ಸುದ್ದಿಮೂಲ ವಾರ್ತೆ ಬೆಂಗಳೂರು, ಅ.20:
ರಸ್ತೆೆ ಮೇಲೆ ಪ್ರಾಾರ್ಥನೆ ಮಾಡಲು ಕೂಡ ಅರ್ಜಿ ಹಾಕಿ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಪ್ರಾಾರ್ಥನೆ ಸಲ್ಲಿಸುವಂತಿಲ್ಲ ಎಂದು ಸಚಿವ ಪ್ರಿಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳದಲ್ಲಿ ಪ್ರಾಾರ್ಥನೆಗೆ ಅವಕಾಶ ಕೊಡಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಾಳ್ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಿಯಿಸುತ್ತಾಾ, ಅವರು ಕೂಡ ಪರವಾನಗಿ ಪಡೆಯಬೇಕು. ಅವರು ಅರ್ಜಿ ಹಾಕಿ ಅನುಮತಿ ಪಡೆದುಕೊಳ್ಳಬೇಕು. ಈ ಸಂಬಂಧ ಯತ್ನಾಾಳ್ ಅವರು ಇಂಗ್ಲಿಿಷನಲ್ಲಿ ಪತ್ರ ಬರೆದಿದ್ದೇ ವಿಶೇಷ ಅನಿಸುತ್ತದೆ. ಯಾರಿಗೆ ಸಂದೇಶ ಕೊಡುವುದಕ್ಕೆೆ ಇಂಗ್ಲಿಿಷನಲ್ಲಿ ಪತ್ರ ಬರೆದಿದ್ದಾರೆ ಗೊತ್ತಿಿಲ್ಲ. ಸಿಎಂ ಅವರಿಗೆ ಗೊತ್ತಾಾಗಲಿ ಅಂತಾನೋ, ಅಮಿತ್ ಶಾಗೆ ಗೊತ್ತಾಾಗಲಿ ಎಂದು ಬರೆದಿದ್ದಾರೆಯೇ ಗೊತ್ತಿಿಲ್ಲ ಎಂದು ಕಿಡಿ ಕಾರಿದರು.
ಶಾಸಕ ಸುನೀಲ್ ಕುಮಾರ್ ಪುತ್ರನಿಗೆ ಒಂದು ದಿನ ನಾನು ಹೇಳಿದೆ ಅಂತ ಗಣವೇಷ ಹಾಕಿಸಿದ್ದಾರೆ. ಒಂದು ದಿನ ಗಣವೇಷ ಹಾಕಿಸುವುದು ಅಲ್ಲ. ತ್ರಿಿಶೂಲ ದೀಕ್ಷೆ ಕೊಡಿಸಿ, ಶಾಲೆ ಕಾಲೇಜು ಬಿಡಿಸಿ ಶಾಖೆಗೆ ಕಳುಹಿಸಿ. ಪೂರ್ಣ ಪ್ರಮಾಣದ ಕಾರ್ಯಕರ್ತ ಮಾಡಿ ಎಂದು ಎದುರೇಟು ನೀಡಿದರು.
ಕೋರ್ಟ್ ಮತ್ತೊೊಂದು ಅರ್ಜಿ ಹಾಕುವಂತೆ ತಿಳಿಸಿದೆ:
ಆರ್ಎಸ್ಎಸ್ ಪಥ ಸಂಚಲನ ಕುರಿತು ಹೈಕೋರ್ಟ್ ಮತ್ತೊೊಂದು ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಮೊದಲು ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಕುವುದಿಲ್ಲ. ಪರವಾನಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರೆ ಹೇಗೆ ಎಂದು ಸಚಿವರು ಪ್ರಶ್ನಿಿಸಿದರು.
ಸರ್ಕಾರಿ ಅಧಿಕಾರಿಗಳು ಆರ್ಎಸ್ಎಸ್ನಲ್ಲಿ ಭಾಗವಹಿಸಬಹುದು ಎಂಬ ಕೇಂದ್ರ ಸರ್ಕಾರದ ಆದೇಶದ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ಅದನ್ನ ಜಾರಿಗೆ ತಂದಿದೆ. ಅದನ್ನು ಕೇಂದ್ರದವರು ಮಾಡಿಕೊಳ್ಳಲಿ. ಆದರೆ ರಾಜ್ಯ ಸರ್ಕಾರದಲ್ಲಿ ಅಂತಹ ನಿಯಮ ಇಲ್ಲ. ನಮ್ಮಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದರು.
ಪ್ರಿಿಯಾಂಕ್ ಖರ್ಗೆ ಒಂಟಿಯಾಗಿಲ್ಲ
ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮ್ಮ ನಾಯಕರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ, ನಮ್ಮ ಪಕ್ಷದ ಅಧ್ಯಕ್ಷರು ಈ ಬಗ್ಗೆೆ ಮಾತನಾಡಿ ನನ್ನ ಪರ ನಿಂತಿದ್ದಾರೆ.
ಬಿಜೆಪಿಯವರು ಕಳೆದ ಒಂದು ವಾರದಿಂದ ನನ್ನ ಬಗ್ಗೆೆ ವೈಯಕ್ತಿಿಕವಾಗಿ ಮಾತನಾಡಿದ್ದಾರೆ. ನನ್ನ ತಮ್ಮನ ಆರೋಗ್ಯದ ಬಗ್ಗೆೆ, ಕುಟುಂಬದ ಬಗ್ಗೆೆ ಮಾತಾಡಿದ್ದಾರೆ. ನಾನು ಕೇಳಿದ ಒಂದು ಪ್ರಶ್ನೆೆಗೆ ಉತ್ತರ ಕೊಟ್ಟಿಿದ್ದಾರೆಯೇ. ಸರಳ ಪ್ರಶ್ನೆೆ ಕೇಳ್ತಿಿದ್ದೇನೆ ಅಷ್ಟೆೆ. ಸಾವರ್ಕರ್ ಯಾರು. ಅವರಿಗೆ ವೀರ ಎಂದು ಬಿರುದು ಕೊಟ್ಟಿಿದ್ದು ಯಾರು. ಆರ್ಎಸ್ಎಸ್ ಕಚೇರಿ ಮೇಲೆ ಬಾವುಟ ಏಕೆ ಹಾರಿಸಿಲ್ಲ. ಇದಕ್ಕೆೆ ಉತ್ತರ ಕೊಟ್ಟಿಿಲ್ಲ. ಕೆಂಪುಕೋಟೆ ಮೇಲೆ ನಿಂತು ದೊಡ್ಡ ಸಂಘಟನೆ ಮತ್ತೊೊಂದಿಲ್ಲ ಅಂತಾರೆ. 100 ವರ್ಷ ಆಗುತ್ತಿಿದೆ. ಇದಕ್ಕೆೆ ನಾಣ್ಯ ಬಿಡುಗಡೆ ಮಾಡುತ್ತಿಿದ್ದೇವೆ ಎನ್ನುತ್ತಾಾರೆ. ಇದರ ಬಗ್ಗೆೆ ಹೇಳಿ ಅಂದ್ರೆೆ ನನ್ನ ಬಗ್ಗೆೆ ಮಾತಾಡ್ತಾಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಾಳಿ ನಡೆಸಿದರು.