ಸುದ್ದಿಮೂಲವಾರ್ತೆ
ಕೊಪ್ಪಳ, ಸೆ.16:ಕೊಪ್ಪಳ ತಾಲೂಕಿನ ಬಿಸಿಯೂಟ ತಯಾರಕರು ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಬಿಸಿಯೂಟ ತಯಾರಕರ ಒಕ್ಕೂಟದಿಂದ ಪ್ರತಿಭಟನೆಯನ್ನು ನಡೆಸಿದರು.
ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಬಿಸಿಯೂಟ ನೌಕರರಿಗೆ ನೀಡಿದ ಭರವಸೆಗಳನ್ನು ಜಾರಿಮಾಡದಿರುವ ಶಿಕ್ಷಣ ಸಚಿವರ ಧೋರಣೆಗಳನ್ನು ಖಂಡಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ರಾಜ್ಯ ಮಂಡಳಿಯು ಕರೆ ನೀಡಿರುವ ಚಳುವಳಿಗೆ ಬೆಂಬಲಿಸಿ ಇಂದು ಕೊಪ್ಪಳ ಜಿಲ್ಲೆಯ ಬಿಸಿಯೂಟ ತಯಾರಕರು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿ, ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೊಪ್ಪಳ ತಾಲೂಕಿನ ಬೋಚನಳ್ಳಿ ಗ್ರಾಮದ ಬಿಸಿಯೂಟ ಮಹಿಳೆ ದೇವಮ್ಮ ಇವರು ಅಡುಗೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟು ಒಂದು ವರ್ಷವಾಗಿದ್ದು, ಅವರಿಗೂ ಸರಕಾರ ತಕ್ಷಣ ಪರಿಹಾರವನ್ನು ಘೋಷಿಸಬೇಕು.
ಚುಣಾವಣೆಯ ಸಂದರ್ಭದಲ್ಲಿ ಪ್ರಿಯಾಂಕ ಗಾಂಧಿಯವರು ಘೋಷಣೆ ಮಾಡಿದ್ದ 6ನೇ ಗ್ಯಾರಂಟಿಯನ್ನು ಜಾರಿ ಮಾಡಬೇಕು ಅಂದರೆ ಬಿಸಿಯೂಟ ವೇತನವನ್ನು 6ಸಾವಿರ ರೂಪಾಯಿಗೆ ಹೆಚ್ಚಿಸಬೇಕು. ಶಾಲಾ ಮುಖ್ಯೋಪಾಧ್ಯಾಯರ ಮತ್ತು ಎಸ್ಡಿಎಂಸಿ ಅಧ್ಯಕ್ಷರ ಹೆಸರಲ್ಲಿ ಬ್ಯಾಂಕಿನ ಖಾತೆಯನ್ನು ತೆರೆಯಬೇಕೆನ್ನುವ ಹೊಸ ಆದೇಶವನ್ನು ಸರಕಾರ ಕೈಬಿಡಬೇಕು. ಕನಿಷ್ಟ ವೇತನವನ್ನು ಜಾರಿಗೆ ತರಬೇಕು. ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಹಿಂದಿನ ಸರಕಾರ ಹೆಚ್ಚಿಸಿದ ಒಂದು ಸಾವಿರ ರೂಪಾಯಿ ಗೌರವಧನವನ್ನು ತಕ್ಷಣ ಬಿಡುಗಡೆಯನ್ನು ಮಾಡಬೇಕು. ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸಿದರು.
ಈ ಸಂದರ್ಭದಲ್ಲಿ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ್, ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಸಿದ್ಲಿಂಗಪ್ಪ ಹಡಪದ, ಮಕಬೂಲ ರಾಯಚೂರು, ಪುಷ್ಪಾ ಮೇಸ್ತ್ರಿ, ಶರಣಮ್ಮ ಹೊಸಬಂಡಿ ಹರ್ಲಾಪುರ, ನಿರ್ಮಲ, ವಿಮಲಾ, ಪದ್ಮಾ ಹುಲಗಿ ವಹಿಸಿಕೊಂಡಿದ್ದರು.