ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ಅ.30;ಸಾಮಾಜಿಕ ನ್ಯಾಯ ಹಾಗೂ ದುರ್ಬಲ ವರ್ಗದ ಜನರ ಹಿತಾಸಕ್ತಿಯನ್ನು ಕಾಪಾಡುವ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸಬೇಕಾಗಿದೆ ಎಂದು ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಹೇಳಿದರು.
ಕೆ.ಆರ್.ಪುರ ಸಮೀಪದ ಬೆನ್ನಿಗಾನಹಳ್ಳಿಯ ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಕಚೇರಿಯಲ್ಲಿ ಆಯೋಜಿಸಿದ್ದ ಯುವ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸಮಾಜದಲ್ಲಿ ಬೇರೂರಿರುವ ಸಮಾನತೆಯನ್ನು ತೊಡೆದು ಹಾಕಲು ಸಂಘಟನೆ ಮುಖ್ಯವಾಗುತ್ತದೆ. ಎಲ್ಲಾ ವರ್ಗದ ಜನರು ಸಂಘಟಿತರಾಗಿ ನಮಗೆ ಬೇಕಾದ ಮೂಲಭೂತ ಹಕ್ಕುಗಳನ್ನು ಪಡೆಯಲು ಸಂಘಟನೆ ಪ್ರಬಲವಾದ ಅಸ್ತ್ರವಾಗಿದೆ. ಹೋರಾಟದ ಮೂಲಕ ಜನರನ್ನು ಶಿಕ್ಷಿತರನ್ನು ಮಾಡಬೇಕಿದೆ ಎಂದರು.
ಸಮಾನತೆ ಮತ್ತು ತುಳಿತಕ್ಕೆ ಒಳಗಾದವರ ರಕ್ಷಿಸುವ ಉದ್ದೇಶ ಹೊಂದಿರುವ ಕರ್ನಾಟಕ ಸಮತಾ ಸೈನಿಕ ದಳ ರಾಜ್ಯದಲ್ಲಿ ಪ್ರಬಲ ಸಂಘಟನೆಯಾಗಿ ಹೊರಹೊಮ್ಮಿದೆ. ಪ್ರಮುಖ ಸಂಘಟನೆಯಾಗಿರುವ ಕರ್ನಾಟಕ ಸಮತಾ ಸೈನಿಕ ದಳ ರಾಜ್ಯದ ಜ್ವಲಂತ ಸಮಸ್ಯೆಗಳ ಮೇಲೆ ಸರ್ಕಾರದ ಗಮನ ಸೆಳೆಯುವ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಕರ್ನಾಟಕ ಸಮತಾ ಸೈನಿಕ ದಳದ ಯುವ ಘಟಕಕ್ಕೆ ಗೌರವ ಅಧ್ಯಕ್ಷರಾಗಿ ಪುನೀತ್, ಅಧ್ಯಕ್ಷರಾಗಿ ರೇವಂತ್, ಕಾರ್ಯಾಧ್ಯಕ್ಷರಾಗಿ ಅಭಿಲಾಷ್, ಉಪಾಧ್ಯಕ್ಷರಾಗಿ ಸಂತೋಷ್, ಮಂಜು, ಅಲ್ಫಾನ್ ಜೊತೆಗೆ ಇನ್ನೂ ನೂರಾರು ಯುವಕರು ಆಯ್ಕೆಯಾದರು.
ಈ ಸಂಧರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ರಘುಪತಿ, ಕನ್ನಹಳ್ಳಿ ಕೃಷ್ಣಪ್ಪ, ಯುವಶಕ್ತಿ ಸೂರಿ ಇದ್ದರು