ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.02:
ತಾಲೂಕಿನ ತುರ್ವಿಹಾಳ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆೆ ತಜ್ಞ ವೈದ್ಯರ ಹಾಗೂ ಸಿಬ್ಬಂದಿ ನೇಮಕ ಮಾಡಲು ರಾಯಚೂರು ಜಿಲ್ಲಾಾಧಿಕಾರಿ ನಿತೀಶ ಕೆ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಸೇವೆಗಳ ಇಲಾಖೆಯ ಆಯುಕ್ತರಿಗೆ ಪ್ರಸ್ತಾಾವನೆ ಸಲ್ಲಿಸಿದ್ದಾಾರೆ.
ತುರ್ವಿಹಾಳ ಪಟ್ಟಣವು ಮಸ್ಕಿಿ ವಿಧಾನಸಭಾ ಕ್ಷೇತ್ರದ ವ್ಯಾಾಪ್ತಿಿಯ ಅತ್ಯಂತ ಮಹತ್ವಾಾಕಾಂಕ್ಷಿ ಕೇಂದ್ರವಾಗಿದೆ. ತುರ್ವಿಹಾಳ ಪಟ್ಟಣದ ಸುತ್ತ-ಮುತ್ತಲು 30-40 ಹಳ್ಳಿಿಗಳು ಈ ಆಸ್ಪತ್ರೆೆಯನ್ನು ಅವಲಂಬಿಸಿವೆ. ನೂತನವಾಗಿ ನಿರ್ಮಾಣ ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆೆ ಅಗತ್ಯ ಹುದ್ದೆೆಗಳಾದ ಜನರಲ್ ಮೆಡಿಸಿನ್, ಜನರಲ್ ಸರ್ಜನ್, ನೇತ್ರತಜ್ಞ ಹುದ್ದೆೆಗಳು ಇಲ್ಲಿಯವರೆಗೆ ಮಂಜೂರಾಗಿಲ್ಲ. ಜೊತೆಗೆ ಹೆಚ್ಚುವರಿಯಾಗಿ 6 ಜನ ಶುಶ್ರೂಷಕರು, 6 ಜನ ಗ್ರೇೇಡ್ ಡಿ. ಹುದ್ದೆೆಗಳು ಮಂಜೂರಾಗಬೇಕಿದೆ. ಜನರಲ್ ಮೆಡಿಸಿನ್ ಹಾಗೂ ಜನರಲ್ ಸರ್ಜನ್ ಹುದ್ದೆೆಗಳು ಗ್ರಾಾಮೀಣ ಜನತೆಯ ಆರೋಗ್ಯ ವ್ಯವಸ್ಥೆೆಯ ಬೆನ್ನೆೆಲುಬಾಗಿದೆ. ಕಲ್ಯಾಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಯೋಜನೆಯಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆೆ ಬೇಕಾಗುವ ಎಲ್ಲಾಾ ಬಹುತೇಕ ವೈದ್ಯಕೀಯ ಸಲಕರಣೆಗಳನ್ನು ಈಗಾಗಲೇ ಪೂರೈಸಲಾಗಿದೆ. ರೋಗಿಗಳಿಗೆ ಹೆಚ್ಚಿಿನ ಪ್ರಮಾಣದಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸಲು ಸುಲಭವಾಗುತ್ತದೆ ಎಂದು ಪ್ರಸ್ತಾಾವನೆಯಲ್ಲಿ ವಿವರಿಸಿದ್ದಾಾರೆ.

