ಸುದ್ದಿಮೂಲ ವಾರ್ತೆ ಬೆಂಗಳೂರು, ಅ.14:
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲವಾದರೆ ಬಿಜೆಪಿ ಹಾಗೂ ಸಂಘ ಪರಿವಾರ ಪ್ರಿಿಯಾಂಕ್ ಖರ್ಗೆ ಅವರ ಪತ್ರಕ್ಕೆೆ ಹೆದರುತ್ತಿಿರುವುದು ಏಕೆ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ವಾಗ್ದಾಾಳಿ ನಡೆಸಿದರು.
ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿಷೇಧಿಸಬೇಕು ಎಂದು ಸಿಎಂಗೆ ಸಚಿವ ಪ್ರಿಿಯಾಂಕ್ ಖರ್ಗೆ ಪತ್ರ ಬರೆದ ಹಿನ್ನೆೆಲೆಯಲ್ಲಿ ಬಿಜೆಪಿ ನಾಯಕರ ಹೇಳಿಕೆಯಿಂದ ಪ್ರಚೋದನೆಗೊಂಡ ಕಾರ್ಯಕರ್ತರು ಸಚಿವರಿಗೆ ಬೆದರಿಕೆ ಹಾಕುತ್ತಿಿದ್ದಾರೆ.
ಪ್ರಿಿಯಾಂಕ್ ಖರ್ಗೆ ಹೇಳಿಕೆಯಿಂದ ಕೆರಳಿದ ಬಿಜೆಪಿ ನಾಯಕರು ನಿರಂತರವಾಗಿ ಟೀಕೆ ಮಾಡುತ್ತಿಿದ್ದಾರೆ. ಇದರಿಂದ ಉದ್ರೇೇಕಗೊಂಡ ಕಾರ್ಯಕರ್ತರು ಸಚಿವರಿಗೆ ಬೆದರಿಕೆ ಹಾಕುತ್ತಿಿದ್ದಾರೆ. ಅವರೆಲ್ಲರೂ ಸಂಘ ಪರಿವಾರದಲ್ಲಿ ಕಲಿತವರು. ಅವರು ಬಳಸುತ್ತಿಿರುವ ಭಾಷೆ ಅಲ್ಲೇ ಕಲಿತಿದ್ದಾರೆ. ಮುನಿರತ್ನ ಅವರಿಗೆ ಅತಿಯಾದ ವಿಶ್ವಾಾಸ ಸಂಘ ಪರಿವಾರದ ಬಗ್ಗೆೆ ಇದೆ. ಹೀಗಾಗಿ ಅವರು ಸಂಘ ಪರಿವಾರದ ಚಡ್ಡಿಿ ಹಾಕಿರುವ ೆಟೋ ಇಲ್ಲ. ಅದನ್ನು ಅವರಿಗೆ ಹಾಕಬೇಕು ಎಂದು ತಿಳಿಸಿದರು.
ಕಚ್ಚೆೆಹರುಕ ಎಂದೇ ಖ್ಯಾಾತಿ ಪಡೆದಿರುವ ಸಿ.ಸಿ ಪಾಟೀಲ್ ಅವರು ಪ್ರಿಿಯಾಂಕ್ ಖರ್ಗೆ ಅವರ ವಿರುದ್ಧ ಏಕವಚನದಲ್ಲಿ ಟೀಕೆ ಮಾಡಿದ್ದಾರೆ. ಇವರು ಕಾಂಗ್ರೆೆಸ್ ಹಾಗೂ ಪ್ರಿಿಯಾಂಕ್ ಖರ್ಗೆ ಅವರಿಗೆ ಬುದ್ಧಿಿವಾದ ಹೇಳುತ್ತಿಿದ್ದಾರೆ. ಇನ್ನು ಪ್ರತಾಪ್ ಸಿಂಹ ಅವರಿಗೆ ಕೂಗುಮಾರಿ ಎಂದು ಕರೆಯಬಹುದು. ಅವರು ನ್ಯಾಾಯಾಲಯದಲ್ಲಿ ಯಾವ ಕಾರಣಕ್ಕೆೆ ಇಂಜೆಂಕ್ಷನ್ ಆರ್ಡರ್ ತಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿಿದೆ. ಇಂತಹವರು ಪ್ರಿಿಯಾಂಕ್ ಖರ್ಗೆ ಅವರ ಬಗ್ಗೆೆ ಮಾತನಾಡುತ್ತಾಾರೆ. ಇನ್ನು ವಿಧಾನ ಪರಿಷತ್ತಿಿನಲ್ಲಿ ಮಹಿಳಾ ಸಚಿವರ ಬಗ್ಗೆೆ ಕೀಳು ಪದ ಬಳಕೆ ಮಾಡಿದ ಸಿ.ಟಿ ರವಿ ಅವರು ಪ್ರಿಿಯಾಂಕ್ ಖರ್ಗೆ ಅವರ ಬಗ್ಗೆೆ ಮಾತನಾಡುತ್ತಿಿದ್ದಾರೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ಸಂಘ ಪರಿವಾರದ ಹೆಸರನ್ನು ಬಳಸಿ ಅತಿರೇಕದ ಟೀಕೆ ಮಾಡುತ್ತಿಿದ್ದಾರೆ. ಸಚಿವ ಪ್ರಿಿಯಾಂಕ್ ಖರ್ಗೆ ಅವರು ಸಿಎಂ ಅವರಿಗೆ ಬರೆದ ಪತ್ರ ಹಾಗೂ ಡಿಸಿಎಂ ಅವರು ಶಾಸಕರನ್ನು ಕರೆದದ್ದನ್ನು ಇಟ್ಟುಕೊಂಡು ಕಾಂಗ್ರೆೆಸ್ ವಿರುದ್ಧ ನಿರಂತರ ಟೀಕೆ ಮಾಡುತ್ತಿಿದ್ದಾರೆ.
ಸಂಘ ಪರಿವಾರದಿಂದ ಬಿಜೆಪಿ ನಾಯಕರು ಸಭ್ಯತೆ ಕಲಿತಿದ್ದರೆ, ಸಚಿವ ಪ್ರಿಿಯಾಂಕ್ ಖರ್ಗೆ ಅವರು 4ರಂದು ಸಿಎಂಗೆ ಪತ್ರ ಬರೆದಿರುವುದರ ಬಗ್ಗೆೆ ಚರ್ಚೆಯಾಗಲಿ ಎಂದು ಹೇಳಬೇಕು. ಸಂಘ ಪರಿವಾರದಿಂದಲೇ ಬೆಳೆದಿರುವುದಾಗಿ ಹೇಳಿಕೊಳ್ಳುವ ಅಶೋಕ್, ಬಿಜೆಪಿ ಶಾಸಕರಿಂದಲೇ 20 ಸಾವಿರ ಕೋಟಿ ಭ್ರಷ್ಟಾಾಚಾರದ ಆರೋಪ ಹೊತ್ತಿಿರುವ ವಿಜಯೇಂದ್ರ ಅವರು, ಚೀಟಿ ರವಿ ಎಂದೇ ಖ್ಯಾಾತೆ ಪಡಿದಿರುವ ಸಿ.ಟಿ ರವಿ, ಮಾಜಿ ಸಚಿವ ಅಶ್ವತ್ ನಾರಾಯಣ, ಪಿ.ರಾಜು, ಸಿಸಿ ಪಾಟೀಲ್, ಯತ್ನಾಾಳ್, ಕೆ.ಎಸ್ ಈಶ್ವರಪ್ಪ ಅವರು ಪ್ರಿಿಯಾಂಕ್ ಖರ್ಗೆ ಅವರ ವಿರುದ್ಧ ಮುಗಿಬಿದ್ದಿದ್ದಾರೆ ಎಂದು ಟೀಕಿಸಿದರು.