ಸುದ್ದಿಮೂಲ ವಾರ್ತೆ ಸಿರವಾರ, ಜ.11:
ಪಟ್ಟಣದ ಸರಕಾರಿ ಬಾಲಕರ ಪ್ರೌೌಢಶಾಲೆಯಲ್ಲಿ ಪದವಿ ಪೂರ್ವ ವಿದ್ಯಾಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ಸ್ಥಳಾಂತರ ಮಾಡಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಯಂಕಪ್ಪ ನಾಯಕ ಗುಜ್ಕಲ್, ಕುಮಾರ ಭಜಂತ್ರಿಿ ಒತ್ತಾಾಯಿಸಿದರು.
ರವಿವಾರ ಸುದ್ದಿಗಾರರೂಂದಿಗೆ ಮಾತನಾಡಿ ಬಿಸಿಎಂ ಇಲಾಖೆಯ 3 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆೆ ಯಾವುದೇ ಅಡ್ಡಿಿಯಿಲ್ಲ ಆದರೆ ಈಗ ಗುರುತು ಮಾಡಿದ ಸ್ಥಳದಲ್ಲಿ ಬಿಟ್ಟು ಮುಖ್ಯ ದ್ವಾಾರದ ಎಡ ಭಾಗದಲ್ಲಿ ಹಳೆಯ ಕಟ್ಟಡಗಳನ್ನು ತೆರವುಮಾಡಿ ನಿರ್ಮಿಸಿ ಈಗ ಗುರುತಿಸಿದ ಸ್ಥಳದಲ್ಲಿ ವಿಜ್ಞಾನ ವಿಭಾಗದ ಕಾಲೇಜು ಇದ್ದು ಮಹಿಳಾ ವಿದ್ಯಾಾರ್ಥಿಗಳಿಗೆ ತೊಂದರೆಯಾಗುತ್ತದೆ. ಪ್ರೌೌಢಶಾಲೆಯ ವಿದ್ಯಾಾರ್ಥಿಗಳಿಗೆ ಆಟಕ್ಕೆೆ ಮೈದಾನ, ಯಾವುದೇ ಸಭೆ ಸಮಾರಂಭಗಳಿಗೆ ತೊಂದರೆಯಾಗುತ್ತದೆ ಎಂದರು.
ಸಿರವಾರ ಪಟ್ಟಣದಲ್ಲಿ ಸ್ಥಳದ ಅಭಾವ ಇದೆ. ಶಾಲೆಯಲ್ಲಿ ಮಕ್ಕಳಿಗೆ ಆಟ, ಪಾಠ, ಚಟುವಟಿಕೆಗಳಿಗೆ ಸ್ಥಳದಲ್ಲಿ ಕೊರತೆಯಾಗುತ್ತದೆ. ಭೂ ದಾನಿಗಳ ಕುಟುಂಬದವರು ಹಾಗೂ ಹಳೆಯ ವಿದ್ಯಾಾರ್ಥಿಗಳ ಸಂಘಟನೆಗಳು ವಸತಿ ನಿಲಯ ನಿರ್ಮಾಣಕ್ಕೆೆ ವಿರೋಧ ವ್ಯಕ್ತಪಡಿಸಿ ಪತ್ರ ನೀಡಿದ್ದು, ಬಿಸಿಎಂ ಜಿಲ್ಲಾ ಮಟ್ಟದ ಅಧಿಕಾರಿಗಳು ಅದನ್ನು ಪರಿಗಣಿಸಿ ಸ್ಥಳಾಂತರ ಮಾಡಬೇಕು, ಬಿಸಿಎಂ ಇಲಾಖೆಯ ಹಾಗೂ ಗುತ್ತೆೆದಾರರು ವಸತಿಯ ನಿರ್ಮಾಣಕ್ಕೆೆ ಮುಂದಾದರೆ ನಮ್ಮ ಸಂಘಟನೆಯ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
‘ಪಿಯು ವಸತಿ ನಿಲಯ ನಿರ್ಮಾಣ ನಿಗದಿ ಸ್ಥಳ ಸರಿಯಿಲ್ಲ’

