ಸುದ್ದಿಮೂಲವಾರ್ತೆ
ಕೊಪ್ಪಳ,ಆ.24:ಕೊಪ್ಪಳವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಸಿಐಟಿಯು ನೇತ್ರತ್ವದ ಕಟ್ಟಡ ಕರ್ನಾಟಕ ರಾಜ್ಯ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನಿಂದ ಪ್ರತಿಭಟನೆ ನಡೆಸಿದರು.
ಕೊಪ್ಪಳದ ಜಿಲ್ಲಾಡಳಿತ ಕಚೇರಿಯ ಮುಂದೆ ಪ್ರತಿಭಟನೆ ಮಾಡಿಕಟ್ಟಡ ಕಾರ್ಮಿಕ ಮಕ್ಕಳ ಶೈಕ್ಷಣಿಕ ಅರ್ಜಿ ಹಣ ವರ್ಗಾವಣೆ ಮಾಡಬೇಕು. ಕಟ್ಟಡ ಕಾರ್ಮಿಕ ಕಾರ್ಡ್ ನವೀಕರಣ ಸಂದರ್ಭದಲ್ಲಿ ಹಾಜರಾತಿ, ವೇತನ ಕಡ್ಡಾಯಗೊಳಿಸಿ ಆದೇಶ ಹಿಂಪಡೆಯಬೇಕು.ಬೋಗಸ್ ಕಾರ್ಡ್ ನಿಯಂತ್ರಿಸಬೇಕು
ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿಗಳ ಮುಖಾಂತರ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಕಾಸಿಂ ಸರದಾರ. ಹನುಮೇಶ ಕಲ್ಮಂಗಿ ಹಲವರು ಇದ್ದರು,