ಸುದ್ದಿಮೂಲ ವಾರ್ತೆ
ಆನೇಕಲ್, ಜು.26 : ಮಣಿಪುರದಲ್ಲಿ ಬುಡಕಟ್ಟು ಜನಾಂಗದ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸಿಐಟಿಯು ಮತ್ತು ವಿವಿಧ ಸಂಘಟನೆಗಳು ಚಂದಾಪುರ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಣಿಪುರ ಸಿಎಂ ವಿರುದ್ಧ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಪ್ರತಿಭಟನೆಯನ್ನು ಚಂದಾಪುರ ಘಟಕದ ಸಿಐಟಿಯು ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬಳಿಕ ಮಾತನಾಡಿದ ಸುರೇಶ್, ಮಣಿಪುರದಲ್ಲಿ ಕಳೆದ 80 ದಿನಗಳಿಂದ ದೇವಸ್ಥಾನಗಳು, ಚರ್ಚ್ ಗಳು, ಸಾವಿರಾರು ಮನೆಗಳು ಜನಾಂಗೀಯ ಕಲಹಕ್ಕೆ ದ್ವಂಸವಾಗಿವೆ. ದೇಶದ ಸೈನಿಕನ ಪತ್ನಿ ಸೇರಿದಂತೆ ಹಲವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಬಿಜೆಪಿ ಸರ್ಕಾರದ ಈ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಕೂಡಲೇ ಸಂತ್ರಸ್ತರಿಗೆ ಪುನವರ್ಸತಿ ಕೇಂದ್ರ ನೀಡಬೇಕು ಎಂದು ಒತ್ತಾಯಿಸಿದರು.