ಸುದ್ದಿಮೂಲ ವಾರ್ತೆ ರಾಯಚೂರು, ಡಿ.11:
ರಾಯಚೂರು ತಾಲೂಕಿನ ಮಟಮಾರಿಯ ತೇರಿನ ಬೀದಿಯ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ನೀರಿನ ಅನುಕೂಲ ಮಾಡಿಕೊಡಲು ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ ಜಿ.ಬಸವರಾಜ ನಾಯಕ ಒತ್ತಾಾಯಿಸಿದ್ದಾಾರೆ.
ಈ ಕುರಿತು ಜಿ.ಪಂ ಸಿಇಓ ಅವರಿಗೆ ಮನವಿ ಮಾಡಿರುವ ಅವರು, ಈ ವರ್ಷ ಜನವರಿಯಲ್ಲಿ ಸುತ್ತಮುತ್ತಲ ಹಳ್ಳಿಿಗಳಿಗೆ ಬಹುದೊಡ್ಡ ಜಾತ್ರೆೆ ನಡೆಯಲಿದ್ದು ಊರಿಗೆ ಬರುವ ಸಂಬಂಧಿಕರಿಗೆ ಕುಡಿಯಲು, ಬಳಸಲು ನೀರಿಗಾಗಿ ಪರದಾಡುವ ಸ್ಥಿಿತಿ ಬಂದಿದೆ. ತಕ್ಷಣ ತೇರಿನ ಬೀದಿಯಲ್ಲಿರುವ 200 ಕುಟುಂಬಗಳಿಗೆ ಕುಡಿಯುವ ನೀರು ಶೀಘ್ರ ಒದಗಿಸಲು ಕ್ರಮ ವಹಿಸಲು ಒತ್ತಾಾಯಿಸಿದ್ದಾಾರೆ.

