ಸುದ್ದಿಮೂಲವಾರ್ತೆ
ಕೊಪ್ಪಳ,ಜು.25: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ ಇಂದು ಕೊಪ್ಪಳದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸೆಂಟರ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ಪ್ರಾಂತ ರೈತ ಸಂಘ ಜಂಟಿ ಕ್ರಿಯಾ ಸಮಿತಿಗಳು ಪ್ರತಿಭಟನೆ ನಡೆಸಿದರು.
ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಮಣಿಪುರದ ವಿರುದ್ದ ಘೋಷಣೆ. ಅಮಾನವೀಯವಾಗಿ ನಡೆದುಕೊಂಡ ಮಣಿಪುರ ಸರಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಹೋರಾಟದಲ್ಲಿ ಸುಂಕಪ್ಪ ಗದಗ್, ಖಾಸಿಂಸಾಬ್ ಸರ್ದಾರ್, ಹನುಮೇಶ್ ಕಲ್ಮಂಗಿ, ಗೌಸುಸಾಬ್ ನದಾಫ್, ರೇಣುಕಮ್ಮ, ಹುಲಗಪ್ಪ ಪರಮಟ್ಟಿ, ಕರಿಯಮ್ಮ, ಹುಲುಗಪ್ಪ ಗೋಕಾವಿ, ಹುಸೇನ್ ಸಾಬ್ ನದಾಫ್, ರಾಮಣ್ಣ ದೊಡ್ಮನಿ, ಪಕೀರಮ್ಮ ಮಿರಗನತಂಡಿ, ಅಮರವ್ವ ಗದಗ, ಯಲ್ಲಮ್ಮ ಕವಲೂರು, ಶಾಂತವ್ವ ಬೆಂಗಳೂರು, ಸುಂಕರವ್ವ ಕುಕನೂರು ನಿಂಗಪ್ಪ ಇಡಗಲ್ ಇದ್ದರು.