ಸುದ್ದಿಮೂಲವಾರ್ತೆ
ಕೊಪ್ಪಳ,ಅ.6: ಭಾರತ ಸರಕಾರ ಸರಕಾರವು ವ್ಯವಸಾಯ ಕೂಲಿಕಾರರನ್ನು ಭದ್ರತಾ ಯೋಜನೆಯನ್ನು ಒಳಪಡಿಸಬೇಕೆಂದು ಆಗ್ರಹಿಸಿ ಅ 9 ರಿಂದ 13 ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ವ್ಯವಸಾಯ ಕೂಲಿ ವೃತ್ತಿಪರ ಯೂನಿಯನ್ಯಲ್ಲಪ್ಪ ಮೇಗಳಕೇರಿ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಸಮಾಜಿಕ ಭದ್ರತಾ ಯೋಜನೆಯಲ್ಲಿ ವೃದ್ಯಾಪ್ಯರಿಗೆ 5000 ರೂಪಾಯಿ ನೀಡಬೇಕು. ಸಮಾಜಿಕ ಭದ್ರತೆ ಯೋಜನೆಯಲ್ಲಿ ಎಲ್ಲರಿಗೂ ಸೂರು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ 9 ರಂದು ಕುಷ್ಟಗಿ, ಅ 11 ರಂದು ಯಲಬುರ್ಗಾ ಹಾಗು ಅ ೧೩ ರಂದು ಕೊಪ್ಪಳದಲ್ಲಿ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ವ್ಯವಸಾಯ ಕೂಲಿಕಾರರಿಗೆ ತಿಂಗಳಲ್ಲಿ 20 ದಿನ ಕೆಲಸ ಸಿಗುತ್ತಿಲ್ಲ. ಇದಕ್ಕಾಗಿ ಉದ್ಯೋಗ ನೀಡಬೇಕು. ವ್ಯವಸಾಯ ಕೂಲಿಕಾರರ ನೊಂದಣಿ ಮಾಡಿ ಅವರಿಗೆ ಸರಕಾರ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.
ಇದೇ ವೇಳೆ ವಿಶ್ವ ಆಹಾರವಾದ ಅ 16 ರಂದು ಹಸಿವು ದಿನವನ್ನಾಚರಿಸಲು ತಾಲೂಕಾ ಕೇಂದ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಭೀಮಣ್ಣ ಲೇಬಗೇರಿ, ಕಾರ್ಯದರ್ಶಿ ಶಿವಶಂಕರ ಲಗಳೂರು, ಜ್ಯೋತಿ ಮೂರಲಮನಿ, ದೇವರಾಜ ಹಡಪದ