ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.05:
ರಾಜ್ಯದಲ್ಲಿ ದಲಿತ ಗೃಹ ಮಂತ್ರಿಿಯಾಗಿದ್ದರು ದಲಿತರ ಮೇಲೆ ದೌರ್ಜನ್ಯ ಹಾಗೂ ಕೊಲೆಗಳು ಹೆಚ್ಚುತ್ತಿಿರುವುದನ್ನು ಖಂಡಿಸಿ ಲಿಂಗಸಗೂರು ಪಟ್ಟಣದಲ್ಲಿ ಜ, 7ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಡಿ.ಎಸ್.ಎಸ್ ಜಿಲ್ಲಾಾ ಸಂಚಾಲಕ ಹನಮಂತಪ್ಪ ವೆಂಕಟಾಪುರ ಹೇಳಿದರು.
ಪಟ್ಟಣದ ಪತ್ರಿಿಕಾಭವನದಲ್ಲಿ ಪತ್ರಿಿಕಾಗೋಷ್ಠಿಿ ಮಾತನಾಡುತ್ತಾಾ ಲಿಂಗಸಗೂರು ತಾಲೂಕಿನ ಹಟ್ಟಿಿ ಚಿನ್ನದ ಗಣಿಯ ದಲಿತ ಮಹಿಳೆ ಕು.ಜ್ಯೋೋತಿ ಕೊಲೆ ಹಾಗೂ ಹುಬ್ಬಳ್ಳಿಿಯ ಇನಾಮಿಪುರದ ದಲಿತನನ್ನು ಮದುವೆಯಾದ ಗರ್ಭಿಣಿ ಯುವತಿಯ ಕೊಲೆ ನಡೆದಿದ್ದು ಸಮಾನತೆಯನ್ನು ಸಾರಿದ ಬಸವಣ್ಣನವರ ನಾಡಿನಲ್ಲಿ ದಲಿತರನ್ನು ಮದುವೆಯಾಗಿದ್ದಕ್ಕೆೆ ಮಗಳನ್ನೆೆ ಕೊಲೆ ಮಾಡಿರುವುದು ಸೇರಿ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಕೊಲೆಗಳು ನಡೆಯುತ್ತಿಿವೆ ದಲಿತ ಗೃಹಮಂತ್ರಿಿ ಇದ್ದರು ದಲಿತರಿಗೆ ಮಾತ್ರ ನ್ಯಾಾಯ ಸಿಗದಂತಾಗಿದೆ. ಕೂಡಲೆ ಹಟ್ಟಿಿ ಯುವತಿಯ ಕೊಲೆಗಾರರನ್ನು ಬಂಧಿಸಬೇಕು ಹುಬ್ಬಳ್ಳಿಿಯ ದಲಿತ ಕುಟುಂಬಕ್ಕೆೆ ಸರಕಾರ ಪರಿಹಾರ ಒದಗಿಸಿ ತಪ್ಪಿಿತಸ್ಥರ ಮೇಲೆ ಕ್ರಮಜರುಗಿಸಬೇಕೆಂದು ಜನವರಿ 7ರಂದು ಲಿಂಗಸಗೂರು ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿಿದೆ ಸಮಾಜದ ಯುವಕರು, ದಲಿತಪರ ಹೋರಾಟಗಾರರು, ಚಿಂತಕರು, ಪ್ರಗತಿಪರರು ಹೋರಾಟ ಬೆಂಬಲಿಸಿ ಯಶಸ್ವಿಿಗೊಳಿಸುವಂತೆ ಮನವಿ ಮಾಡಿದರು.
ಈವೇಳೆ ಶರಣಪ್ಪ ಕಟ್ಟಿಿಮನಿ, ಆಜಪ್ಪ ಕರಡಕಲ್, ಲಕ್ಕಪ್ಪ ನಾಗರಾಳ, ಬಸವರಾಜ ಮುದಗಲ್, ನಾಗರಾಜ ಯರಡೋಣ, ಹುಸೇನಪ್ಪ ದೊಡ್ಡಮನಿ, ಬಸವರಾಜ ಕುಣಿಕೆಲ್ಲೂರು, ನಾಗರಾಜ ಮುಂದಿನಮನಿ, ನಾಗರಾಜ ಹಾಲಬಾವಿ, ದುರಗಪ್ಪ ಯರಡೋಣ ಸೇರಿ ಇತರರಿದ್ದರು.
ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಲಿಂಗಸಗೂರಲ್ಲಿ ಜ, 7ರಂದು ಪ್ರತಿಭಟನೆ : ವೆಂಕಟಾಪುರ

