ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.16: ಸಾರ್ವಜನಿಕ ನೀತಿ ತಜ್ಞ, ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ರಾಜ್ಯ ಸಭೆಯ ಮಾಜಿ ಸದಸ್ಯ ಪ್ರೊ.ಎಂ.ವಿ.ರಾಜೀವ್ ಗೌಡ ಅವರು ಹೊಸದಾಗಿ ರಚನೆಗೊಂಡಿರುವ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯ (ಎಸ್.ಐ.ಟಿ.ಕೆ.) ಉಪಾಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡರು.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಎಸ್.ಐ.ಟಿ.ಕೆ.ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ಡಾ. ಶಾಲಿನಿ ರಜನೀಶ್, ಅವರು ಉಪಾಧ್ಯಕ್ಷ ಪ್ರೊ.ಎಂ.ವಿ.ರಾಜೀವ್ ಗೌಡ ಅವರನ್ನು ಬರಮಾಡಿಕೊಂಡು, ಯೋಜನಾ ಇಲಾಖೆ ಹಾಗೂ ಎಸ್.ಐ.ಟಿ.ಕೆ.ಯ ಕಾರ್ಯಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಪ್ರೊ.ಎಂ.ವಿ.ರಾಜೀವ್ ಗೌಡ ಅವರು ನೆರೆದಿದ್ದ ಹಿರಿಯ ಅಧಿಕಾರಿಗಳೊಡನೆ ಸಂವಾದ ನಡೆಸಿದರು. ನಂತರ “ದೇಶದ ಇತರೆ ರಾಜ್ಯಗಳು ಅನುಕರಿಸುವಂತೆ ನಮ್ಮ ಕರ್ನಾಟಕವನ್ನು ಅಭಿವೃದ್ಧಿಯೆಡೆ ಕೊಂಡೊಯ್ಯಲು ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.