ಸುದ್ದಿಮೂಲ ವಾರ್ತೆ ಬೀದರ್, ಡಿ.31
ಕುಟುಂಬದ ಮರ್ಯಾದೆ ಹೆಸರಿನಲ್ಲಿ ನಡೆಯುವ ಹತ್ಯೆೆಗಳು ಹಾಗೂ ಅಂತರಜಾತಿ-ಅಂತರಧರ್ಮ ವಿವಾಹಗಳ ವಿರೋಧವನ್ನು ತಡೆಯಲು ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳು ವಿಶೇಷ ಕಾನೂನು ರೂಪಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕ ಮನವಿ ಮಾಡಿದೆ.
ರಾಷ್ಟ್ರಪತಿಗಳು ಹಾಗೂ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ದ್ವೇಷ ರಾಜಕೀಯ ಮತ್ತು ದ್ವೇಷ ಭಾಷಣಗಳಿಂದ ದಲಿತರು ಹಾಗೂ ಅಲ್ಪಸಂಖ್ಯಾಾತರ ಮೇಲೆ ದಾಳಿಗಳು ಹೆಚ್ಚುತ್ತಿಿರುವುದರ ಬಗ್ಗೆೆ ಆತಂಕ ವ್ಯಕ್ತಪಡಿಸಲಾಗಿದೆ. ಇತ್ತೀಚೆಗೆ ಹುಬ್ಬಳ್ಳಿಿ ಸಮೀಪದ ಮರ್ಯಾದಾ ಹತ್ಯೆೆ ಘಟನೆಯನ್ನು ತೀವ್ರವಾಗಿ ಖಂಡಿಸಿ, ಅಂತರಜಾತಿ-ಅಅತರಧರ್ಮ ವಿವಾಹ ಮಾಡಿಕೊಂಡ ದಂಪತಿಗಳಿಗೆ ಪೊಲೀಸ್ ರಕ್ಷಣೆ, ರೂ.10 ಲಕ್ಷ ಪ್ರೋೋತ್ಸಾಾಹ ಧನ ಹಾಗೂ ಸರ್ಕಾರದ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಾಯಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರು ಮಾರುತಿ ಬೌದ್ಧೆೆ, ನಬೀ ಖುರೇಷಿ, ಸುಲೇಮನ್ ಖುರೇಷಿ, ಬಾಬುರಾವ ಹೊನ್ನಾಾ, ರಾಜಕುಮಾರ ಮೂಲಭಾರತಿ, ನಜೀರ ಅಹ್ಮದ, ಎಂ.ಡಿ. ಖಮರ್ ಪಟೇಲ್, ಮಹೇಶ ಗೋರನಾಳಕರ್, ಎಂ.ಡಿ. ಶಾಯತ ಅಲಿ, ಜೈಶೀಲಕುಮಾರ, ವೀರಶೆಟ್ಟಿಿ ವಟಂಬೆ, ಚಂದ್ರಕಾಂತ ನಿರಾಟೆ, ಜಗನ್ನಾಾಥ ಹೊನ್ನಾಾ, ಮಾರುತಿ ಸೂರ್ಯವಂಶಿ, ಅಂಬೇಡ್ಕರ್ ಪಿ. ಬೌದ್ಧೆೆ, ವಹೀದ ಲಖ್ಖನ್, ಮುಬಸ್ಸಿಿರ ಶಿಂಧೆ, ರಮೇಶ ಕಟ್ಟಿಿತುಗಾಂವ, ಪ್ರಭು ತಗಣಿಕರ್, ಓಂಕಾರ ರೊಟ್ಟಿಿ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
ಮರ್ಯಾದಾ ಹತ್ಯೆ ತಡೆಗೆ ವಿಶೇಷ ಕಾನೂನು ರೂಪಿಸಿ ಪ್ರಗತಿಪರ ಸಂಘಟನೆಗಳಿಂದ ಸರ್ಕಾರಕ್ಕೆ ಒತ್ತಾಯ

