ಸುದ್ದಿಮೂಲ ವಾರ್ತೆ ಕೊಪ್ಪಳ, ಜ.20:
ತೊಗರಿ. ಮೆಕ್ಕೆೆಜೋಳ. ಭತ್ತದ ಖರೀದಿ ಕೇಂದ್ರ ಆರಂಭಿಸಲು ಒತ್ತಾಾಯಿಸಿ ಇಂದು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಾ ಘಟಕದಿಂದ ಜಿಲ್ಲಾಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ಇಂದು ಕೊಪ್ಪಳ ಜಿಲ್ಲಾಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ ತೊಗರಿ, ಮೆಕ್ಕೆೆಜೋಳ, ಭತ್ತ ಖರೀದಿ ಕೇಂದ್ರ ತೆರೆಯಬೇಕು. ಬೆಳೆದ ಬೆಳೆಗೆ ಬೆಂಬಲ ಬೆಲೆ ಹಾಗೂ ಬೆಳೆ ಹಾನಿ ಪರಿಹಾರ ನೀಡುವಂತೆ ಒತ್ತಾಾಯಿಸಿದರು.
ತೊಗರಿ ಬೆಳೆಗೆ ಪ್ರತಿ ಕ್ವಿಿಂಟಾಲ್ ಗೆ 8500 ಬೆಂಬಲ ಬೆಲೆ ನೀಡಬೇಕು, ಈ ವೇಳೆ ರಸ್ತೆೆಗೆ ತೊಗರಿ ಚೆಲ್ಲಿ ಬಾರಕೋಲು ಬೀಸಿ, ನೇಗಿಲು ಹಿಡಿದು ಪ್ರತಿಭಟನೆ ನಡೆಸಿದರು. ಈ ಕುರಿತು ಕನಕಗಿರಿಯಲ್ಲಿ ಹೋರಾಟ ಮಾಡಿದರೂ ಜಿಲ್ಲಾಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಾಡಳಿತ ನಿರ್ಲಕ್ಷ್ಯ ಮಾಡಿದೆ, ರೈತರ ಬಗ್ಗೆೆ ಕಾಳಜಿ ಇಲ್ಲ, ಬೆಳೆ ಹಾನಿ ಪರಿಹಾರ ಇಲ್ಲ ಉಸ್ತುವಾರಿ ಸಚಿವರನ್ನು ಬದಲಾಯಿಸಿ ರೈತರನ್ನು ಉಳಿಸಿ ಎಂದು ರೈತರು ಆಕ್ರೋೋಶ ವ್ಯಕ್ತಪಡಿಸಿದರು.
ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟನೆ

