ಸುದ್ದಿಮೂಲ ವಾರ್ತೆ ಬೀದರ, ನ.23:
ಜಿಲ್ಲೆಯ ಹಾಲಹಳ್ಳಿಿ(ಕೆ) ಗ್ರಾಾಮದ ಸರ್ವೇ ನಂ-9 ರಲ್ಲಿ 12 ಎಕರೆ 18 ಗುಂಟೆ ಹಾಗೂ ಸರ್ವೇ ನಂ-10ರಲ್ಲಿ 310 ಎಕರೆ ಭೂಮಿಯನ್ನು ಬೀದರ ವಿಶ್ವವಿದ್ಯಾಾಲಯಕ್ಕೆೆ ಮಂಜೂರಿಯಾಗಿದ್ದು, ಭೂಮಿ ಅತಿಕ್ರಮಣ ಯತ್ನ ನಡೆಯುತ್ತಿಿರುವ ಹಿನ್ನಲೆ ವಿವಿ ಸುತ್ತಮುತ್ತ ಕಂಪೌಂಡ್ ವಾಲ್ ನಿರ್ಮಿಸುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋೋಟ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖುಬಾ ತಿಳಿಸಿದ್ದಾರೆ.
ಕಾಣದ ಕೈಗಳು ಸದರಿ ಭೂಮಿಯಲ್ಲಿ ಅತಿಕ್ರಮಣ ಮಾಡಿಕೊಂಡಿದ್ದು, ವಿಶ್ವವಿದ್ಯಾಾಲಯದ ಜಮೀನನ್ನು ಕಬಳಿಸುವ ಪ್ರಯತ್ನ ಮಾಡುತ್ತಿಿವೆ. ಹಾಗಾಗಿ, ವಿಶ್ವವಿದ್ಯಾಾಲಯದ ಭೂಮಿಯನ್ನು ಸಂರಕ್ಷಿಸಲು ಕಂಪೌಂಡ ವಾಲ್ ನಿರ್ಮಿಸಲು ಕಲ್ಯಾಾಣ ಕರ್ನಾಟಕ ಪ್ರದೇಶಾಭಿವೃದ್ದಿ ನಿಧಿಯಡಿ ರೂ.30 ಕೋಟಿ ಅನುದಾನ ನೀಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಈಗಾಗಲೆ ಬೀದರ ವಿಶ್ವವಿದ್ಯಾಾಲಯದ ಕುಲಸಚಿವರು (ಆಡಳಿತ) ಭೂದಾಖಲೆಗಳ ಇಲಾಖೆಯವರಿಗೆ, ಭಾಲ್ಕಿಿ ತಹಸಿಲ್ದಾಾರರಿಗೆ ಹಾಗೂ ಸಹಾಯಕ ಆಯುಕ್ತರು ಬಸವಕಲ್ಯಾಾಣ ರವರಿಗೆ ಸರ್ವೇ ಮಾಡಿ, ಜಾಗದ ಗಡಿ ಗುರುತಿಸಿ ಕೊಡಲು ನಿರಂತರವಾಗಿ ಎರಡು ವರ್ಷಗಳಿಂದ ಮನವಿ ಮಾಡಿದ್ದರೂ ಸರ್ವೇಕಾರ್ಯ ಪೂರ್ಣಗೊಂಡಿರುವುದಿಲ್ಲ. ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಮತ್ತು ಪ್ರಭಾವಿಗಳ ಒತ್ತಡ ಇರುವುದರಿಂದ ಅಧಿಕಾರಿಗಳು ಈ ಸರ್ವೆ ಕಾರ್ಯಕ್ಕೆೆ ಹಿಂದೇಟು ಹಾಕುತ್ತಿಿದ್ದಾರೆ, ಈ ವಿಷಯವು ರಾಜ್ಯಪಾಲರ ಸಹ ಗಮನಕ್ಕೆೆ ತಂದಿದ್ದು, ಜಿಲ್ಲಾಧಿಕಾರಿ ಬೀದರರವರಿಗೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ಗಡಿ ಗುರುತಿಸುವಂತೆ ಹಾಗೂ ಅತಿಕ್ರಮಣವಾಗಿರುವುದನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಪತ್ರಿಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಬೀದರ್ ವಿವಿ ಕಂಪೌಂಡ್ ವಾಲ್ ನಿರ್ಮಾಣಕ್ಕೆ ಅನುದಾನ ಕಲ್ಪಿಸಿ’

