ಸುದ್ದಿಮೂಲ ವಾರ್ತೆ
ಆನೇಕಲ್, ಜೂ.18: ಬಾಲ ಕಾರ್ಮಿಕ ನಿಷೇಧ ಜಾಗೃತಿ ಜಾಥವನ್ನು ಆನೇಕಲ್ ಕೋರ್ಟ್ ನಿಂದ ಅಂಬೇಡ್ಕರ್ ವೃತ್ತದ ವರೆಗೆ ಭಾನುವಾರ ಹಮ್ಮಿಕೊಳ್ಳಲಾಗಿತ್ತು
ಅಪರ ಜಿಲ್ಲಾ ನ್ಯಾಯಾಧೀಶರಾದ ರವಿಂದ್ರ ಮತ್ತು ವಕೀಲರ ಸಂಘದ ಅಧ್ಯಕ್ಷ ರಮೇಶ್ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆ ಯೋಜನೆ ಮಾಡಲಾಗಿತ್ತು.
ಬಾಲ ಕಾರ್ಮಿಕ ನಿಷೇಧ ಜಾಗೃತಿ ಜಾಥ , ಮಕ್ಕಳ ಮೇಲೆ ಎಸಗುವ ದೌರ್ಜನ್ಯ, ಬಾಲ್ಯ ವಿವಾಹ ತಡೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಈ ಜಾಗೃತ ಜಾಥ ವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ದೌರ್ಜನ್ಯದ ಬಗ್ಗೆ ಮತ್ತು ಪೋಕ್ಸ್ ಕಾಯ್ದೆ ಕುರಿತು ಜಾಥಾದ ಉದ್ದಕ್ಕೂ ಮಾಹಿತಿ ನೀಡಲಾಯಿತು.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಕಾನೂನು ಸೇವಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿಗಳು ಭಾಗಿಯಾಗಿದ್ದರು. ಆನೇಕಲ್ ಸಿವಿಲ್ ನ್ಯಾಯಾಧೀಶರಾದ ಶಿವಪೂಜಿ , ಹೆಚ್ಚುವರಿ ನ್ಯಾಯಾಧೀಶರಾದ ಕೃಷ್ಣರಾಜ ,ಸಿವಿಲ್ ಮತ್ತು ಜೆ ಮ್ಎಫ್ ಸಿ ನ್ಯಾಯಾಧೀಶರಾದ ಕಾವ್ಯ, ಕಾರ್ಮಿಕ ನಿರೀಕ್ಷಕರಾದ ನಾಗರತ್ನ, ಮಹಿಳಾ ಮತ್ತು ಮಕ್ಕಳ ಇಲಾಖೆ ಕವಿತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.