ಸುದ್ದಿಮೂಲ ವಾರ್ತೆ
ಕೆಜಿಎಫ್, ಮಾ.30: ತಾಲ್ಲೂಕಿನ ಮದ್ದಿನಾಯಕನಹಳ್ಳಿ ಗ್ರಾಮದಲ್ಲಿ ಮೂಮಾರ್ಕ್ ಹಾಗೂ ಸಿಸ್ಟಮಾ ಬಯೋ ಕಂಪನಿಯ ವತಿಯಿಂದ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಗೋಬರ್ ಗ್ಯಾಸ್ ಅಳವಡಿಸಿಕೊಳ್ಳುವ ಗೋಬರ್ ಶಕ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೂಮಾರ್ಕ್ ಗೋಬರ್ ಶಕ್ತಿ ಯೋಜನೆಯಿಂದ ರೈತರಿಗೆ ಹಲವು ರೀತಿಯ ಲಾಭಗಳು: ಕಡಿಮೆ ವೆಚ್ಚದಲ್ಲಿ ಸ್ವಚ್ಛ ಅಡುಗೆ ಅನಿಲ,ಜೈವಿಕ ಗೊಬ್ಬರದ ಬಳಕೆಯಿಂದ ಮಣ್ಣಿನ ಗುಣಮಟ್ಟದ ಸುಧಾರಣೆ ಬಗ್ಗೆ ವಿವರಿಸಲಾಯಿತು ,ಈ ಬಯೋಡೈಜೆಸ್ಟರ್ ಗಳು ಮೂಮಾರ್ಕ್ ರೈತರಿಗೆ ಕೈಗೆಟುಕುವ ಬೆಲೆಗೆ ಸಿಗಲಿವೆ ಮತ್ತು ಮಹಿಳಾ ಸಬಲೀಕರಣ ಹಾಗೂ ವಾತಾವರಣದ ಇಂಗಾಲ ಪ್ರಮಾಣವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ ಎಂದು ಬಂದಿದ್ದ ರೈತರಿಗೆ ಮೂಮಾರ್ಕ್ ಸಿಬ್ಬಂದಿ ತಿಳಿಸಿದರು.
ಮೂಮಾರ್ಕ್ ಕಾರ್ಯನಿರ್ವಾಹಣಾಧಿಕಾರಿ ರಾಮಕೃಷ್ಣ ಅಡುಕುರಿ ಅವರು ಮಾತನಾಡಿ ಸ್ಮಾರ್ಟ್ ಮೂ ತನ್ನ ವ್ಯಾಪ್ತಿಯಲ್ಲಿ ಕೃಷಿ ಮತ್ತು ಹೈನುಗಾರಿಕೆ ವಸ್ತುಗಳ ವ್ಯಾಪಾರ, ಹಾಲು ಸಂಗ್ರಹಣೆ, ಕೃಷಿ ಮತ್ತು ಹೈನುಗಾರಿಕೆಗೆ ಸಂಬಂಧ ಪಟ್ಟ ಸಲಹೆ ಹಾಗೂ ಬ್ಯಾಂಕಿಂಗ್ ಸೇವೆಗಳು ರೈತರಿಗೆ ಓದಗಿಸುತ್ತಿದೆ . ತನ್ನ ತಂತ್ರಜ್ಞಾನದಿಂದ ಅತ್ಯುತ್ತಮ ಗುಣಮಟ್ಟ, ಉತ್ಪಾದಕತೆ ಹಾಗೂ ಪಾರದರ್ಶಕತೆ ಮೂಲಕ ಇದರ ಭಾಗವಾದ ಮೂಮಾರ್ಕ ರೈತರ ಮನೆಬಾಗಿಳಿಗೆ ತಲುಪುತ್ತಿದೆ. ಭಾರತದ 5 ರಾಜ್ಯಗಳಲ್ಲಿ ಇದು ಕೆಲಸ ನಿರ್ವಹಿಸುತ್ತಿದೆ ಎಂದು
ತಿಳಿಸಿದರು.
ಗೋಬರ್ ಗ್ಯಾಸ್ ಉಪಯೋಗ:
ರೈತರು ತಮ್ಮ ಹಸುಗಳ ಸಗಣಿಯಿಂದಲೇ ತಮ್ಮ ಮನೆಯಲ್ಲಿ ಅಡುಗೆಯನ್ನು ಮಾಡಿಕೊಳ್ಳಬಹುದು. ಇದರಿಂದಾಗಿ ಸಿಲಿಂಡರ್ ಖರೀದಿಸುವ ವೆಚ್ಚವನ್ನು ಉಳಿಸಬಹುದು ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ತಮ್ಮ ತೋಟಗಳಿಗೆ ಜೈವಿಕ ಗೊಬ್ಬರವನ್ನು ಉಚಿತವಾಗಿ ಉಪಯೋಗಿಸಿಕೊಳ್ಳುವುದರಿಂದ ಆರೋಗ್ಯಕರ ಬೆಳೆಗಳನ್ನು ಬೆಳೆಯಬಹುದು ಆದ್ದರಿಂದ ಪ್ರತಿಯೊಬ್ಬರು ಗೋಬರ್ ಗ್ಯಾಸ್ ಉಪಯೋಗಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂಬ ಸಂದೇಶವನ್ನು ನೀಡಿದರು.
ಇಲ್ಲಿ ಬಂದ ರೈತರಿಗೆ ಪ್ರಾತ್ಯಕ್ಷಿಕೆಯ ಮೂಲಕ ಸಿಸ್ಟಮಾ.ಬಯೋ ಕಂಪನಿಯು ಅಧಿಕಾರಿಗಳು ವಿವರಿಸಿದರು. ಈಗಾಗಲೇ ಈ ಸೌಲಭ್ಯವನ್ನು ಪಡೆದಿರುವ ರೈತರು ತಮ್ಮ ಅನುಭವವನ್ನು ಹಂಚಿಕೊಂಡರು. ರೈತರಿಗೆ ಈ ಸೌಲಭ್ಯವನ್ನು ಸುಲಭವಾಗಿ ಮತ್ತು ತ್ವರಿತವಾಗಿ ತಲುಪಿಸಲು ಮೂಮಾರ್ಕ ತಂಡ ಸಿದ್ದವಾಗಿದೆ, ಕೋಲಾರ ಹೈನುಗಾರಿಕೆಗೆ ಪ್ರಸಿದ್ದಿ , ಹಾಗಾಗಿ ಈ ಗೋಬರ್ ಶಕ್ತಿ ಯೋಜನೆ ರೈತರಿಗೆ ಒಂದು ಮಹತ್ತರ ಕಾರ್ಯಕ್ರಮ ಆಗಲಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ವಿಶ್ವನಾಥ ಹೆಗಡೆ ತಿಳಿಸಿದರು.
ಈ ಸಂದರ್ಭದಲ್ಲಿ ಮೂಮಾರ್ಕ ಸಂಸ್ಥೆಯ ಕಾರ್ಯ ನಿರ್ವಾಹಣಾಧಿಕಾರಿ ರಾಮಕೃಷ್ಣ ಅಡುಕುರಿ, ರತ್ನಾಕರ್ ರವರು, ಡಾ.ಚೆನ್ನಕೇಶವ , ಸಿಸ್ಟಮಾ.ಬಯೊ ಕಂಪನಿಯ ಅತುಲ್, ಪ್ರಭು ಮೂಮಾರ್ಕ ಸಂಸ್ಥೆಯ ಅಂಥೋನಿ ಸ್ವಾಮಿ,ಅಭಿಷೇಕ್,ಡಾ.ಸುಕೇಶ , ಸತೀಶ್, ಅರುಣ ಮತ್ತು ಎಸಿಯೊನ ಕಂಪನಿಯ ಪ್ರತಿನಿಧಿಗಳು ಇದ್ದರು.