ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ನ.06 : ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಎಮ್ಮೆಗಳನ್ನು ಚೇಳೂರು ಪೊಲೀಸರು ರಕ್ಷಿಸಿದ್ದಾರೆ. ಆಂಧ್ರ ಪ್ರದೇಶದ ಅನಂತಪುರಂ ನಿಂದ ತಮಿಳುನಾಡಿಗೆ ಎಮ್ಮೆಗಳನ್ನು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ನಿನ್ನೆ ಬೆಳಗಿನ ಜಾವ 5 ಘಂಟೆಗೆ ಚೇಳೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹರೀಶ್ ಹಾಗು ಠಾಣೆಯ ಸಿಬ್ಬಂದಿ ದಾಳಿ ಮಾಡಿ. ಎರಡು ಬುಲೆರೋ ವಾಹನ ಸಮೇತ 31 ಎಮ್ಮೆಗಳನ್ನ ರಕ್ಷಣೆ ಮಾಡಿದ್ದಾರೆ. ಪೊಲೀಸ್ ರನ್ನು ಕಂಡು ತಮ್ಮ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ನಂತರ ಪೊಲೀಸರೇ ವಾಹನಗಳನ್ನ ತೆಗೆದುಕೊಂಡು ಠಾಣೆಗೆ ಬಂದಿದ್ದಾರೆ.
ದಾಳಿಯಲ್ಲಿ ಎರಡು ಬುಲೆರೋ ವಾಹನ 31 ಎಮ್ಮೆಗಳು ಇದ್ದವು ಎಂದು ತಿಳಿದು ಬಂದಿದ್ದು. ಇದರ ಪೈಕಿ ಅರ್ಧದಷ್ಟು ಸಣ್ಣ ಎಮ್ಮೆ ಕರುಗಳು, ಉಳಿದ ಅರ್ಧದಷ್ಟು ದೊಡ್ಡ ಎಮ್ಮೆಗಳು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮದಂತೆ ಗೋ ಶಾಲೆಗೆ ಎಮ್ಮೆಗಳನ್ನು ಸಾಗಿಸಲಾಗಿದೆ ಎಂದು ಠಾಣೆ ಸಬ್ ಇನ್ಸ್ಪೆಕ್ಟರ್ ಹರೀಶ್ ತಿಳಿಸಿದ್ದಾರೆ.