ಸುದ್ದಿಮೂಲವಾರ್ತೆ
ಚೇಳೂರು,ಅ.21: ತಾಲೂಕಿನ ಚಾಕವೇಲು ಬೆಸ್ಕಾಂ ಕಚೇರಿ ಎದುರು ರೈತರು ಸಮರ್ಪಕ ವಿದ್ಯುತ್ ಗಾಗಿ ಪ್ರತಿಭಟನೆ ನಡೆಸಿದರು.
ಸರ್ಕಾರ ಸರಿಯಾಗಿ ಕರೆಂಟ್ ನೀಡುತ್ತಿಲ್ಲ. ಅಲ್ಪ-ಸ್ವಲ್ಪ ಕೊಡುವ ಕರೆಂಟ್ ರಾತ್ರಿ ವೇಳೆ ಕೊಡುತ್ತಿದ್ದಾರೆ. ರಾತ್ರಿ ವೇಳೆ ಬಿಟ್ಟು ಹಗಲೇ ಪೂರ್ತಿ ಅವಧಿಯ ಕರೆಂಟ್ ನೀಡಬೇಕು ಎಂದು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು. ಆದರೆ, ಇದಕ್ಕೆ ಒಪ್ಪದ ರೈತರು ಮೇಲಾಧಿಕಾರಿಗಳು ಇಲ್ಲಿಗೆ ಬರಲಿ ನಾವು ಇಲ್ಲೇ ಅಧಿಕಾರಿಗಳನ್ನು ಕೇಳುತ್ತೇವೆ ಎಂದು ಪಟ್ಟುಹಿಡಿದರು.
ರಾಜ್ಯದಲ್ಲಿ ಮಾತ್ರ ಬರ ಬೇರೆ ರಾಜ್ಯಗಳಲ್ಲಿ ಇಲ್ಲವಾ ಬರ, ಪಕ್ಕದ ಆಂಧ್ರದಲ್ಲಿ 9 ತಾಸು ಅಲ್ಲಿನ ರೈತರಿಗೆ ಹಗಲೋತ್ತು ಕರೆಂಟ್ ನೀಡುತ್ತಿದೆ. ಅವರಿಗಿಲ್ಲದ ಬರ ನಮಗೆ ಮಾತ್ರ ಇದ್ದೀಯ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಸರ್ಕಾರ ಕಾರ್ಖಾನೆಗಳಿಗೆ 24 ಘಂಟೆ ಕರೆಂಟ್ ಕೊಡುವುದಾಗಿ ಕಾರ್ಖಾನೆ ಮಾಲೀಕರಿಗೆ ಭರವಸೆ ನೀಡಿರುತ್ತದೆ, ಅವರಿಗೆ 24 ಘಂಟೆ ಕರೆಂಟ್ ಕೊಡುವ ಸರ್ಕಾರ. ರೈತರಿಗೆ ಕೇವಲ 7 ಘಂಟೆ ಕರೆಂಟ್ ನೀಡುವುದಕ್ಕೆ ಆಗುವುದಿಲ್ಲವೇ ಎಂದು ಬೆಸ್ಕಾಂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಬೇಡಿಕೆಗಳು ಈಡೇರಿಸದೆ ಇದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.