ಸುದ್ದಿಮೂಲವಾರ್ತೆ
ಕೊಪ್ಪಳ, ಸೆ.19: ಸಾಮಾನ್ಯವಾಗಿ ಊಟ, ಮನೆ ಬೇಕೆಂದು ಹೋರಾಟ ಮಾಡುವುದು ಕೇಳಿದ್ದೇವೆ. ಇನ್ನೊಂದು ಕಡೆ ನಮ್ಮೂರಿನಲ್ಲಿ ಸರಾಯಿ ಅಂಗಡಿ ಬೇಡ ಎಂದು ಹೋರಾಟ ಮಾಡಿದ್ದು ಕೇಳಿದ್ದೇವೆ. ಆದರೆ ಇಂದು ಕೊಪ್ಪಳದಲ್ಲಿ ಇಂದು ಇದಕ್ಕೆ ವಿರೋಧವಾಗಿರುವ ಹೋರಾಟ ನಡೆಯಿತು. ನಮ್ಮೂರಿಗೆ ಬಾರ್ ಒಪನ್ ಮಾಡಿ ಎಂದು ಕೆಲವರು ಹೋರಾಟ ಮಾಡಿದ ಘಟನೆ ನಡೆದಿದೆ.
ಇಂದು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಕೆಲವರು ಬೇಕೆ ..ಬೇಕು ಬಾರ್ ಬೇಕು. ಅನ್ಯಾಯ ದಿಕ್ಕಾರ. ಬಾರ್ ಒಪನ್ ಮಾಡಲು ವಿರೋಧಿಸುವವರಿಗೆ ದಿಕ್ಕಾರ ಎಂದು ಘೋಷಣೆ ಹಾಕುತ್ತಾ ನಮ್ಮ ಗ್ರಾಮದಲ್ಲಿ ಎಣ್ಣೆ ಅಂಗಡಿ ಬೇಕೆಂದು ಹೋರಾಟ ಮಾಡಿದ್ದಾರೆ.
ಇಂದು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಕುಕನೂರ ತಾಲೂಕಿನ ಕುದರಿಮೋತಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು. ಕುದರಿಮೋತಿಗೆ ಕಾರಟಗಿಯಲ್ಲಿದ್ದ ಲಿಕ್ಕರ್ ಅಂಗಡಿ ಸ್ಥಳಾಂತರಿಸಿ ಆರಂಭಿಸಲು ಸರಕಾರ ಪರವಾನಿಗೆ ನೀಡಿದೆ. ಆದರೆ ಇಲ್ಲಿ ಮದ್ಯದ ಅಂಗಡಿ ಬೇಡ ಎಂದು ಕೆಲವರು ವಿರೋಧಿಸಿ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಲಯವು ಇಲ್ಲಿ ಲಿಕ್ಕರ್ ಅಂಗಡಿ ಆರಂಭಿಸಬಹುದು ಎಂದು ಸೂಚನೆ ನೀಡಿದೆ. ಆದರೆ ಪರವಾನಿಗೆ ಪಡೆದಿದ್ದರೂ ಆರಂಭ ಮಾಡುತ್ತಿಲ್ಲ ಎಂದು ಮದ್ಯ ಪ್ರಿಯರು ಹೋರಾಟ ಮಾಡಿದ್ದಾರೆ.
ಗ್ರಾಮದಲ್ಲಿ ಅಧಿಕೃತ ವಾಗಿ 30-40 ಕಡೆ ಮದ್ಯ ಮಾರಾಟ ಮಾಡಲಾಗುತ್ತಿದೆ. ನ್ಯಾಯಲಯ ಇಲ್ಲಿ ಬಾರ್ ಒಪನ್ ಮಾಡಲು ಆದೇಶಿಸಿದೆ. ಆದರೆ ಕೆಲವರ ವಿರೋಧದಿಂದಾಗಿ ಲಿಕ್ಕರ್ ಶಾಪ್ ಆರಂಭವಾಗುತ್ತಿಲ್ಲ. ಕುಡುಕರ ಬೇರೆ ಊರಿಗೆ ಹೋಗಿ ಬರಬೇಕಾಗಿದೆ. ಅನಧಿಕೃತ ಅಂಗಡಿಗಳಲ್ಲಿ ಅಧಿಕ ದರದಲ್ಲಿ ಮಾರಾಟವಾಗುತ್ತಿದೆ. ನಮಗೆ ಬಾರ್ ಅಂಗಡಿ ಬೇಕೆಂದು ಗ್ರಾಮಸ್ಥರು ಆಗ್ರಹಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ. ಈ ಕುರಿತು ಪರಿಶೀಲಿಸುವುದಾಗಿ ಹೇಳಿಕೆ ನೀಡಿದ್ದಾರೆ.