ಸುದ್ದಿಮೂಲ ವಾರ್ತೆ ರಾಯಚೂರು , ಡಿ.03:
ರಾಯಚೂರು ನಗರಕ್ಕೆೆ ಗುಣಮಟ್ಟದ ಶುದ್ಧ ನೀರು ಪೂರೈಕೆ, ಹೆಚ್ಚುವರಿ ಪೌರಕಾರ್ಮಿಕರ ನೇಮಕಾತಿ, ಸರ್ಕಾರಿ ಭೂಮಿ ಒತ್ತುವರಿಗೆ ಕಡಿವಾಣ ಹಾಕುವ ಜೊತೆಗೆ ತೆರಿಗೆ ಸಂಗ್ರಹಕ್ಕೆೆ ಹೆಚ್ಚಿಿನ ಒತ್ತು ನೀಡಿ ಅಗತ್ಯ ಕ್ರಮವಹಿಸಬೇಕು ಎಂದು ನಗರಾಭಿವೃದ್ಧಿಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನರ ಆರೋಗ್ಯ ಮುಖ್ಯ ಹೀಗಾಗಿ, ಶುದ್ಧ ಮತ್ತು ಸಕಾಲಕ್ಕೆೆ ನೀರು ಕೊಡುವುದು ನಮ್ಮ ಆದ್ಯ ಕಾರ್ಯವಾಗಬೇಕಿದೆ. ಈ ದಿಸೆಯಲ್ಲಿ ಯೋಚಿಸಿ ಪಾಲಿಕೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕನಿಷ್ಟ 40 ಲಕ್ಷ ರೂ.ಗಳನ್ನು ಕುಡಿವ ನೀರಿನ ಸೋರಿಕೆ, ಪೈಪ್ ದುರಸ್ತಿಿ ಸೇರಿ ಬೇರೆ ಬೇರೆ ಕಾರ್ಯಗಳಿಗೆಂದೇ ಮೀಸಲಿರಿಸಲು ಸಲಹೆ ಮಾಡಿ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರತಿ ದಿನ ಮೂರು ಭಾರಿ ಪರೀಕ್ಷೆಗೊಳಪಡಿಸಿಯೇ ಕುಡಿವ ನೀರು ಪೂರೈಕೆ ಮಾಡುತ್ತಿಿದ್ದೇವೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಾಲಯ ಪ್ರಯೋಗಾಲಯ ಕೇಂದ್ರದಲ್ಲಿ ಸಹ ನೀರು ಪರೀಕ್ಷಿಸಿ ಪೂರೈಕೆ ಮಾಡುತ್ತಿಿದ್ದೇವೆ ಎಂದು ಸಚಿವರ ಪ್ರಶ್ನೆೆಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಸದ್ಯ ರಾಯಚೂರಗೆ ಒಟ್ಟು 52 ಎಂಎಲ್ ಡಿ ಪ್ರಮಾಣದ ನೀರು ಪೂರೈಕೆಯಾಗುತ್ತಿಿದ್ದು, ಇದು ಸಾಕಾಗುತ್ತಿಿಲ್ಲ. ರಾಯಚೂರು ನಗರಕ್ಕೆೆ ಹೆಚ್ಚುವರಿಯಾಗಿ 20 ಎಂಎಲ್ಡಿಯಷ್ಟು ನೀರು ಬೇಕಿದೆ. 3 ಲ 20 ಸಾವಿರ ಜನರಿಗೆ ಅನುಕೂಲವಾಗುವಂತೆ ಸಮರ್ಪಕ ನೀರು ಪೂರೈಕೆಗೆ ಕಾರ್ಯಯೋಜನೆ ರೂಪಿಸಿ ಕಾರ್ಯರೂಪಕ್ಕೆೆ ತರಬೇಕಿದೆ ಎಂದು ನಗರ ಶಾಸಕ ಡಾ.ಶಿವರಾಜ ಎಸ್ ಪಾಟೀಲ ಅವರು ಸಚಿವರೊಂದಿಗೆ ಚರ್ಚಿಸಿದರು.
ರಾಯಚೂರು ನಗರದ ವ್ಯಾಾಪ್ತಿಿಯಲ್ಲಿ ವಿಶೇಷ ಅಭಿಯಾನ ನಡೆಸಿ ತೆರಿಗೆ ಸಂಗ್ರಹದಲ್ಲಿ ಪ್ರಗತಿ ತೋರಿಸಿದ್ದಾಾಗಿ ಆಯುಕ್ತ ಜುಬಿನ್ ಮೊಹಪಾತ್ರ ಅವರು ಸಚಿವರಿಗೆ ತಿಳಿಸಿದರು.
ಇದನ್ನು ಹೆಚ್ಚೆೆಚ್ಚು ಕಾರ್ಯಪ್ರವೃತ್ತರಾಗಿ ಹೆಚ್ಚಿಿನ ತೆರಿಗೆ ಸಂಗ್ರಹಿಸಲು ಮುಂದಾಗಿ ತೆರಿಗೆ ಪಾವತಿಸದವರ ಬಗ್ಗೆೆ ಮಾಹಿತಿ ಇರಬೇಕು. ಸೌಲಭ್ಯ ಕೊಡಲು ತೆರಿಗೆ ಪಾವತಿ ಅಗತ್ಯ ಎಂಬುದರ ಬಗ್ಗೆೆ ಮನವರಿಕೆ ಮಾಡಿಕೊಡಲು ಸಲಹೆ ನೀಡಿದರು.
ಪೌರಕಾರ್ಮಿಕರ ನೇಮಕಾತಿಗೆ ಕ್ರಮ :
ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಗೇರಿದ ಬಳಿಕ ಹೆಚ್ಚುವರಿ 75 ಪೌರ ಕಾರ್ಮಿಕರ ನೇಮಕಾತಿಯ ಪ್ರಸ್ತಾಾವನೆ ಸಲ್ಲಿಸಿದ ಬಗ್ಗೆೆ ಜಿಲ್ಲಾಧಿಕಾರಿ ನಿತೀಶ್ ಅವರು ಸಚಿವರ ಗಮನಕ್ಕೆೆ ತಂದರು. ಸಭೆಯಲ್ಲಿಯೇ ಬೆಂಗಳೂರಿಗೆ ದೂರವಾಣಿ ಕರೆ ಮಾಡಿದ ಸಚಿವರು, ಪ್ರಸ್ತಾಾವನೆ ಬಗ್ಗೆೆ ಕೂಡಲೇ ಗಮನ ಹರಿಸಿ ಹೆಚ್ಚುವರಿ 75 ಪೌರ ಕಾರ್ಮಿಕರ ನೇಮಕಾತಿಯ ಪ್ರಕ್ರಿಿಯೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಒತ್ತುವರಿ ತಡೆಯಿರಿ :
ರಾಯಚೂರು ನಗರದ ವ್ಯಾಾಪ್ತಿಿಯಲ್ಲಿನ ಕೆರೆ, ಸ್ಮಶಾನ ಜಾಗ ಸೇರಿದಂತೆ ಯಾವುದೇ ಸಾರ್ವಜನಿಕ ಜಾಗ ಯಾವುದೇ ವ್ಯಕ್ತಿಿಗಳಿಂದ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒತ್ತುವರಿ ಬಗ್ಗೆೆ ದೂರುಗಳು ಬಂದರೆ ತಕ್ಷಣ ಕಂದಾಯ ಅಧಿಕಾರಿಗಳ ಜೊತೆ ಸಮನ್ವಯತೆ ಸಾಧಿಸಿ ನಿರ್ಬಂಧಿಸಲು ಕ್ರಮ ವಹಿಸಿ ಎಂದು ತಾಕೀತು ಮಾಡಿದರು.
ಮೈಸೂರ ನಂತರ ರಾಯಚೂರು ವ್ಯಾಾಪ್ತಿಿಯಲ್ಲಿಯೇ ಅತಿ ಹೆಚ್ಚು 36 ಕೊಳಚೆಗಳಿದ್ದು, ಇಲ್ಲಿ 35 ಸಾವಿರ ವಸತಿಗಳಿದ್ದು ಈ ಕೊಳಚೆ ನಿವಾಸಿಗಳಿಗೆ ಇ ಖಾತಾ ಪೂರೈಕೆಗೆ ಪರಿಶೀಲಿಸಬೇಕಿದೆ ಎಂದು ಶಾಸಕರು ಸಚಿವರ ಗಮನ ಸೆಳೆದರು.
ಈ ಬಗ್ಗೆೆ ತಾಂತ್ರಿಿಕ ಸಮಸ್ಯೆೆಗಳಿದ್ದರೆ ಗಮನಕ್ಕೆೆ ತರಬೇಕು ಪರಿಹಾರ ಹುಡುಕಿ ಜನರಿಗೆ ನೆಮ್ಮದಿ ಬದುಕಿಗೆ ಖಾತಾ ನೀಡಲು ಕ್ರಮ ವಹಿಸಲು ತಿಳಿಸಿದರು.
ಸಭೆಯಲ್ಲಿ ಮಸ್ಕಿಿ ಶಾಸಕ ಬಸನಗೌಡ ತುರ್ವಿವಿಹಾಳ, ಆರ್ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪುಟ್ಟಮಾದಯ್ಯ ಎಂ., ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಾಧಿಕಾರಿ ಕುಮಾರಸ್ವಾಾಮಿ, ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ ಹಾಗೂ ಇತರರಿದ್ದರು.
ಸಚಿವ ಭೈರತಿ ಸುರೇಶರಿಂದ ಪ್ರಗತಿ ಪರಿಶೀಲನಾ ಸಭೆ ಹೆಚ್ಚುವರಿ 20 ಎಂಎಲ್ಡಿ ನೀರು ಸಂಗ್ರಹಕ್ಕೆೆ ಶಾಸಕರ ಮನವಿ ಶುದ್ಧ ನೀರು ಪೂರೈಕೆ ಮಾಡಿ, ಸ್ಲಂ ವಾಸಿಗಳಿಗೆ ಇ- ಖಾತಾಕ್ಕೆೆ ಕ್ರಮ ವಹಿಸಿ

