ಸುದ್ದಿಮೂಲವಾರ್ತೆ
ಕೊಪ್ಪಳ,ಅ.10: ರಾಜ್ಯದಲ್ಲಿ ಕಾಂತರಾಜ್ ವರದಿ ಅಂಗೀಕರಿಸಲು ಆಗ್ರಹಿಸಿ ಅ 11 ರಂದು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಸ್ಡಿಪಿಐನ ಜಿಲ್ಲಾ ಕಾರ್ಯದರ್ಶಿ ಯೂಸೂಫ್ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮತನಾಡಿ ಸಿದ್ದರಾಮಯ್ಯ ಈ ಕಾಂತರಾಜ್ ವರದಿ ತಯಾರಿಸಿದೆ ಇದನ್ನು ಈಗ ಮತ್ತೆ ಸಿದ್ದರಾಮಯ್ಯ ಸರಕಾರದಲ್ಲಿ ಅಂಗೀಕರಿಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಹಿಂದಿನ ಸರಕಾರು 2B ಮೀಸಲಾತಿಯನ್ನು ರದ್ದು ಮಾಡಿದೆ. ಇದಕ್ಕೆ ಮುಸ್ಲಿಂರಿಗೆ ಶೇ 8 ರಷ್ಟು ಮೀಸಲಾತಿ ನೀಡಬೇಕು. ಈ ಸರಕಾರವು ಅಧಿಕಾರಕ್ಕೆ ಬರುವಾಗ ಬಿಜೆಪಿ ಸರಕಾರದ ಮೀಸಲಾತಿಯನ್ನು ತಕ್ಷಣ ನೀಡುವುದಾಗಿ ಹೇಳಿದ್ದರು. ಆದರೆ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಸ್ಪಷ್ಠತೆ ಇಲ್ಲ. ಕೇವಲ ಮತಕ್ಕಾಗಿ ಹೇಳಿ ನಂತರ ನಮಗೆ ಮೋಸ ಮಾಡಿದ್ದಾರೆ ಅದಕ್ಕೆ ಈಗ ಹೋರಾಟ ಮಾಡಲಾಗುವುದು ಎಂದರು.
ಬುಧುವಾರ ಮುಂಜಾನೆ 10.30 ರಿಂದ ಮದ್ಯಾಹ್ನದವರೆಗೂ ಬಸವೇಶ್ವರ ವೃತ್ತದಲ್ಲಿ ಧರಣಿ ಕುಳಿತುಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಲ್ಲ ಆದರೆ ಸರಾಯಿ ಮಾರಾಟ ಮಾಡಲು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೂಜೂರು ಅಹ್ಮದ್ ಮಹ್ಮದ್ ಸಾದಿಕ, ಎಸ್ ಡಿಪಿಐ ಯುಸೂಪ್ ಮೋದಿ, ಸಂಘಟನಾ ಕಾರ್ಯದರ್ಶಿ ನಿಜಾಮುದ್ದಿನ ಮಾಳೆಕೊಪ್ಪ, ಸಲೀಂ ಖಾದ್ರಿ ಇದ್ದರು.