ಸುದ್ದಿಮೂಲ ವಾರ್ತೆ
ಮಾಲೂರು, ಜು 26 : ಗೃಹ ಲಕ್ಷ್ಮಿಯೋಜನೆಯ ನೊಂದಣಿಯನ್ನು ಖಾಸಗಿ ಸೈಬರ್ ಕೇಂದ್ರಗಳಲ್ಲಿ
ಅನಧಿಕೃತವಾಗಿ ಮಾಡುವರ ವಿರುದ್ದು ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಶೀಲ್ದಾರ್ ಕೆ ರಮೇಶ್ ಎಚ್ಚರಿಕೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮನೆ ಯಜಮಾನೆಯ ಬ್ಯಾoಕ್ ಖಾತೆಗೆ 2000 ರೂ. ಜಮಾ ಮಾಡುವ ಕಾರ್ಯಕ್ರಮವನ್ನು ಜಾರಿಗೆತಂದಿದ್ದು, ಉಚಿತ ನೊಂದಣಿ ಮಾಡಲು ಸರ್ಕಾರ ಗ್ರಾಹಕರಿಂದ ಶುಲ್ಕ ಪಡಯದೆ ಉಚಿತವಾಗಿ ನೊಂದಣಿ ಮಾಡಲು ತಾಲ್ಲೂಕಿನ 28 ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತಿಗೆ ಒಂದರಂತೆ 28 ಬಾಪುಜಿ ಸೇವಾ ಕೇಂದ್ರಗಳು, 23 ಗ್ರಾಮ ಒನ್, ಮಾಲೂರು ಪಟ್ಟಣದಲ್ಲಿ ಕರ್ನಾಟಕ ಒನ್ ಮತ್ತು ಪುರಸಭೆ ವತಿಯಿಂದ ಮೂರು ಕೇಂದ್ರ ಗಳನ್ನು ಆರಂಭಿಸಿ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರಗಳಿಗೆ ಎಲ್ಲಾ ಶುಲ್ಕವನ್ನು ಸರ್ಕಾರವೇ ಭರಿಸಲಿದೆ.
ಸಾರ್ವಜನಿಕರು ಸರ್ಕಾರದಿಂದ ತೆರೆದಿರುವ ನೋಂದಣಿ ಕೇಂದ್ರಗಳಲ್ಲಿಯಾವುದೇ ನೋಂದಣಿ ಶುಲ್ಕ ನೀಡದೆ ಉಚಿತ ನೋಂದಣಿ ಮಾಡುವಂತೆ ತಿಳಿಸಿದರು
ಖಾಸಗಿ ಸೈಬರ್ ಮತ್ತು ಸಿ ಎಸ್ ಸಿ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಗ್ರಾಹಕರಿಂದ 50 ರಿಂದ 100 ರೂ.ಗಳನ್ನು ಪಡೆದು ಅನಧಿಕೃತವಾಗಿ ನೋಂದಣಿ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ಕೆಲ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಸೂಚನೆ ನೀಡಿದ್ದಾರೆ.
ಸರ್ಕಾರ ಅನುಮತಿ ನೀಡಿರುವ ಸೇವಾ ಕೇಂದ್ರಗಳ ಬಳಿ ಕೆಲವರು ಲಾಗಿನ್ ಪಡೆದು ಖಾಸಗಿಯವಾಗಿ ನೊಂದಣಿ ಮಾಡುತ್ತಿರುವುದಾಗಿ ಸಾರ್ವಜಿನಿಕ ವಲಯಗಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಮಾಹಿತಿ ಕೇಳುಬರುತಿದ್ದು, ನಮ್ಮ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿಗಾವಹಿಸಿದ್ದು, ಇಂತಹ ಯಾವುದೇ ಮಾಹಿತಿ ಅಧಿಕೃತವಾದರೆ, ಅನಧಿಕೃತವಾಗಿ ನೋಂದಣಿ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ರೀತಿಯ ಕ್ರೀಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.