ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ರಾಯಚೂರು ಜಿಲ್ಲೆೆಯ ವಿವಿಧ ಸರ್ಕಾರಿ ಕಚೇರಿ, ವಸತಿ ನಿಲಯ, ಆಸ್ಪತ್ರೆೆ ಮತ್ತಿಿತರ ಸಮಾರು 61 ಕಡೆ ಅನಿರೀಕ್ಷಿಿತ ಭೇಟಿ ವೇಳೆ ಅನೇಕ ಲೋಪದೋಷ, ಸಮಸ್ಯೆೆಗಳು ಕಂಡು ಬಂದಿದ್ದು ಆ ಬಗ್ಗೆೆ ಸಂಬಂಧಿಸಿದ ಅಧಿಕಾರಿಗಳು ವಾಸ್ತವ ವರದಿ ಸಲ್ಲಿಸದೆ ಸುಳ್ಳು ವರದಿ ಸಲ್ಲಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಕಾರ್ಯದರ್ಶಿ ಕೆ.ಶ್ರೀನಾಥ ಹಾಗೂ ಅಪರ ನಿಬಂಧಕರಾದ ಎ.ವಿ.ಪಾಟೀಲ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ವಿವಿಧ ಇಲಾಖೆ ಜಿಲ್ಲಾಾ ಮಟ್ಟದ ಅಧಿಕಾರಿಗಳ ಜೊತೆಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಎ.ವಿ.ಪಾಟೀಲರು ಲೋಕಾಯುಕ್ತರಾದ ನ್ಯಾಾಯಮೂರ್ತಿ ಬಿ.ಎಸ್.ಪಾಟೀಲ ಅವರ ನಿರ್ದೇಶನದ ಮೇರೆಗೆ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿನ 61 ಕಚೇರಿಗಳಿಗೆ ತಮ್ಮ ತಂಡ ಭೇಟಿ ಮಾಡಿ, ಕಡತಗಳ ಪರಿಶೀಲಿಸಿ ಲೋಪಗಳ ಪಟ್ಟಿಿ ಮಾಡಿದ್ದೇವೆ ಎಂದು ವಿವರಿಸಿದರು.
ತಪ್ಪುು ಮಾಹಿತಿ ಕೊಟ್ಟರೆ ಕ್ರಮ :
ಯಾವ ಇಲಾಖೆಯ ಕಚೇರಿಗಳಲ್ಲಿನ ಲೋಪ ಇದೆ ಎಂಬುದರ ಮಾಹಿತಿಯನ್ನು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಜಿಲ್ಲಾಾ ಲೋಕಾಯುಕ್ತರು ಲಿಖಿತ ಮಾಹಿತಿ ಕೊಡಲಿದ್ದಾಾರೆ. ಆ ಮಾಹಿತಿ ಪರಿಶೀಲಿಸಿ ವಾಸ್ತವ ವರದಿ ಲೋಕಾಯುಕ್ತಕ್ಕೆೆ ಸಲ್ಲಿಸಬೇಕು. ಸಲ್ಲಿಕೆಯಾದ ವರದಿಯ ವಾಸ್ತವಿಕತೆ ಕುರಿತು ತಮ್ಮ ಜಿಲ್ಲಾಾ ಮಟ್ಟದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿ ಅವರು ಪ್ರತ್ಯೇಕ ವರದಿ ಸಲ್ಲಿಸಲಿದ್ದಾಾರೆ. ವ್ಯತ್ಯಾಾಸಗಳು ಕಂಡು ಬಂದರೆ, ಅಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ಸುಳ್ಳುಘಿ, ಅವಾಸ್ತವ ಅಂಶಗಳಿದ್ದರೆ ಸರ್ಕಾರಕ್ಕೆೆ ಅಂತವರ ವಿರುದ್ಧ ಶಿಸ್ತು ಕ್ರಮಕ್ಕೆೆ ಶಿಾರಸ್ಸು ಮಾಡುವುದಲ್ಲದೆ, ಪ್ರಕರಣವನ್ನೂ ದಾಖಲಿಸಿಕೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ನಗರ ಸ್ಥಳೀಯ ಸಂಸ್ಥೆೆಗಳ ಅವ್ಯವಸ್ಥೆೆಗೆ ತಪರಾಕಿ :
ಕಾರ್ಯದರ್ಶಿ ಕೆ.ಶ್ರೀನಾಥ ಹಾಗೂ ಅಪರ ನಿಬಂಧಕರಾದ ನ್ಯಾಾಘಿ.ಎ.ಬಿ.ಪಾಟೀಲ ಮಾತನಾಡಿ, ತಂಡ ರಾಯಚೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿದಾಗ ಅನಧಿಕೃತ ಕಟ್ಟಡಗಳ ಬಗ್ಗೆೆ ಯಾವುದೇ ರೀತಿಯ ರಿಜಿಸ್ಟರ್ ಇಲ್ಲಘಿ. ತನಿಖೆಗೆ ಬೇಕಾದ ಮಾಹಿತಿ ಒದಗಿಸಲು ಕೆಲವರು ವಿಲರಾರಾಗಿದ್ದಾಾರೆ. 69 ಕಸ ವಿಲೇವಾರಿ ವಾಹನಗಳ ಲಾಗ್ ಬುಕ್ ನಿರ್ವಹಣೆ ಮಾಡಿಲ್ಲಘಿ, 750 ಎ-ಬಿ ಖಾತಾ ಅರ್ಜಿ ಬಾಕಿ ಇದೆ. ಸಮರ್ಪಕ ಮಾಹಿತಿ ಇಲ್ಲಘಿ. ಡಾಲರ್ಸ್ ಕಾಲೋನಿಯಲ್ಲಿ ಚರಂಡಿ ನೀರು ನಳಗಳಿಗೆ ಪೂರೈಕೆ ಬಗ್ಗೆೆ ಗಮನಿಸಿ, ಘನತ್ಯಾಾಜ್ಯ ಧೂಳು ಆವರಿಸಿದೆ ಸರಿಪಡಿಸಿ ಎಂದು ಆಯುಕ್ತ ಜುಬೀನ್ ಮಹೋಪಾತ್ರಗೆ ತಾಕೀತು ಮಾಡಿದರು.
ಲಿಂಗಸೂಗೂರ ಪುರಸಭೆಯಲ್ಲಿ ಅವ್ಯವಸ್ಥೆೆ , ದೇವದುರ್ಗ ಪುರಸಭೆಯ ವಾಹನಗಳ ಲಾಗ್ ಬುಕ್ ಸರಿ ಇರಲಿಲ್ಲ. ಕಸ ವಿಲೇವಾರಿ ವ್ಯವಸ್ಥೆೆ ಅಸಮರ್ಪಕವಾಗಿದ್ದು ಕಂಡು ಬಂದಿತು. ಸಿಂಧನೂರ ನಗರಸಭೆಯಲ್ಲಿ ಘನತ್ಯಾಾಜ್ಯದ ಖರ್ಚು ವೆಚ್ಚ ನಿರ್ವಹಣೆ ಸರಿಯಾಗಿರಲಿಲ್ಲ. ರಾಮದುರ್ಗ ಗ್ರಾಾಪಂಗೆ ಹಂಚಿಕೆಯಾದ ಕಸ ವಿಲೆವಾರಿ ವಾಹನದ ಕಡತ ಸಮರ್ಪಕವಾಗಿರಲಿಲ್ಲ ಎಂದು ತಿಳಿಸಿದರು.
ಕಂದಾಯದಲ್ಲೂ ಲೋಪಕ್ಕೆೆ ಲೋಕಾ ತಿವಿತ :
ದೇವದುರ್ಗ ತಹಸೀಲ್ ಕಚೇರಿಯಲ್ಲಿ ಬಯೋಮೆಟ್ರಿಿಕ್ ಇದ್ದರೂ ಬಳಸಿಲ್ಲಘಿ, ಲೋಕಾಯುಕ್ತ ಲಕ ಹಾಕಿರಲಿಲ್ಲ. ಸಿಂಧನೂರು ತಹಸೀಲ್ ಕಚೇರಿಯಲ್ಲಿ ಆರ್ಟಿಐ ಅರ್ಜಿ, ತಿದ್ದುಪಡಿ ಹಾಗೂ ಇನ್ನಿಿತರ ಅರ್ಜಿ ವಿಲೇವಾರಿ ಮಾಡಿಲ್ಲ. ತಹಶೀಲ್ದಾಾರ ಮತ್ತು ಎಡಿಎಲ್ಆರ್ ಮಧ್ಯೆೆ ಅಸಮನ್ವಯ ಕಾಣಿಸಿತು. ಸಿಂಧನೂರ ನಗರಾಭಿವೃದ್ಧಿಿ ಪ್ರಾಾಧಿಕಾರದ ಕಚೇರಿಯಲ್ಲಿ ಕೆಲ ವಹಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಲಿಂಗಸೂಗೂರು, ದೇವದುರ್ಗ ಭೂದಾಖಲೆ ಇಲಾಖೆಯಲ್ಲಿ ಸರ್ವೆ ಅರ್ಜಿಗಳ ವಿಲೆವಾರಿ ಸರಿಯಾಗಿ ನಡೆಯುತ್ತಿಿಲ್ಲ ಎನ್ನುವ ದೂರುಗಳಿದ್ದು, ಈ ಬಗ್ಗೆೆ ಗಮನ ಹರಿಸಬೇಕು ಎಂದು ಡಿಡಿಎಲ್ಆರ್ ಮತ್ತು ಎಡಿಎಲ್ಆರ್ಗಳಿಗೆ ಸೂಚನೆ ನೀಡಿ ಮೇಲುಸ್ತುವಾರಿ ಮಾಡಿ ಸರಿಪಡಿಸಲು ಜಿಲ್ಲಾಾಧಿಕಾರಿ ಗಮನಕ್ಕೆೆ ತಂದರು.
ವಿವಿಧ ಕಚೇರಿ ಲೋಪಕ್ಕೆೆ ಅತೃಪ್ತಿಿ :
ಅಬಕಾರಿ ಇಲಾಖೆಯಲ್ಲಿ 2020-21ರಿಂದ ಕೆಲ ಅರ್ಜಿಗಳು ಬಾಕಿ ಇರುವುದು ಗಮನಕ್ಕೆೆ ಬಂದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಯಾರು ಎಲ್ಲಿಗೆ ಹೋಗುತ್ತಾಾರೆ ಎಂಬುದರ ಬಗ್ಗೆೆ ಚಲನವಹಿಯಲ್ಲಿ ದಾಖಲಿಸಿಯೇ ಇಲ್ಲಘಿ. ಕೃಷಿ ಇಲಾಖೆಯಲ್ಲಿ ಮಣ್ಣು ಆರೋಗ್ಯ ಅಭಿಯಾನದ ಅನುದಾನ ಬಳಸಿಲ್ಲ. ಅವಧಿ ಮೀರಿದ ಬೀಜಗಳ ವಿತರಣೆ ಮೇಲೆ ನಿಗಾವಹಿಸಿಲ್ಲ. ಸಿಂಧನೂರ ಪುಸ್ತಕಗಳ ನಿರ್ವಹಣೆ ಸರಿಯಾಗಿಲ್ಲ. ಉಪ ನೋಂದಣಿ ಕಚೇರಿಯಲ್ಲಿ ಅವಧಿ ಮೀರಿದರೂ ಕೆಲ ಅರ್ಜಿಗಳ ವಿಲೇವಾರಿ ಮಾಡದಿರುವುದು ಕಂಡು ಬಂದಿತು ಎಂದು ಮಾಹಿತಿ ನೀಡಿದರು.
ಡಿಡಿಪಿಐ ಕಾರ್ಯ ವೈಖರಿಗೆ ಗರಂ :
ಶಿಕ್ಷಣ ಇಲಾಖೆಯಲ್ಲಿ ನಿವೃತ್ತ ಶಿಕ್ಷಕರ ವೇತನ, ಭತ್ಯೆೆ ಅರ್ಜಿ ಸೇರಿ ಸುಮಾರು 170ಕ್ಕೂ ಅಧಿಕ ಅರ್ಜಿ ಜಿಲ್ಲಾಾ ಮಟ್ಟದಲ್ಲಿ ಬಾಕಿ ಇರಿಸಲಾಗಿದೆ ಯಾಕೆ ಎಂದು ಡಿಡಿಪಿಐ ಅವರಿಗೆ ಪ್ರಶ್ನಿಿಸಿದರು. ಲಿಂಗಸೂಗೂರು ಬಿಇಓ ಕಚೇರಿಯಲ್ಲಿ ನೊಟೀಸ್ಗಳಿಗೆ ಉತ್ತರ ಕೊಡದ ಪರಿಸ್ಥಿಿತಿಯಿದೆ. ಅನುದಾನ ದುರ್ಬಳಕೆ ಮಾಡಿಕೊಂಡ ಅಧಿಕಾರಿಯಿಂದ ವಸೂಲಿ ಮಾಡದೆ ಕಡೆಗಣಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಅವರು, ಶಾಲೆ, ವಸತಿ ನಿಲಯ, ಅಂಗನವಾಡಿಗಳಲ್ಲಿ ಶೌಚಾಲಯಗಳಿಲ್ಲ ಈ ಬಗ್ಗೆೆ ವಿವರವಾದ ವರದಿ ನೀಡಿ ಎಂದು ಡಿಡಿಪಿಐ ಕೆ.ಡಿ.ಬಡಿಗೇರ್ ಹಾಗೂ ಸಂಬಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆೆಗಳಿಗೆ ಡಿಎಚ್ಓ ಭೇಟಿಗೆ ತಾಕೀತು :
ಗಬ್ಬೂರ ಪ್ರಾಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಯಂತ್ರಗಳನ್ನು ಬಳಸಿಲ್ಲ. ಹೋಮಿಯೋಪತಿ ವೈದ್ಯ ಅಲೋಪತಿಕ್ ಚಿಕಿತ್ಸೆೆ ಕೊಡುತ್ತಿಿದ್ದಾರೆ. ಅಲ್ಲಿನ ವೈದ್ಯೆೆ ಸುದೀರ್ಘ ರಜೆಯಲ್ಲಿದ್ದು ಈಗಲೂ ಯಾಕೆ ಕ್ರಮ ವಹಿಸಿಲ್ಲಘಿ. ಆಸ್ಪತ್ರೆೆಯಲ್ಲಿ ಶುಚಿತ್ವ ಇಲ್ಲ ಈ ಬಗ್ಗೆೆ ವರದಿ ಕೊಡಬೇಕು. ನಿಯಮಿತವಾಗಿ ಎಲ್ಲ ಆಸ್ಪತ್ರೆೆಗಳಿಗೆ ಭೇಟಿ ನೀಡಿ ವರದಿ ನೀಡಬೇಕು, ಸುಳ್ಳು ಮಾಹಿತಿ ಕೊಟ್ಟರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಡಿಎಚ್ಓ ಸುರೇಂದ್ರಬಾಬುಗೆ ಎಚ್ಚರಿಕೆ ನೀಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಪೌಷ್ಠಿಿಕ ಆಹಾರ , ದಾಸ್ತಾಾನು ವಹಿ ನಿರ್ವಹಿಸಿಲ್ಲ ಈ ಬಗ್ಗೆೆ ಮಹಿಳಾ ಮತ್ತು ಮಕ್ಕಳ ಕಲ್ಯಾಾಣಾಧಿಕಾರಿ ಯಾವ ಕಡೆಗಳಲ್ಲಿ ಅವ್ಯವಸ್ಥೆೆ ಇದೆ ಎಂಬುದನ್ನು ಪರಿಶೀಲಿಸಿ ವರದಿ ನೀಡಬೇಕು ನವೀನಕುಮಾರ್ಗೆ ನಿರ್ದೇಶನ ನೀಡಲಾಯಿತು.
ಲಿಂಗಸೂಗೂರ ಸಮಾಜ ಕಲ್ಯಾಾಣ ಇಲಾಖೆಯ ವಸತಿಯೊಂದರಲ್ಲಿ ವಿದ್ಯುತ್ ದೀಪ ಇಲ್ಲ. ಬಿಸಿಎಂ ಇಲಾಖೆಯ ಕೆಲ ವಸತಿ ನಿಲಯಗಳಲ್ಲಿ ಲೋಪಗಳು ಇವೆ. ಈ ರೀತಿಯ ಅವ್ಯವಸ್ಥೆೆಗಳನ್ನು ಸರಿಪಡಿಸಬೇಕು ಎಂದು ಸಮಾಜ ಕಲ್ಯಾಾಣ ಇಲಾಖೆ ಮತ್ತು ಬಿಸಿಎಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಂಬಂಧಿಸಿದ ಜಿಲ್ಲಾಾ ಮಟ್ಟದ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಆಗಾಗ ಪರಿಶೀಲಿಸದೆ ಇರುವುದಕ್ಕೆೆ ಬೇಸರ ವ್ಯಕ್ತಪಡಿಸಿದ ಲೋಕಾಯುಕ್ತ ಕಾರ್ಯದರ್ಶಿ, ಉಪನಿಬಂಧಕರು ಜಿಲ್ಲಾಾಧಿಕಾರಿ, ಸಿಇಓ ಮೇಲುಸ್ತುವಾರಿ ಸರಿಯಾಗಿ ವಹಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ನಿತೀಶ್, ಜಿಲ್ಲಾ ಲೋಕಾಯುಕ್ತದ ಅಧೀಕ್ಷಕ ಸತೀಶ್ ಎಸ್ ಚಿಟಗುಪ್ಪಿಿ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಅರುಣಾಂಕ್ಷ ಗಿರಿ, ಆಯುಕ್ತ ಜುಬೀನ್ ಮಹೋಪಾತ್ರಘಿ, ಲೋಕಾಯುಕ್ತದ ಡಿವೈಎಸ್ಪಿಿ ರವಿ ಪುರುಷೋತ್ತಮ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿಿತರಿದ್ದರು.
ಅಧಿಕಾರಿಗಳ ಜೊತೆ ದೂರುಗಳ ಪ್ರಗತಿ ಪರಿಶೀಲನೆ * ನಿರೀಕ್ಷಿತ ಭೇಟಿ ವರದಿ ಬಿಚ್ಚಿಿಟ್ಟ ಲೋಕಾ ಅಧಿಕಾರಿಗಳು ಲೋಪಗಳ ವಾಸ್ತವ ವರದಿ ಮರೆಮಾಚಿದರೆ ಕ್ರಮದ ಖಡಕ್ ಎಚ್ಚರಿಕೆ

