗೆ ಸವಾಲು ಹಾಕುತ್ತಿಿದ್ದಾರೆ. ನಾಳೆ ಕಾನೂನು ಪಾಲನೆ ಮಾಡಲ್ಲ ಅಂತಾರೆ ಆಗ ಏನಾಗುತ್ತದೆ? ಆರ್ಎಸ್ಎಸ್ ನವರು ಸುಸಂಸ್ಕೃತರು ಅಂತ ಅಂದುಕೊಂಡಿದ್ದೆವು. ಮೊನ್ನೆೆ ನಿಮ್ಮ ಭಾಷೆ ಎಲ್ಲ ಗೊತ್ತಾಾಗಿದೆ ಅನುಮತಿ ಪಡೆದಿಲ್ಲ, ಅದಕ್ಕೆೆ ಎಲ್ಲವನ್ನು ತೆರವು ಮಾಡಿದ್ದೇವೆ ಎಂದು ಪ್ರಿಿಯಾಂಕ ಖರ್ಗೆ ಪ್ರತಿಕ್ರಿಿಯಿಸಿದರು.