ಸುದ್ದಿಮೂಲ ವಾರ್ತೆ ಸಿಂಧನೂರು, ಜ.07:
ತೈಲ ಸಂಪದ್ಭರಿತ ರಾಷ್ಟ್ರ ವೆನೆಜುವೆಲಾದ ಮೇಲೆ ಅಮೆರಿಕಾದ ಮಿಲಿಟರಿ ದಾಳಿ ಹಾಗೂ ಅಧ್ಯಕ್ಷ ನಿಕೊಲಸ್ ಮಡೊರಾ ಮತ್ತು ಅಧ್ಯಕ್ಷರ ಪತ್ನಿಿ ಸಿಲಿಯಾ ಪ್ಲೋೋರ್ಸ್ ಬಂಧನ ಖಂಡಿಸಿ, ಎಡ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ಗಾಂಧಿವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ವೆನೆಜುವೆಲಾದ ಕ್ಯಾಾರಕಾಸ್ ಮತ್ತು ಇತರ ಪ್ರದೇಶಗಳಲ್ಲಿ ನಾಗರಿಕ ಮತ್ತು ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ದುರಾಕ್ರಮಣ ಮಾಡಿರುವುದು. ವಿಶ್ವಸಂಸ್ಥೆೆಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆರ್ಥಿಕ ಬಿಕ್ಕಟ್ಟಿಿನಿಂದ ಕಂಗೆಟ್ಟಿಿರುವ ಸಾಮ್ರಾಾಜ್ಯಶಾಹಿ ಅಮೆರಿಕಾ ವೆನೆಜುವೆಲಾದ ದಾಳಿ ನಡೆಸುವ ಮೂಲಕ ಇತರೆ ದೇಶಗಳ ಶಾಂತಿ, ಸ್ಥಿಿರತೆ, ಸೌರ್ವಭೌಮತ್ವ, ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಗಂಭೀರ ಬೆದರಿಕೆಯೊಡ್ಡಿಿದೆ. ಮಡೊರಾ ಮತ್ತು ಅವರ ಪತ್ನಿಿಯನ್ನು ಅಪಹರಿಸಿ ಬಂಧಿಸಿರುವ ಕೃತ್ಯವು ಅಮೆರಿಕದ ಭಯೋತ್ಪಾಾದಕ ದಾಳಿಯಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಪಕ್ಷದ ಬಾಷುಮಿಯಾ, ಡಿ.ಎಚ್.ಕಂಬಳಿ, ಸಿಪಿಐ(ಎಂ)ನ ಬಸವಂತರಾಯಗೌಡ ಕಲ್ಲೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಚಂದ್ರಶೇಖರ ಗೊರಬಾಳ, ಸಿಪಿಐ(ಎಂಎಲ್) ಲಿಬರೇಶನ್ನ ನಾಗರಾಜ ಪೂಜಾರ್, ಜಮಾಅತೆ ಇಸ್ಲಾಾಮಿ ಹಿಂದ್ನ ಹುಸೇಬ್ಸಾಬ್, ಮನುಜಮತ ಬಳಗದ ಬಸವರಾಜ ಬಾದರ್ಲಿ, ಬಾಬರ್ಪಾಷಾ ವಕೀಲರು, ಜಿಲಾನಿಸಾಬ್, ಬಸವರಾಜ ಬೆಳಗುರ್ಕಿ, ಎಂ.ಗೋಪಾಲಕೃಷ್ಣ, ಶರಣಬಣ್ಣ ನಾಗಲಾಪುರ, ಕಂಠೆಪ್ಪ, ಸಿಪಿಐ(ಎಂಎಲ್) ಮಾಸ್ಲೈನ್ನ, ಬಿ.ಎನ್.ಯರದಿಹಾಳ, ಮಂಜುನಾಥ ಗಾಂಧಿನಗರ, ಶಂಕರ ಗುರಿಕಾರ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಾಧ್ಯಕ್ಷೆ ಶಕುಂತಲಾ ಪಾಟೀಲ್, ಮಹಿಳಾ ಒಕ್ಕೂಟದ ವಿರುಪಮ್ಮ ಉದ್ಬಾಾಳ.ಜೆ ಹಾಗೂ ಇತರರು ಇದ್ದರು.
ವೆನೆಜುವೆಲಾ ಮೇಲೆ ಅಮೆರಿಕಾ ದಾಳಿ : ಪ್ರತಿಭಟನೆ

