ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ತಾಲೂಕಿನ ದೇವಸೂಗೂರಿನ ಜನತಾ ಕಾಲೋನಿ ಸರ್ಕಾರಿ ಶಾಲೆಯನ್ನು ಉಳಿಸಲು ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಜರುಗಿತು.
ಇಂದು ವಿದ್ಯಾಾರ್ಥಿ ಹಾಗೂ ಪೋಷಕರ ಪ್ರತಿಭಟನಾ ಸಭೆಯಲ್ಲಿ ಎಐಡಿಎಸ್ಓ ಅಧ್ಯಕ್ಷ ಹಯ್ಯಳಪ್ಪ ಮಾತನಾಡಿ, ಸರ್ಕಾರ ದೇವಸೂಗೂರಿನಲ್ಲಿ ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆಯನ್ನು ಆರಂಭಿಸಿ ಅದರ ನೆಪದಲ್ಲಿ ಸುತ್ತಮುತ್ತಲಿನ 5-6 ಕಿಲೋಮೀಟರ್ ವ್ಯಾಾಪ್ತಿಿಯಲ್ಲಿರುವ 4 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲು ಹೊರಟಿದೆ. ದೇವಸೂಗುರಿನ ಜನತಾ ಕಾಲೋನಿ ಶಾಲೆಯಲ್ಲಿ 70ಕ್ಕೂ ಹೆಚ್ಚು ಮಕ್ಕಳು ಓದುತ್ತಿಿದ್ದಾರೆ. ಆದರೆ, ಈ ಶಾಲೆಯನ್ನು ವಿಲೀನಗೊಳಿಸುವುದರಿಂದ ಇಲ್ಲಿನ ಮಕ್ಕಳಿಗೆ ತೀವ್ರ ಅನ್ಯಾಾಯವಾಗಲಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಸರ್ಕಾರ ಈ ಶಾಲೆಯನ್ನು ಮುಚ್ಚಿಿ, ಇಲ್ಲಿನ ಮಕ್ಕಳನ್ನು ಬೇರೆ ಕಡೆ ಕಳುಹಿಸಲು ಅನುಮತಿ ನೀಡಿದ್ದು ಸರಿಯಲ್ಲಘಿ ಎಂದರು.
ಊರಿನ ಮುಖಂಡ ವೀರೇಶ್ ಮಾತನಾಡಿ, ನಮ್ಮ ಸರ್ಕಾರಿ ಶಾಲೆಗೆ ಬೇಕಿರುವುದು ನಮ್ಮ ಮಕ್ಕಳಿಗೆ ಜ್ಞಾನ, ನೀತಿ ಮತ್ತು ಗೌರವ ಕಲಿಸುವ ಒಳ್ಳೆೆಯ ಶಿಕ್ಷಕರು ಹಾಗೂ ಮೂಲಸೌಕರ್ಯಗಳೇ ಹೊರತು ವಿಲೀನವಲ್ಲ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಶಾಲೆ ಮುಚ್ಚುವ ವಿಷಯದಲ್ಲಿ ಸರ್ಕಾರಕ್ಕೆೆ ನಮ್ಮ ಇಡೀ ಹಳ್ಳಿಿಯ ಸಂಪೂರ್ಣ ವಿರೋಧವಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಹಾಗೂ ಗ್ರಾಾಮಸ್ಥರಾದ ತಿಮ್ಮಪ್ಪ, ರಫೀಕ್, ಹಂಪಣ್ಣ, ಸುರೇಶ, ಶರಣಮ್ಮ, ಜಯಮ್ಮ, ಭೀಮವ್ವ, ಶಾಲೆಯ ಹಳೆ ವಿದ್ಯಾಾರ್ಥಿಗಳು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.
ದೇವಸೂಗೂರಲ್ಲಿ ಶಾಲೆ ವಿಲೀನ ವಿರೋಧಿಸಿ ಪ್ರತಿಭಟನೆ

