ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆ ವಿರೋಧಿಸಿ ದೇವಸೂಗೂರಿನ ಮೊದಲನೇ ಕ್ರಾಾಸ್ನ ಮತ್ತು ಯಾದವ್ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆ ಉಳಿಸಲು ವಿದ್ಯಾಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
ತಾಲೂಕಿನ ದೇವಸೂಗೂರಿನ ಎರಡೂ ಶಾಲೆಗಳಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪೋಷಕರು, ವಿದ್ಯಾಾರ್ಥಿಗಳು ಶಾಲೆಗಳ ಮುಚ್ಚುವ ಅಥವಾ ವಿಲೀನಗೊಳಿಸದಂತೆ ಆಗ್ರಹಿಸಿದರು.
ಗ್ರಾಾಮಗಳ ಸರ್ಕಾರಿ ಶಾಲೆಗಳನ್ನು ಮುಚ್ಚಿಿ ದೇವಸೂಗೂರು ಮ್ಯಾಾಗ್ನೆೆಟ್ ಶಾಲೆಗೆ ಸೇರಿಸಿ ಮಕ್ಕಳನ್ನು ದೂರದ ಶಾಲೆಗೆ ಕಳುಹಿಸಲಾಗುತ್ತದೆ. ಉಚಿತ ಬಸ್ ಸೌಲಭ್ಯ ಹೊರೆ ಎಸ್ಡಿಎಂಸಿಗೆ ವಹಿಸಿ ಮ್ಯಾಾಗ್ನೆೆಟ್ ಶಾಲೆಯ ನಿರ್ವಹಣೆ ಹೊರಗುತ್ತಿಿಗೆ ನೀಡಲಾಗುತ್ತಿಿದೆ. ಕ್ರಮೇಣವಾಗಿ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಿ ಬಡ ಮಕ್ಕಳನ್ನು ಶಾಶ್ವತವಾಗಿ ದೂರ ತಳ್ಳುವ ಹುನ್ನಾಾರ ಮಾಡುತ್ತಿಿರುವ ಸರ್ಕಾರದ ನಡೆ ಖಂಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷ ಹಯ್ಯಾಾಳಪ್ಪಘಿ, ಏರಿಯಾದ ಬಹುತೇಕ ಕಾರ್ಮಿಕ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆೆ ಈ ಸರ್ಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ. ಶಾಲೆ ಮುಚ್ಚಿಿ ಒಂದೂವರೇ ಕಿಲೋಮೀಟರ್ ದೂರದ ದೇವಸುಗೂರಿನ ಕೆಪಿಎಸ್ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಅಸಾಧ್ಯ.
ಎರಡೂ ಶಾಲೆಗಳಲ್ಲೂ 172 ಮಕ್ಕಳಿದ್ದೂ ಅವರ ಶಿಕ್ಷಣದ ಹಕ್ಕು ಕಸಿಯುವ ಹುನ್ನಾಾರ ಮಾಡಬಾರದು ಎಂದು ಒತ್ತಾಾಯಿಸಿದರು.
ಶಿಕ್ಷಣ ಸಚಿವರು ಮಾಧ್ಯಮಗಳ ಮುಂದೆ ಶಾಲೆ ಮುಚ್ಚಲ್ಲ ಎಂದು ಸುಳ್ಳು ಹೇಳುತ್ತಿಿದ್ದಾರೆ. ಅತ್ತ ಇಲಾಖೆಯಿಂದ ಶಾಲೆ ಮುಚ್ಚುವ ಆದೇಶ ಮತ್ತು ಪಟ್ಟಿಿಗಳನ್ನು ಬಿಡುಗಡೆ ಮಾಡುತ್ತಿಿರುವುದು ಸರ್ಕಾರದ ಬಡವರಿಂದ ಶಿಕ್ಷಣ ಕಸಿಯುವ ಖಾಸಗೀಕರಣದ ಹುನ್ನಾಾರ ಎಂದು ಆಪಾದಿಸಲಾಯಿತು.
ಸರ್ಕಾರಿ ಶಾಲೆ ಮುಚ್ಚಿಿದರೆ ನಮ್ಮ ಮನೆ ಬಾಗಿಲು ಮುಚ್ಚಿಿದಂತೆ ಯಾವುದೇ ಕಾರಣಕ್ಕೂ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಮುಂಜಾನೆಯೇ ಕಾರ್ಖಾನೆಗಳಲ್ಲಿ ದುಡಿಯಲು ಹೋಗುತ್ತೇವೆ ಪಕ್ಕದ ಊರಿಗೆ ನಮ್ಮ ಮಕ್ಕಳನ್ನು ಕಳುಹಿಸಲು ಆಗುವುದಿಲ್ಲ ಸರ್ಕಾರ ಶಾಲೆ ಯನ್ನು ಮುಚ್ಚಬಾರದು ಹಾಗೇನಾದ್ರೂ ಮುಚ್ಚಲು ಬಂದ್ರೆೆ ನಮ್ಮ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತ ಎಂದು ಪೋಷಕರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್, ನಂದಗೋಪಾಲ, ಎಸ್ಡಿಎಂಸಿ ಅಧ್ಯಕ್ಷ ಹಲ್ಲಪ್ಪ, ಉಪಾಧ್ಯಕ್ಷ ಬಸನಗೌಡ, ಸದಸ್ಯರಾದ ವೆಂಕಟೇಶ್ , ವೀರೇಶ್ , ಹಳೆ ವಿದ್ಯಾಾರ್ಥಿಗಳ ಸಂಘಟನೆಯ ಅಧ್ಯಕ್ಷ ಮಂಜುನಾಥ್ ಊರಿನ ಹಿರಿಯರಾದ ಲಾಜರ್ , ಊರಿನ ಹಿರಿಯರು, ಪೋಷಕರು, ಯುವಕರು ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ದೇವಸೂಗೂರಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ಯಾದವ್ ನಗರ, 1ನೇ ಕ್ರಾಾಸ್ ಶಾಲೆ ವಿಲೀನಕ್ಕೆ ವಿರೋಧ

