ಸುದ್ದಿಮೂಲ ವಾರ್ತೆ
ತಿಪಟೂರು, ಜೂ.15: ಕ್ರೀಡೆ ಪ್ರತಿಯೊಬ್ಬ ಯುವಕನಿಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯವಶ್ಯಕವೆಂದು ಪ್ರಥಮ ದರ್ಜೆ ಅರಣ್ಯ ಗುತ್ತಿಗೆದಾರ ಶಶಿಧರ್ ತಿಳಿಸಿದರು.
ತಾಲ್ಲೂಕಿನ ಕೊನೇಹಳ್ಳಿ ಶ್ರೀ ಶಂಕರೇಶ್ವರ ಕ್ರಿಕೆಟರ್ಸ್ ವತಿಯಿಂದ ಅಶ್ವಿನಿ ಹಿರಿಯ ಪ್ರಾಥಮಿಕ ಶಾಲೆ ಕೊನೆಹಳ್ಳಿ ಶಾಲಾ ಆವರಣದಲ್ಲಿ ನಡೆದ ಕೊನೆಹಳ್ಳಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳಿಗೆ ಟ್ರೋಪಿಯನ್ನು ವಿತರಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಯಾರು ಹೆಚ್ಚು ಸಮಯವನ್ನು ಯುವಕನಾಗಿದ್ದ ಸಂದರ್ಭದಲ್ಲಿ ಕಳೆಯುತ್ತಾರೆಯೋ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಜೀವನಪೂರ್ತಿ ಉತ್ತಮವಾಗಿರುತ್ತದೆ. ಮೊಬೈಲ್ಯುಗದಲ್ಲಿ ದೈಹಿಕ ಚಟುವಟಿಕೆಗಳು ಇಲ್ಲದಿರುವ ಈ ಸಂದರ್ಭದಲ್ಲಿ ಕ್ರೀಡೆ ಚಟುವಟಿಕೆಯಿಂದ ಕೂಡಿರಲು ಸಹಕಾರಿ ಎಂದು ತಿಳಿಸಿದರು.
ದುರ್ಗಾಂಭ ಡೆವಲಪರ್ಸ್ ಮಾಲೀಕರಾದ ಬೋಜೇಗೌಡ ಮಾತನಾಡಿ, ಸೋಲು ಗೆಲುವು ಪಂದ್ಯಾವಳಿಗಳಲ್ಲಿ ಸರ್ವೇಸಾಮಾನ್ಯ ಇಂದಿನ ಸೋಲು ಮುಂದಿನ ಗೆಲುವೆಂದು ತಿಳಿದು ಸಮಾನವಾಗಿ ಸ್ವೀಕರಿಸಿ ಕ್ರೀಡಾ
ಮನೋಬಾವವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಈ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಜಂಟಿ ತಂಡಗಳಾದ ಲೆಜೆಂಡ್ ಕ್ರಿಕೆಟರ್ಸ್ ಮತ್ತು ರಾಯಲ್ ಸ್ಟೆಂಕರ್ಸ್ ತಂಡಗಳು ಪಡೆದುಕೊಂಡವು. ಸಮಾರೋಪ ಸಮಾರಂಭದಲ್ಲಿ ಗ್ರಾಪಂ ಸದಸ್ಯರಾದ ನಟರಾಜ್ ಕೆ. ಹರೀಶ್ ಗೌಡ, ನವೀನ್ ಹಾಗೂ ಮುಖಂಡರಾದ ಅರುಣ್ ಕುಮಾರ್, ಉಮೇಶ್ ಹಾಗೂ ವಿವಿಧ
ತಂಡಗಳು ಉಪಸ್ಥಿತರಿದ್ದರು.