ಸುದ್ದಿಮೂಲವಾರ್ತೆ
ಕೊಪ್ಪಳ,ಅ.24: ಅಳವಂಡಿ ಬೆಟಗೇರಿ ಏತ ನೀರಾವರಿಗಾಗಿ ಭೂ ಕಳೆದುಕೊಂಡ ರೈತರಿಗೆ ಭೂ ಪರಿಹಾರ ನೀಡಲು ವಿಳಂಭ ಮಾಡುತ್ತಿರುವದನ್ನು ವಿರೋಧಿಸಿ ಅ 26 ರಂದು ಅಳವಂಡಿ ನಾಡ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅಳವಂಡಿ- ಬೆಟಗೇರಿ ಏತ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಶರಣಪ್ಪ ಜಡಿ ಹೇಳಿದ್ದಾರೆ.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ 2017 ರಲ್ಲಿ ಯೋಜನೆ ಆರಂಭವಾಗಿದ್ದು. ಯೋಜನೆಗಾಗಿ ಒಟ್ಟು 131 ಎಕರೆ ಭೂಮಿಯನ್ನು ಸ್ವಾದೀನ ಪಡಿಸಿಕೊಂಡಿದ್ದಾರೆ. ಅದರೆ ಅಲ್ಲಿಂದ ಇಲ್ಲಿ ಪರಿಹಾರ ನೀಡಿಲ್ಲ. ಸರಕಾರ ಯೋಜನೆ ಆರಂಭಿಸುತ್ತದೆ. ಆದರೆ ರೈತರಿಗೆ ಮಾಹಿತಿ ಇಲ್ಲದೆ ಭೂಮಿ ಸ್ವದೀನ ಪಡಿಸಿಕೊಂಡು ಆಮೇಲೆ ಮರೆತು ಬಿಡುತ್ತಾರೆ. ಈ ಯೋಜನೆಯಲ್ಲಿ ಕಾಮಗಾರಿಯನ್ನು ಮಾಡಿ ಬಿಲ್ ತೆಗೆದುಕೊಂಡು ಹೋಗುತ್ತಾರೆ. ಈ ಯೋಜನೆಗೆ ಕಳೆದ ವರ್ಷ 10.50 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಆದರೆ ಅಧಿಕಾರಿಗಳಿಗೆ ಕಾಲಹರಣ ಮಾಡುತ್ತಾ ಹೋಗಿದ್ದಾರೆ. ಕಚೇರಿಗೆ ಅಲೆದು ಸುಸ್ತಾಗಿ ಹೋಗಿದೆ. ಈಗ ಬೇಸತ್ತು ನಾವು ಅನಿವಾರ್ಯವಾಗಿ ಹೋರಾಟ ಮಾಡಲು ಸಿದ್ದವಾಗಿದ್ದೇನೆ.
ಈಗ ಬರಗಾಲ ಈ ಸಂದರ್ಭದಲ್ಲಿ ಪರಿಹಾರ ಹಣ ನೀಡಿದರೆ ಅನುಕೂಲವಾಗುತ್ತದೆ. ಅಧಿಕಾರಿಗಳಿಗೆ ಅನುದಾನ ಬಂದರೂ ಇಲ್ಲಿಯವರೆಗೂ ಹಣ ನೀಡಲು ಅನುದಾನ ಹಂಚಿಕೆಯಾಗಿಲ್ಲ. ಅಧಿಕಾರಿಗಳ ಧೋರಣೆ ರೈತರಿಗೆ ನಿರಾಸೆ ಮೂಡಿಸಿದೆ ಎಂದರು.
ಕಾಮಗಾರಿ ಮಾಡಿದ್ದ ನೀರಾವರಿಯೂ ಇಲ್ಲ. ಪರಿಹಾರವಿಲ್ಲ. ಕಳಪೆ ಕಾಮಗಾರಿಯಿಂದ ರೈತರಿಗೆ ಲಾಭಕ್ಕಿಂತ ಹೆಚ್ಚು ನಷ್ಟವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಗೌರವಾದ್ಯಕ್ಷಜಗನ್ನಾಥ ದಾಸರಡ್ಡಿ. ಬಸವರಡ್ಡಿ ಮೂಲಿಮನಿ, ವೀರಣ್ಣ ಶೆಟ್ಟರ, ಚಂದ್ರಪ್ಪ ಜಂತ್ಲಿ. ಇದ್ದರು.