ಸುದ್ದಿಮೂಲ ವಾರ್ತೆ ರಾಯಚೂರು , ಡಿ.11:
ಧಾರವಾಡದಲ್ಲಿ ಬಂಧಿ0ಸಿರುವ ಉದ್ಯೋೋಗಕ್ಕಾಾಗಿನ ನಿರುದ್ಯೋೋಗಿ ಯುವ ಹೋರಾಟಗಾರರನ್ನು ಈ ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿ ಉದ್ಯೋೋಗಾಕಾಂಕ್ಷಿಗಳ ಹೋರಾಟ ಸಮಿತಿ ಪ್ರತಿಭಟನೆ ಬುಧವಾರ ನಡೆಸಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ನಿರುದ್ಯೋೋಗಿಗಳು ಸರ್ಕಾರದ ನಡೆಗೆ ಆಕ್ರೋೋಶ ವ್ಯಕ್ತಪಡಿಸಿದರು.
ಉದ್ಯೋೋಗಾಂಕ್ಷಿಗಳ ಬೇಗುದಿಗೆ ಇಲ್ಲಿಯವರೆಗೂ ಕಿಂಚಿತ್ತೂ ಸ್ಪಂದಿಸದಿದ್ದ ರಾಜ್ಯ ಕಾಂಗ್ರೆೆಸ್ ಸರ್ಕಾರ ಯಾವುದೇ ನೋಟೀಸ್ ನೀಡದೇ ಧರಣಿಗೆ ಸಜ್ಜಾಾಗುತ್ತಿಿದ್ದ ಸಮಯದಲ್ಲೇ ಉದ್ಯೋೋಗಾಕಾಂಕ್ಷಿಗಳನ್ನು ಏಕಾಏಕಿ ಬಂಧಿಸಿರುವ ಕ್ರಮ ಖಂಡನೀಯ ಎಂದು ಆಪಾದಿಸಿದರು.
ಜನ ತಂತ್ರ ದಮನ ಮಾಡಿರುವ ಅತ್ಯಂತ ಹೀನಾಯ ನಡೆಯಾಗಿದ್ದು ಕಾಂಗ್ರೆೆಸ್ ಸರ್ಕಾರದ ಆಳ್ವಿಿಕೆಯಲ್ಲಿ ಕನಿಷ್ಠ ಪ್ರತಿಭಟನೆಯ ಹಕ್ಕು ಲಭ್ಯವಿಲ್ಲ ಎಂದು ಹಲವು ತಿಂಗಳುಗಳಿಂದ ಖುದ್ದಾಗಿ ಮುಖ್ಯಮಂತ್ರಿಿಗಳ ಭೇಟಿಗೆ ಅವಕಾಶ ಕೇಳುತ್ತಲೇ ಇದ್ದರೂ, ಮುಖ್ಯ ಕಾರ್ಯದರ್ಶಿಗೆ ಉದ್ಯೋೋಗಾಕಾಂಕ್ಷಿಗಳ ಹಕ್ಕೊೊತ್ತಾಾಯಗಳ ಆಗ್ರಹ ಪತ್ರ ತಲುಪಿಸಿದ್ದರೂ ಕನಿಷ್ಠ ಮಟ್ಟದ ಸ್ಪಂದನೆ ನೀಡದೆ, ಯಾವುದೇ ಬಾಧ್ಯತೆ ತೋರದೆ ಸರ್ಕಾರವು ಉದ್ಯೋೋಗಾಕಾಂಕ್ಷಿಗಳನ್ನು ಬಂಧಿಸಿ ರಾಜ್ಯವನ್ನು ಪೊಲೀಸ್ ರಾಜ್ಯವನ್ನಾಾಗಿಸಿದೆ ಎಂದು ದೂರಿದರು.
ಒಳಮೀಸಲಾತಿಯ ಕುಂಟುನೆಪ ಮುಂದಿಟ್ಟುಕೊಂಡು ಹಲವು ತಿಂಗಳುಗಳಿಂದ ನೇಮಕಾತಿ ವಿಳಂಬ ಮಾಡುತ್ತಲೇ ಇರುವ ಕಾಂಗ್ರೆೆಸ್ ಸರ್ಕಾರ ಜನವಿರೋಧಿ ಕ್ರಮ ತೆಗೆದುಕೊಂಡು ಜನತಂತ್ರದ ಹರಣ ಮಾಡಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸತಿಯ ಜಂಟಿ ಕಾರ್ಯದರ್ಶಿ ವಿನೋದ್ ಕುಮಾರ , ಕಾರ್ಮಿಕ ಮುಖಂಡ ಎನ್.ಎಸ್.ವೀರೇಶ್,ಶಿವಪ್ಪ ಆಸ್ಕಿಿಹಾಳ್, ಕೃಷ್ಣ ಮನ್ಸಲಾಪುರ, ಶಿವರಾಜ್, ಚೇತನ, ಮುನೇಶ್, ಜಾರ, ಕೃಷ್ಣ ಇನ್ನಿಿತರ ಉದ್ಯೋೋಗಾಕಾಂಕ್ಷಿಗಳು ಇದ್ದರು.
ಉದ್ಯೋಗಕ್ಕಾಗಿನ ಹೋರಾಟಗಾರರ ಬಂಧನ ಖಂಡಿಸಿ ಪ್ರತಿಭಟನೆ

