ಸುದ್ದಿಮೂಲ ವಾರ್ತೆ ಬೆಂಗಳೂರು, ಜ.01:
ಮನೆಗಾಗಿ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ರಾಜೀವ್ ಗಾಂಧಿ ವಸತಿ ನಿಗಮ ಇನ್ನು ಮನೆಗಳನ್ನು ಹಂಚಿಕೆ ಮಾಡಿಲ್ಲ ಎಂದು ಆಗ್ರಹಿಸಿ ನೂರಾರು ಮಂದಿ ಅರ್ಜಿದಾರರು ನಿಗಮದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
2017ರಲ್ಲಿ ನಿಗಮಕ್ಕೆೆ ಅರ್ಜಿ ಸಲ್ಲಿಸಲಾಯಿತು. ಬಳಿಕ 2020ರಲ್ಲಿ ಒಂದು ಲಕ್ಷ ರೂ. ಮುಂಗಡ ಹಣವನ್ನು ಪಾವತಿ ಮಾಡಲಾಯಿತು. ಇದಕ್ಕಾಾಗಿ ಹಣ ಸಾಲ ಮಾಡಿಕೊಂಡಿದ್ದೇವೆ. ಆದರೆ ಈವರೆಗೆ ನಿಗಮ ಇನ್ನೂ ಮನೆಗಳನ್ನು ಹಂಚಿಕೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋೋಶ ವ್ಯಕ್ತಪಡಿಸಿದರು.
ನಮಗೆ ಮನೆ ಹಂಚಿಕೆ ಮಾಡಿ ಕೀ ಕೊಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನಿಗಮದ ಎಂಡಿ ಪ್ರತಿಭಟನಾಕಾರರ ಮನವೊಲಿಸಿದರು. ಶೀಘ್ರದಲ್ಲೇ ಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದರು.
ಬಾಕ್ಸ್
ನಿರಾಶ್ರಿತರಿಗೆ ಸದ್ಯಕ್ಕೆೆ ಮನೆಗಳ ಹಂಚಿಕೆ ಇಲ್ಲ
ಕೋಗಿಲು ಲೇಔಟ್ನಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಿಗೆ ಸದ್ಯಕ್ಕೆೆ ನಿಗಮ ಮನೆ ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರ ಮನೆ ನೀಡುವಂತೆ ಸೂಚಿಸಿದ್ದರೂ ಗ್ರೇಟರ್ ಬೆಂಗಳೂರು ಪ್ರಾಾಧಿಕಾರದಿಂದ ಯಾರಿಗೆ ಮನೆ ಹಂಚಿಕೆ ಮಾಡಬೇಕು ಎನ್ನುವ ಪಟ್ಟಿಿ ಇನ್ನು ಬಂದಿಲ್ಲ. ಹೀಗಾಗಿ ಪಟ್ಟಿಿ ಕಳುಹಿಸಿಕೊಡುವಂತೆ ಜಿಬಿಎ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

