ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.12:
ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಿಕ ಮುಷ್ಕರದ ಅಂಗವಾಗಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಬಳ್ಳಾಾರಿಯಲ್ಲಿ ಗುರುವಾರ ಬೃಹತ್ ಮೆರವಣಿಗೆ ನಡೆಸಿ, ಜಿಲ್ಲಾಾಡಳಿತದ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆೆ ಮನವಿ ಸಲ್ಲಿಸಲಾಯಿತು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಮುಖಂಡ ಆದಿಮೂರ್ತಿ ಅವರು ಪ್ರತಿಭಟನೆಯ ನೇತೃತ್ವವಹಿಸಿ, ಕೇಂದ್ರ ಸರ್ಕಾರ ಜಾರಿ ಮಾಡಿರುವ ಲೇಬರ್ ಕೋಡ್ಗಳಿಂದ ದುಡಿಯುವವರ ಬದುಕು ಬಂಗಾರವಾಗುವುದಿಲ್ಲ. ಕಾರ್ಮಿಕರ ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ, ಕಾರ್ಮಿಕರ ಸಾಮೂಹಿಕ ಚೌಕಾಸಿ ಹಕ್ಕನ್ನು ಮೊಟಕುಗೊಳಿಸುವ, ನಿಗದಿತ ಅವಧಿಗೆ ಉದ್ಯೋೋಗದ ಮೂಲಕ ಖಾಯಂ ಸ್ವರೂಪದ ಕೆಲಸಗಳಿಗೆ ತಿಲಾಂಜಲಿ ನೀಡುವ ಮೂಲಕ ಕಾರ್ಮಿಕರನ್ನು ಶೋಷಿಸುವ ಲೇಬರ್ ಕೋಡ್ಗಳನ್ನು ತಕ್ಷಣವೇ ಹಿಂದಕ್ಕೆೆ ಪಡೆಯಬೇಕು ಎಂದರು.
ಪ್ರತಿ ದಿನ 12 ತಾಸು ಕೆಲಸದ ಅವಧಿ ಹೆಚ್ಚಿಿಸಿರುವುದು ಮತ್ತು ಮಹಿಳಾ ಉದ್ಯೋೋಗಿಗಳಿಗೆ ರಾತ್ರಿಿ ಪಾಳೀಯಲ್ಲೂ ದುಡಿಸಿಕೊಳ್ಳುವುದು, ಕಾರ್ಮಿಕರ ಆರೋಗ್ಯ, ಭದ್ರತೆ ಬಗ್ಗೆೆ ಕಿಂಚಿತ್ತೂ ಕಾಳಜಿ ತೋರದೆ ಇರುವುದು ಸೇರಿ 29 ಕಾರ್ಮಿಕ ಕಾಯ್ದೆೆಗಳನ್ನು ತಿದ್ದುಪಡಿ ಮಾಡಿ ಬಂಡವಾಳಗಾರರಿಗೆ ಗರಿಷ್ಠ ಲಾಭಗಳಿಸಲು ಅವಕಾಶ ಕಲ್ಪಿಿಸಿರುವುದು ಮಾನವ ವಿರೋಧಿ ಚಿಂತನೆಯಾಗಿದೆ ಎಂದು ಆರೋಪಿಸಿದರು.
ಎಐಯುಟಿಯುಸಿಯ ಜಿಲ್ಲಾಾಧ್ಯಕ್ಷರಾದ ಎ. ದೇವದಾಸ್ ಪ್ರತಿಭಟನೆಯ ಅಧ್ಯಕ್ಷತೆವಹಿಸಿದ್ದರು, ಎಐಯುಟಿಯುಸಿಯ ಜಿಲ್ಲಾಾ ಉಪಾಧ್ಯಕ್ಷರಾದ ಆರ್. ಸೋಮಶೇಖರಗೌಡ, ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಸತ್ಯಬಾಬು, ಕೆಪಿಆರ್ಎಸ್ ರಾಜ್ಯ ಅಧ್ಯಕ್ಷರಾದ ಯು. ಬಸವರಾಜ್, ಅಖಿಲ ಭಾರತ ವಿಮಾ ನೌಕರರ ಸಂಘಟನೆಯ ಸೂರ್ಯನಾರಾಯಣ, ಬ್ಯಾಾಂಕ್ ನೌಕರರ ಸಂಘಟನೆಯ ಘನ ಮಲ್ಲಿಕಾರ್ಜುನ, ಸುರೇಶ್, ಗೀತ, ಗೋವಿಂದ್, ಮಾಧವರೆಡ್ಡಿಿ, ಸಂಗನಕಲ್ಲು ಕೃಷ್ಣಪ್ಪ, ಹನುಮಂತಪ್ಪ, ಎರಿಸ್ವಾಾಮಿ, ನಾಗರತ್ನ, ಕಟ್ಟಿಿಬಸಪ್ಪ, ಮಲ್ಲಮ್ಮ, ಚಂದ್ರಕುಮಾರಿ, ಜಗದೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

