ಸುದ್ದಿಮೂಲವಾರ್ತೆ
ಕೊಪ್ಪಳ ಜೂ 28: ಸರಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಪಡೆಯಬೇಕೆಂದು ಆಗ್ರಹಿಸಿ ಎಐಸಿಸಿಟಿಯು ಸಂಘಟನೆಯಿಂದ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಎಐಸಿಸಿಟಿಯು ನೇತ್ರತ್ವದ ಪೌರಕಾರ್ಮಿಕರು. ಚಾಲಕರು.ಕ್ಲೀನರ್ ಸೇರಿ ಹಲವು ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ಕೇಂದ್ರ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ಯುಜಿಡಿ. ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಮಿಕರನ್ನು ನೇರ ಪಾವತಿ ಕಾರ್ಮಿಕರನ್ನು ಒಂದೇ ವೇದಿಕೆಯಲ್ಲಿ ತಂದು ಸಮಾನ ವೇತನ ನೀಡಬೇಕು. 2013 ರಲ್ಲಿ ಪೌರಕಾರ್ಮಿಕ ಸಮಸ್ಯೆ ಕುರಿತು ನೇಮಿಸಿದ್ದ ತ್ರಿಸದಸ್ಯ ಸಮಿತಿಯವರ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಯ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಪಿಎಂಎಲ್ ಕಾರ್ಯದರ್ಶಿ ವಿಜಯ, ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಸಂಘದ ಕಾರ್ಯದರ್ಶಿ ಕೇಶವ ನಾಯ್ಕ. ಕೇಶವ ನಾಯ್ಕ , ಎಐಸಿಸಿಟಿಯು ನ ಜಿಲ್ಲಾ ಅಧ್ಯಕ್ಷ ಪರಶುರಾಮ್, ಸಣ್ಣ ಹನುಮಂತಪ್ಪ ಹುಲಿಹೈದರ್,ಬಾಬರ್ ಗಂಗಾವತಿ,ಮಾಯಮ್ಮ ಗಂಗಾವತಿ,ಇತರರು ಇದ್ದರು